/newsfirstlive-kannada/media/post_attachments/wp-content/uploads/2025/03/teju.jpg)
ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು.. ನಿಮ್ಮ ಮಡಿಲೊಳಗಿರಲು ತಂದಿರುವೆವು ಕೊಳಿರೀ.. ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲು ಒಪ್ಪಿಸುವೆವು.. ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ ಎಂಬ ಹಾಡಿನಂತೆ ಹೆತ್ತವರು ತಮ್ಮ ಮನೆಯಲ್ಲಿ ಬೆಳೆದ ಮಗಳನ್ನು ಗಂಡನ ಮನೆಗೆ ಕಳಿಸುವ ಆ ಭಾವನಾತ್ಮಕ ಕ್ಷಣಕ್ಕೆ ಈ ದೃಶ್ಯ ಸಾಕ್ಷಿಯಾಗಿದೆ.
ಗಂಡ ಯಾವ ಊರಿನ ರಾಜನಾದರೇನು.. ಹೆಣ್ಣಿಗೆ ತವರೂರೆ ಸ್ವರ್ಗ. ಹೊಸದೊಂದು ನಂಬಿಕೆಯೊಂದಿಗೆ ತನ್ನದಲ್ಲದ ಊರಿನಲ್ಲಿ, ತನ್ನವರಲ್ಲದವರನ್ನೇ ಬಂಧು ಬಳಗವನ್ನಾಗಿಸಿಕೊಂಡು.. ಎಲ್ಲರನ್ನು ಕರುಳ ಬಳ್ಳಿಗಳಂತೆ ಸಲುವುವವಳು ಹೆಣ್ಣು ಸಂಸದ ತೇಜಸ್ವಿ ಸೂರ್ಯ ಅವರ ಮದುವೆಯ ಅವಿಸ್ಮರಣೀಯ ಕ್ಷಣವಿದು.. ಹೌದು, ಮೊನ್ನೆಯಷ್ಟೇ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಶಿವಶ್ರೀ ಸ್ಕಂದ ಪ್ರಸಾದ್ ಜೊತೆಗೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇದನ್ನೂ ಓದಿ: ತೇಜಸ್ವಿ ಸೂರ್ಯ-ಶಿವಶ್ರೀ ಅದ್ಧೂರಿ ರಿಸೆಪ್ಶನ್; ಯಾರೆಲ್ಲಾ ಭಾಗಿ.. ಫೋಟೋಸ್ ಇಲ್ಲಿವೆ!
ಗುರು ಹಿರಿಯರ ಸಮ್ಮುಖದಲ್ಲಿ ಶಿವಶ್ರೀ ಸ್ಕಂದ ಹಾಗೂ ಸಂಸದ ತೇಜಸ್ವಿ ಸೂರ್ಯ ಇಬ್ಬರು ಈಗ ಸತಿ-ಪತಿಗಳಾಗಿದ್ದಾರೆ. ಇನ್ನೂ, ಶಿವಶ್ರೀ ಸ್ಕಂದ ಹೆಣ್ಣೊಪ್ಪಿಸುವ ಶಾಸ್ತ್ರದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.
ವೈರಲ್ ಆಗಿರೋ ವಿಡಿಯೋದಲ್ಲಿ ಏನಿದೆ?
ಶಿವಶ್ರೀ ಸ್ಕಂದ ಅವರ ಪೋಷಕರು ಹೆಣ್ಣೊಪ್ಪಿಸುವ ಶಾಸ್ತ್ರವನ್ನು ಮಾಡುತ್ತಿದ್ದರು. ಆಗ ಶಿವಶ್ರೀ ತಂದೆ ತಾಯಿ ತೇಜಸ್ವಿ ಸೂರ್ಯ ಮಡಿಲ ಮೇಲೆ ಕೂರಿಸುತ್ತಾರೆ. ಆಗ ಶಿವಶ್ರೀ ಭಾವುಕರಾಗುತ್ತಾರೆ. ಇದನ್ನು ಗಮನಿಸಿದ ತೇಜಸ್ವಿ ಅವರು ಶಿವಶ್ರೀ ಕಣ್ಣೀರನ್ನು ಒರೆಸಿ, ಮುತ್ತು ಕೊಟ್ಟು ಸಮಾಧಾನ ಮಾಡುತ್ತಾರೆ. ತೇಜಸ್ವಿ ಸೂರ್ಯ ಅವರು ಪತ್ನಿಯನ್ನು ಸಂತೈಸುವ ವಿಡಿಯೋ ಈಗ ಸೋಶಿಯಲ್ ಮೀಡಿಯಾ ತುಂಬಾ ವೈರಲ್ ಆಗ್ತಿದೆ.
View this post on Instagram
ಮಾರ್ಚ್ 6ರಂದು ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ದಂಪತಿ ಮದುವೆಯಾಗಿದ್ದರು. ಇದಾದ ಬಳಿಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಸ್ಕಂದ ಪ್ರಸಾದ್ ಅವರ ಆರತಕ್ಷತೆ ವಿಜೃಂಭಣೆಯಿಂದ ನಡೆದಿತ್ತು. ಆಗ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು, ಸಿನಿಮಾ ತಾರೆಯರು ಭಾಗವಹಿಸಿ ನವದಂಪತಿಗಳಿಗೆ ಶುಭಹಾರೈಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ