newsfirstkannada.com

×

ಇಂದು ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ; ವಿವಾದಕ್ಕೆ ದಾರಿಮಾಡಿಕೊಟ್ಟ Whatsapp ಚಾಟ್​..!

Share :

Published April 4, 2024 at 9:18am

    ಕಾಲೇಜು ಗ್ರೂಪ್​​ಗೆ ಹೋಗಿರುವ ಮೆಸ್ಸೇಜ್​​ನಲ್ಲಿ ಏನಿದೆ..?

    knownGhost ಎಂಬ ಟ್ವಿಟರ್​ನಲ್ಲಿ ಹಂಚಿಕೊಂಡ ಮಾಹಿತಿ ಏನು?

    ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಹಾಲಿ ಸಂಸದ ತೇಜಸ್ವಿ ಸೂರ್ಯ ಇಂದು ಉಮೇದುವಾರಿಕೆ ಸಲ್ಲಿಸ್ತಿದ್ದಾರೆ. ಇದೇ ಹೊತ್ತಲ್ಲಿ, ಅವರ ಕುರಿತ ವಾಟ್ಸ್​ಆ್ಯಪ್ ಚಾಟ್​ವೊಂದು ವಿವಾದ ಎಬ್ಬಿಸಿದೆ.

ಏನಿದು ವಿವಾದ..?
ನಿನ್ನೆ ರಾತ್ರಿ 9 ಗಂಟೆ 6 ನಿಮಿಷಕ್ಕೆ knownGhost ಎಂಬ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ವಾಟ್ಸ್​ಆ್ಯಪ್ ಚಾಟ್​​ಗಳನ್ನು ಹೊಂದಿರುವ ನಾಲ್ಕು ಫೋಟೋಗಳನ್ನು ಅಪ್​ಲೋಡ್ ಮಾಡಲಾಗಿದೆ. ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಮೆರವಣಿಗೆ ನಡೆಯಲಿದೆ. ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ಜಯನಗರದ ಮೈಯಾಸ್ ಹೋಟೆಲ್ ಬಳಿ ಸೇರಬೇಕು. ಅಲ್ಲಿ ನಿಮಗೆ ಟಿ-ಶರ್ಟ್ ನೀಡಲಾಗುವುದು, ತಡ ಮಾಡಬಾರದು. ಕಡ್ಡಾಯವಾಗಿ ಇದರಲ್ಲಿ ಭಾಗವಹಿಸಬೇಕು. ಯಾವುದೇ ವಿನಾಯಿತಿಯನ್ನು ನೀಡಲಾಗುವುದಿಲ್ಲ. ಇದಕ್ಕಾಗಿ ನೀವು ಹಾಜರಾತಿ ಪಡೆಯುತ್ತೀರಿ ಎಂದಿರುವ ಮೆಸೇಜ್ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: 10, 20 ಕೋಟಿ ಅಲ್ಲವೇ ಅಲ್ಲ.. ಕರ್ನಾಟಕದ ಈ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 98.52 ಕೋಟಿ ಮೌಲ್ಯದ ಮದ್ಯ ಜಪ್ತಿ..!

ಈ ವಿಚಾರಗಳನ್ನು ಪೋಸ್ಟ್ ಮಾಡಿರುವ knownGhost, ಹಾಯ್, ಇದು ಬೆಂಗಳೂರಿನ ವಿವಿರಂನ ಜೈನ್ ಕಾಲೇಜಿನ ವಿದ್ಯಾರ್ಥಿ. ನಮಗೆ ತೇಜಸ್ವಿ ಸೂರ್ಯ ಅವರ ನಾಮಿನೇಷನ್ ಱಲಿಯಲ್ಲಿ ಭಾಗಿಯಾಗುವಂತೆ ಕೇಳಿಕೊಳ್ಳಲಾಗುತ್ತಿದೆ. ಇವು ನಮ್ಮ ಕಾಲೇಜಿನ ವಾಟ್ಸ್​ಆ್ಯಪ್​​ ಗ್ರೂಪ್​ಗೆ ಕಳುಹಿಸಿರುವ ಸ್ಕ್ರೀನ್​ಶಾಟ್ಸ್​ಗಳಾಗಿವೆ. ವಿದ್ಯಾರ್ಥಿ ಪರಿಷತ್ ಅಧ್ಯಕ್ಷರು, ಱಲಿಗೆ ಬರದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೆದರಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಆರೋಪ ಏನು..?

ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ವೈರಲ್ ಆಗ್ತಿದ್ದಂತೆಯೇ, ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಕಡ್ಡಾವಾಗಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದ್ಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ವಾಟ್ಸ್​ಆ್ಯಪ್ ಸಂದೇಶ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಮತ್ತೊಂದು ದುರಂತ; ತೀವ್ರ ಸ್ಫೋಟಕ್ಕೆ ಐವರು ಸ್ಥಳದಲ್ಲೇ ಸಾವು

https://twitter.com/uniqexplorer99/status/1775547908571746725

ಇದನ್ನೂ ಓದಿ: RCB ಹುಡುಗರ ಅತೀ ದೊಡ್ಡ ದಾಖಲೆ ಧೂಳಿಪಟ ಮಾಡಿದ ಕೆಕೆಆರ್​; ಏನದು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ; ವಿವಾದಕ್ಕೆ ದಾರಿಮಾಡಿಕೊಟ್ಟ Whatsapp ಚಾಟ್​..!

https://newsfirstlive.com/wp-content/uploads/2024/04/TEJASWI-SURYA.jpg

Load More