/newsfirstlive-kannada/media/post_attachments/wp-content/uploads/2025/01/MANOHAR-LAL-KHATTAR.jpg)
ನಮ್ಮ ಬೆಂಗಳೂರಿನ ಬಹುಕಾಲದ ಬೇಡಿಕೆ ಈಡೇರುವ ಕಾಲ ಹತ್ತಿರವಾಗಿದೆ. ಬೆಂಗಳೂರಿನ ಮೆಟ್ರೋ ಯೆಲ್ಲೋ ಲೈನ್‌ಗೆ ಮೊದಲ ಮೆಟ್ರೋ ರೈಲು ಇಂದು BMRCLಗೆ ಹಸ್ತಾಂತರ ಮಾಡಲಾಗಿದೆ. ಶೀಘ್ರದಲ್ಲೇ ಜಯನಗರದ R.V ರಸ್ತೆಯಿಂದ ಬೊಮ್ಮಸಂದ್ರದವರೆಗೆ ಯೆಲ್ಲೋ ಲೇನ್ ಸಂಚಾರ ಆರಂಭ ಮಾಡುವ ಸಿದ್ಧತೆ ಜೋರಾಗಿದೆ.
/newsfirstlive-kannada/media/post_attachments/wp-content/uploads/2025/01/Bangalore-Yellow-Namm-Metro-2.jpg)
ಈ ಕಾರ್ಯಕ್ರಮದ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯರನ್ನು ಕೇಂದ್ರ ಸಚಿವ ಮನೋಹರಲಾಲ್ ಖಟ್ಟರ್ ಹೊಗಳಿದ್ದಾರೆ. ತೇಜಸ್ವಿ ಸೂರ್ಯ ಬೆಂಗಳೂರು ಮೆಟ್ರೋ ಮಿತ್ರ ಎಂದಿದ್ದಾರೆ. ಸ್ವದೇಶಿ ನಿರ್ಮಿತ ಟ್ರೈನ್ ಹಸ್ತಾಂತರ ಮಾಡುವ ವೇಳೆ ಮಾತನಾಡಿದ ಮನೋಹರ್​ಲಾಲ್ ಖಟ್ಟರ್. ಬೆಂಗಳೂರು ಮೆಟ್ರೋ ಅಭಿವೃದ್ಧಿಗಾಗಿ ಸಂಸದ ತೇಜಸ್ವಿ ಸೂರ್ಯ ನಿಜಕ್ಕೂ ಅದ್ಭುತ ಶ್ರಮವನ್ನು ಹಾಕುತ್ತಿದ್ದಾರೆ. ನಿಜಕ್ಕೂ ಇದೊಂದು ಟೀಮ್ ವರ್ಕ್ ನಿಜ. ಆದ್ರೆ ಯಾವಾಗ ಒಂದು ತಂಡ ತೇಜಸ್ವಿ ಸೂರ್ಯನಂತಹ ಸಂಸದನ್ನೊಳಗೊಂಡಿರುತ್ತದೆಯೋ ಅದು ಇನ್ನೂ ಅದ್ಭುತವಾಗಿರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಗುಡ್ ನ್ಯೂಸ್.. R.V ರಸ್ತೆಯಿಂದ ಬೊಮ್ಮಸಂದ್ರ ಯೆಲ್ಲೋ ಲೇನ್‌ಗೆ ಬಂತು ಮೊದಲ ರೈಲು!
ಬೆಂಗಳೂರಿನಲ್ಲಿ ಮೆಟ್ರೊ ನಿರ್ಮಾಣಕ್ಕೆ ಒಂದು ವೇಗ ಸಿಕ್ಕಿದೆ. ಮೆಟ್ರೊಗೆ ಸಂಬಂಧಿಸಿದ ಕೆಲಸಗಳು ಅತ್ಯಂತ ವೇಗವಾಗಿ ಆಗುತ್ತಿವೆ. ಅದಕ್ಕೆ ನನ್ನ ಯುವ ಸಹೋದ್ಯೋಗಿ ತೇಜಸ್ವಿ ಸೂರ್ಯ ಅವರ ಕೊಡುಗೆ ತುಂಬಾನೇ ಇದೆ. ಅವರ ನಿರಂತರ ಶ್ರಮದಿಂದಾಗಿ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ಹೀಗಾಗಿಯೇ ನಾನು ಅವರನ್ನು ಬೆಂಗಳೂರು ಮೆಟ್ರೋ ಮಿತ್ರ ಎಂದು ಕರೆಯುತ್ತೇನೆ ಎಂದು ಮನೋಹರ್​ಲಾಲ್ ಖಟ್ಟರ್ ಹೇಳಿದ್ದಾರೆ.
ಇದನ್ನೂ ಓದಿ:ರೈಲ್ವೆ ಇಲಾಖೆಯಿಂದ ಗುಡ್​ನ್ಯೂಸ್; ಬೃಹತ್ ಮಟ್ಟದಲ್ಲಿ ಉದ್ಯೋಗ ನೇಮಕಾತಿ.. SSLC ಮುಗಿಸಿದ್ರೆ ಸಾಕು
ನಮ್ಮ ಮೆಟ್ರೋನ ಹಳದಿ ಲೈನ್ ಒಟ್ಟು 18.8 ಕೀಲೋ ಮೀಟರ್​ ಪ್ರಯಾಣ ಪೂರೈಸುತ್ತದೆ. ಆರ್​ವಿ ರೋಡ್​ನಿಂದ ಶುರುವಾಗಿ ಬೊಮ್ಮಸಂದ್ರ ತಲುಪುವವರೆಗೂ ಒಟ್ಟು 16 ಮೆಟ್ರೋ ನಿಲ್ದಾಣಗಳು ಬರಲಿವೆ. ಇದು ಬೆಂಗಳೂರು ದಕ್ಷಿಣದ ಐಟಿಬಿಟಿ ಇಂಡಸ್ಟ್ರಿಯಲ್ ಕಾರಿಡಾರ್​ಗೆ ಸಂಪರ್ಕ ಬೆಳೆಸುತ್ತದೆ. ಇದು ಮೂರು ಮಾರ್ಗ ಬದಲಾವಣೆಯ ಸ್ಟೇಷನ್​ಗಳನ್ನು ಒಳಗೊಂಡಿದೆ. ಸಿಲ್ಕ್​ ಬೋರ್ಡ್, ಆರ್​ವಿ ರೋಡ್ ಹಾಗೂ ಜಯದೇವ ಇದು ಪಿಂಕ್, ಗ್ರೀನ್ ಹಾಗೂ ಪರ್ಪಲ್​ ಲೈನ್ ಮೆಟ್ರೋಗಳಿಗೆ ಮಾರ್ಗ ಬದಲಾವಣೆ ಮಾಡಲು ಸಾಧ್ಯತೆ ಒದಗಿಸುತ್ತದೆ. ನಮ್ಮ ಮೆಟ್ರೋ ಯೆಲ್ಲೋ ಲೈನ್​ನಲ್ಲಿ ನಿತ್ಯ 2.5 ಲಕ್ಷ ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us