newsfirstkannada.com

ಆಟ ಆಡುತ್ತಿರುವಾಗ ಮಕ್ಕಳ ಮೇಲೆ ಬಿದ್ದ ಗೋಡೆ.. ಸ್ಥಳದಲ್ಲೇ ಇಬ್ಬರು ಸಾವು, ಮೂವರ ಸ್ಥಿತಿ ಗಂಭೀರ

Share :

Published June 4, 2024 at 5:59am

    ಗೋಡೆ ಬೀಳುವುದು ಅರಿವಿಲ್ಲದೇ ಆಟದಲ್ಲಿ ಮುಳುಗಿದ್ದ ಮಕ್ಕಳು

    ರಾತ್ರಿ ಸುರಿದ ಧಾರಾಕಾರ ಮಳೆಗೆ ನೆನೆದಿದ್ದ ಮನೆಯ ಗೋಡೆ

    ಗಂಭೀರವಾಗಿ ಗಾಯಗೊಂಡ ಮಕ್ಕಳು ಆಸ್ಪತ್ರೆಗೆ ದಾಖಲು

ಹೈದರಾಬಾದ್: ಧಾರಾಕಾರವಾಗಿ ಮಳೆ ಸುರಿದ ಕಾರಣ ಮನೆಯ ಹಳೆಯ ಗೋಡೆಯೊಂದು ಕುಸಿದು ಮಕ್ಕಳ ಮೇಲೆ ಬಿದ್ದಿದೆ. ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದು ಮೂರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಬಾಬುಲ್ ರೆಡ್ಡಿ ನಗರದಲ್ಲಿ ನಡೆದಿದೆ.

ಬಿಹಾರ ಮೂಲದ ನೂರ್ ಜಾನ್ (8) ಹಾಗೂ ಆಸೀಫ್​ ಪರ್ವಿ (3) ಎನ್ನುವ ಎರಡು ಮಕ್ಕಳು ಸಾವನ್ನಪ್ಪಿವೆ. ಮಳೆ ಬಂದು ಹೋದ ಮೇಲೆ ಮನೆಯ ಮುಂದೆ ಐದು ಮಕ್ಕಳು ಆಟವಾಡುತ್ತಿದ್ದರು. ಮಳೆಯಿಂದ ನೆನೆದಿದ್ದ ಹಳೆಯ ಗೋಡೆ ಮಕ್ಕಳ ಮೇಲೆ ಬಿದ್ದಿದೆ. ತಕ್ಷಣ ಸ್ಥಳೀಯರು ಓಡೋಡಿ ಬಂದು ಮೂವರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಸಂಪೂರ್ಣ ಗೋಡೆ ಎರಡು ಮಕ್ಕಳ ಮೇಲೆ ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿವೆ. ಇನ್ನು ರಕ್ಷಣೆ ಮಾಡಲಾದ ಮೂರು ಮಕ್ಕಳು ಗಂಭೀರವಾಗಿ ಗಾಯಗೊಂಡಿವೆ ಎಂದು ಹೇಳಲಾಗಿದೆ.

ಗಾಯಗೊಂಡ ಮಕ್ಕಳನ್ನು ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಕ್ಷಣ ಮಾಹಿತಿಯನ್ನು ಪೊಲೀಸರಿಗೆ ತಿಳಿಸಲಾಗಿದ್ದು ಘಟನಾ ಸ್ಥಳಕ್ಕೆ ಆಗಮಿಸಿದ ಮೈಲಾರದೇವಪಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು. ಬಿಹಾರ ಮೂಲದಿಂದ ವಲಸೆ ಬಂದಿದ್ದ ಕುಟುಂಬ ಬಾಬುಲ್ ರೆಡ್ಡಿ ನಗರದಲ್ಲಿ ನೆಲೆಸಿತ್ತು. ಪೋಷಕರು ಕೆಲಸಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಟ ಆಡುತ್ತಿರುವಾಗ ಮಕ್ಕಳ ಮೇಲೆ ಬಿದ್ದ ಗೋಡೆ.. ಸ್ಥಳದಲ್ಲೇ ಇಬ್ಬರು ಸಾವು, ಮೂವರ ಸ್ಥಿತಿ ಗಂಭೀರ

https://newsfirstlive.com/wp-content/uploads/2024/06/TN_CHILDREN_DIE.jpg

Load More