/newsfirstlive-kannada/media/post_attachments/wp-content/uploads/2025/06/Telangana_WIFE_4.jpg)
ಉತ್ತರ ಭಾರತದ ಮಧ್ಯಪ್ರದೇಶದ ಸೋನಮ್ ತನ್ನ ಪತಿ ರಾಜ ರಘುವಂಶಿಯನ್ನು ಹನಿಮೂನ್​ಗೆಂದು ಮೇಘಾಲಯಕ್ಕೆ ಕರೆದುಕೊಂಡು ಹೋಗಿ ಪ್ರಾಣ ತೆಗೆದಿದ್ದರು. ಇದು ಜನರನ್ನು ಭಯಭೀತರನ್ನಾಗಿಸಿದೆ. ಇತ್ತ ದಕ್ಷಿಣ ಭಾರತದ ತೆಲಂಗಾಣದಲ್ಲೂ ಅಂಥದ್ದೇ ಘಟನೆ ನಡೆದಿದೆ. ಹೆಂಡತಿಯ ಜೊತೆ ಹನಿಮೂನ್‌ಗೆ ಹೋಗಬೇಕಾದ ಹರಿಶಿಣ ಮೈ ಹುಡುಗ, ತನ್ನ ನವವಿವಾಹಿತ ಹೆಂಡತಿಯಿಂದಲೇ ಜೀವ ಕಳೆದುಕೊಂಡಿದ್ದಾನೆ. ಮದುವೆಯಾದ ಒಂದೇ ತಿಂಗಳಲ್ಲಿ ಹೆಂಡತಿ ಹಾಗೂ ಆಕೆಯ ತಾಯಿಯಿಂದ ಹುಡುಗ ಕೊನೆಯುಸಿರೆಳೆದಿದ್ದಾನೆ.
ತೆಲಂಗಾಣದ ಜೋಗುಳಂಬ ಗದ್ವಾಲ್ ಜಿಲ್ಲೆಯ ತೇಜೇಶ್ವರ್ ಅವರು ಹೆಂಡತಿಯಿಂದಲೇ ಜೀವನ ಮುಗಿಸಿದ್ದಾನೆ. ಭೂ ಮಾಪನ ಇಲಾಖೆಯಲ್ಲಿ ಭೂಮಿ ಸರ್ವೇಯರ್ ಆಗಿದ್ದ ತೇಜೇಶ್ವರ್​ಗೆ ಕಳೆದ ತಿಂಗಳು ಐಶ್ಚರ್ಯಾ ಜೊತೆ ವಿವಾಹವಾಗಿತ್ತು. ಇನ್ನೂ ಹರಿಶಿಣ ಮೈ ಹುಡುಗ ಜೂನ್ 17 ರಂದು ನಾಪತ್ತೆ ಆಗಿದ್ದ. ಅಂದೇ, ತೇಜೇಶ್ವರ್ ದೇಹ, ಆಂಧ್ರ ಪ್ರದೇಶದ ಕರ್ನೂಲಿನ ಪಣ್ಯ ಮಂಡಲದ ಸುಗಲಿಮೆಟ್ಟಿವಿನಲ್ಲಿ ಪತ್ತೆಯಾಗಿದೆ.
/newsfirstlive-kannada/media/post_attachments/wp-content/uploads/2025/06/Telangana_WIFE_3.jpg)
ದೇಹದ ಮೇಲೆ ಚಾಕುವಿನ ಗಾಯದ ಗುರುತುಗಳು, ಕುತ್ತಿಗೆ ಸೀಳಿದ ಗಾಯದ ಗುರುತುಗಳು ಪತ್ತೆಯಾಗಿವೆ. ಭೂಮಿಯನ್ನು ಸರ್ವೇ ನಡೆಸುವ ನೆಪದಲ್ಲಿ ಕಾರಿಗೆ ಕೂರಿಸಿಕೊಂಡು, ಕಾರಿನಲ್ಲೇ ತೇಜೇಶ್ವರ್​ನನ್ನ ಮುಗಿಸಲಾಗಿದೆ. ಬಳಿಕ ದೇಹವನ್ನು ಕರ್ನೂಲ್ ಜಿಲ್ಲೆಗೆ ತಂದು ಸುಗಲಿಮೆಟ್ಟುವಿನಲ್ಲಿ ಎಸೆದು ಹಂತಕರು ಪರಾರಿಯಾಗಿದ್ದಾರೆ.
ಈ ಹತ್ಯೆ ಕೇಸ್ ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಸಂಚಲನ ಮೂಡಿಸಿದೆ. ಪೊಲೀಸ್ ತನಿಖೆಯಲ್ಲಿ ಅಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ತೇಜೇಶ್ವರ್​ನನ್ನ ಮುಗಿಸಿದ್ದು ಬೇರಾರು ಅಲ್ಲ, ಒಂದು ತಿಂಗಳ ಹಿಂದೆಯಷ್ಟೇ ತೇಜೇಶ್ವರ್ ವಿವಾಹವಾಗಿದ್ದ ಪತ್ನಿ ಐಶ್ಚರ್ಯ ಹಾಗೂ ಆಕೆಯ ತಾಯಿ ಸುಜಾತ ಎಂದು ತಿಳಿದು ಬಂದಿದೆ. ಕರ್ನೂಲ್ ಜಿಲ್ಲೆಯ ಬ್ಯಾಂಕ್ ಉದ್ಯೋಗಿಯೊಬ್ಬರೊಂದಿಗೆ ಐಶ್ಚರ್ಯಾ ಹಾಗೂ ಆಕೆಯ ತಾಯಿ ಇಬ್ಬರು ಪ್ರೇಮ ಸಂಬಂಧ ಹೊಂದಿದ್ದರಂತೆ. ಬ್ಯಾಂಕ್ ಉದ್ಯೋಗಿಯೇ ತೇಜೇಶ್ವರ್​ನನ್ನು ಕೊಲೆ ಮಾಡಿದ್ದಾನೆ. ಇದಕ್ಕಾಗಿ ಬಾಡಿಗೆ ಹಂತಕರನ್ನು ನೇಮಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ವರ್ಷದ ಮೇ, 18 ರಂದು ತೇಜೇಶ್ವರ್ ಮತ್ತು ಐಶ್ಚರ್ಯಾ ವಿವಾಹ ನಡೆದಿತ್ತು. ಮದುವೆಯಾಗಿ 1 ತಿಂಗಳು ತುಂಬುವ 1 ದಿನ ಮುನ್ನವೇ ನವವಿವಾಹಿತ ಬಲಿಯಾಗಿದ್ದಾನೆ.
/newsfirstlive-kannada/media/post_attachments/wp-content/uploads/2025/06/Telangana_WIFE_1.jpg)
ಮದುವೆಗೂ ಮುನ್ನವೇ ಐಶ್ಚರ್ಯಾ, ಬ್ಯಾಂಕ್ ಉದ್ಯೋಗಿಯ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಳು. ಬಳಿಕ ಮನೆಗೆ ವಾಪಸ್ ಬಂದಿದ್ದಳಂತೆ. ಕುಟುಂಬವು ಮದುವೆಗೆ ವರದಕ್ಷಿಣೆಗಾಗಿ ಒತ್ತಡ ಹೇರಿತ್ತು. ಹೀಗಾಗಿ ಕೆಲವು ಸ್ನೇಹಿತರನ್ನು ಭೇಟಿಯಾಗಿ ವಾಪಸ್ ಬಂದಿದ್ದೇನೆ ಎಂದು ಐಶ್ಚರ್ಯಾ ಹೇಳಿದ್ದಳು. ಬಳಿಕ ತೇಜೇಶ್ವರ್- ಐಶ್ಚರ್ಯಾ ವಿವಾಹ ನಡೆದಿದೆ. ಆದರೇ, ವಿವಾಹದ ಬಳಿಕ ತೇಜೇಶ್ವರ್​ಗೆ ಅನುಮಾನಗಳು ಬಂದಿವೆ.
ಐಶ್ಚರ್ಯಾ ಯಾವಾಗಲೂ ಪೋನ್​​ನಲ್ಲಿ ಮಾತನಾಡುತ್ತಿದ್ದಳು. ಪತಿ ತೇಜೇಶ್ವರ್​ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಳು. ಐಶ್ಚರ್ಯಾ ಪೋನ್ ಕಾಲ್ ಡೀಟೈಲ್ಸ್ ತೆಗೆದು ನೋಡಿದರೇ, ವಿವಾಹದ ನಂತರವೂ ಐಶ್ಚರ್ಯಾ, ಬ್ಯಾಂಕ್ ಉದ್ಯೋಗಿಗೆ ಬರೋಬ್ಬರಿ 2 ಸಾವಿರ ಪೋನ್ ಕಾಲ್ ಮಾಡಿರುವುದು ಬೆಳಕಿಗೆ ಬಂದಿದೆ.
/newsfirstlive-kannada/media/post_attachments/wp-content/uploads/2025/06/Telangana_WIFE.jpg)
ಸರ್ಕಾರಿ ಉದ್ಯೋಗಿಯಾಗಿದ್ದ ತೇಜೇಶ್ವರ್ ಸಾಕಷ್ಟು ಆಸ್ತಿ ಸಂಪಾದಿಸಿದ್ದರು. ಜೊತೆಗೆ ಕುಟುಂಬದ ವಂಶಪಾರಂಪರ್ಯ ಆಸ್ತಿಯೂ ಇತ್ತು. ಈ ಆಸ್ತಿಯ ಮೇಲೆ ಕಣ್ಣಿಟ್ಟು ತೇಜೇಶ್ವರ್ ಜೊತೆಗೆ ಐಶ್ಚರ್ಯಾ ವಿವಾಹ ಮಾಡಿದ್ದಾರೆ. ಆಸ್ತಿ ಹಾಗೂ ಐಶ್ಚರ್ಯಾ ಅನೈತಿಕ ಸಂಬಂಧಕ್ಕೆ ತೇಜೇಶ್ವರ್ ವಿರೋಧವೇ ಕೊಲೆಗೆ ಕಾರಣವೆಂದು ಪೊಲೀಸರು ಹೇಳಿದ್ದಾರೆ.
ಬ್ಯಾಂಕ್ ಉದ್ಯೋಗಿ ಬಾಡಿಗೆ ಹಂತಕರ ಮೂಲಕ ತೇಜೇಶ್ವರ್​ರನ್ನು ಮುಗಿಸಿದ್ದಾನೆ. ಹಂತಕರ ಜೊತೆಗೆ ಬ್ಯಾಂಕ್ ಉದ್ಯೋಗಿ ತನ್ನ ಸ್ವಂತ ಕಾರ್ ಚಾಲಕನನ್ನು ಕಳಿಸಿದ್ದಾನೆ. ಹಂತಕರು 10 ಎಕರೆ ಜಮೀನು ಸರ್ವೇ ಮಾಡಬೇಕೆಂದು ಹೇಳಿ, ತೇಜೇಶ್ವರ್​ರನ್ನು ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದು, ಮಾರ್ಗಮಧ್ಯೆಯೇ ಕೆಲಸ ಮುಗಿಸಿದ್ದರು. ಇನ್ನೂ ಪೊಲೀಸ್ ವಿಚಾರಣೆಯ ವೇಳೆ ತೇಜೇಶ್ವರ್ ಪತ್ನಿ ಐಶ್ಚರ್ಯಾ ಹಾಗೂ ತಾಯಿ ಸುಜಾತ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಬ್ಯಾಂಕ್ ಉದ್ಯೋಗಿ ಹಾಗೂ ಆತನ ನೇಮಿಸಿದ್ದ ಹಂತಕರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us