ನನ್ನ ತುಂಡು, ತುಂಡಾಗಿ ಕತ್ತರಿಸಿದರೂ.. ಆರ್ಥಿಕ ಪರಿಸ್ಥಿತಿ ಬಗ್ಗೆ ಆಂಧ್ರ ಸಿಎಂ ಅಸಹಾಯಕ ಮಾತು!

author-image
Veena Gangani
Updated On
ನನ್ನ ತುಂಡು, ತುಂಡಾಗಿ ಕತ್ತರಿಸಿದರೂ.. ಆರ್ಥಿಕ ಪರಿಸ್ಥಿತಿ ಬಗ್ಗೆ ಆಂಧ್ರ ಸಿಎಂ ಅಸಹಾಯಕ ಮಾತು!
Advertisment
  • ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಬಗ್ಗೆ ಹೇಳಿದ್ದೇನು?
  • ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆರ್ಥಿಕ ಶಿಸ್ತು ಪಾಲಿಸುತ್ತಿದ್ದೇವೆ
  • ರಾಜ್ಯವು ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯಲ್ಲಿದೆ ಅಂತ ಒಪ್ಪಿಕೊಂಡಿದ್ಯಾ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ರಾಜ್ಯವು ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯಲ್ಲಿದೆ ಅಂತ ಒಪ್ಪಿಕೊಂಡಿದ್ದಾರೆ. ಸರ್ಕಾರಿ ನೌಕರರು ಮುಷ್ಕರ ನಡೆಸುವ ಬದಲು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ದೇಶದ 244 ಜಿಲ್ಲೆಗಳಲ್ಲಿ ನಾಳೆ ಮಾಕ್​ ಡ್ರಿಲ್.. ಈ ಯುದ್ಧ ಕವಾಯತ್​​ನ ಉದ್ದೇಶ ಏನು..?

ತೆಲಂಗಾಣದ ಸರ್ಕಾರಿ ನೌಕರರ ಜಂಟಿ ಕ್ರಿಯಾ ಸಮಿತಿ ಮೇ 7ರಿಂದ ಮಷ್ಕರದ ಬೆದರಿಕೆ ಹಾಕಿದ್ದಾರೆ. ಮೇ 15ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. 5 ಡಿಎ, ವೇತನ ಪರಿಷ್ಕರಣಾ ಆಯೋಗ, 9 ಸಾವಿರ ಕೋಟಿ ಬಾಕಿ ಬಿಲ್​ ಪಾವತಿಸಬೇಕು, ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ತೆಲಂಗಾಣ ಸರ್ಕಾರಿ ನೌಕರರು ಬೇಡಿಕೆ ಇಟ್ಟಿದ್ದಾರೆ.

publive-image

ನೌಕರರ ಬೇಡಿಕೆ ಬಗ್ಗೆ ಪ್ರಸ್ತಾಪಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ನೀವು, ನನ್ನನ್ನು ತುಂಡು ತುಂಡಾಗಿ ಕತ್ತರಿಸಿದರೂ ನಿಮ್ಮ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಹೈದ್ರಾಬಾದ್​ನಲ್ಲಿ ಮಾಧ್ಯ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ತೆಲಂಗಾಣಕ್ಕೆ ಪ್ರತಿ ತಿಂಗಳೂ 22, 500 ಕೋಟಿ ರೂ.ಗಳ ಅಗತ್ಯವಿದೆ. ಆದರೆ ರಾಜ್ಯದಲ್ಲಿ 18,500 ಕೋಟಿ ರೂ. ಮಾತ್ರ ಸಂಗ್ರಹಿಸಲು ಸಾಧ್ಯವಾಗುತ್ತಿದೆ ಅಂತಾ ಹೇಳಿದ್ದಾರೆ. ಪರೋಕ್ಷವಾಗಿ ತೆಲಂಗಾಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂಬ ಮಾತನ್ನು ರೇವಂತ್ ರೆಡ್ಡಿ ಒಪ್ಪಿಕೊಂಡಿದ್ದಾರೆ.
ನಾವು ಗ್ಯಾರಂಟಿ ಯೋಜನೆ, ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಬೇಕೆ? ಪೆಟ್ರೋಲ್ ಬೆಲೆ 200 ರೂ. ಹೆಚ್ಚಿಸಬೇಕೆ? ಅಥವಾ ಅನತ್ಯವಾಗಿ ಬೆಲೆ ಹೆಚ್ಚಿಸಬೇಕೆ? ಅದು ಸರಿಯಲ್ಲ. ಈ ಹಂತದಲ್ಲಿ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಸರ್ಕಾರಿ ಯಂತ್ರದ ಕುಸಿತಕ್ಕೆ ಕಾರಣವಾಗಲಿದೆ. ಸರ್ಕಾರಿ ನೌಕರರು ಮುಷ್ಕರದ ಬದಲು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರಿ ನೌಕರರು ಸರ್ಕಾರದ ವಿರುದ್ದ ಯುದ್ಧ ಘೋಷಿಸಿದಂತಿದೆ. ನಿಮ್ಮ ಹೋರಾಟ ತೆಲಂಗಾಣ ಜನರ ವಿರುದ್ಧವೇ? ಇವತ್ತಿನ ತೆಲಂಗಾಣದ ತೊಂದರೆಗೆ ಹಿಂದಿನ ಬಿಆರ್​​ಎಸ್​ ಸರ್ಕಾರದ ಆರ್ಥಿಕ ಅಶಿಸ್ತು ಕಾರಣ ಎಂದು ರೇವಂತ್ ರೆಡ್ಡಿ ಆರೋಪಿಸಿದ್ದಾರೆ.

publive-image

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆರ್ಥಿಕ ಶಿಸ್ತು ಪಾಲಿಸುತ್ತಿದ್ದೇವೆ. ಯಾವುದೇ ದುಂದು ವೆಚ್ಚ ತಪ್ಪಿಸಿದ್ದೇವೆ. ಕಳೆದ ಒಂದು ದಶಕದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರಿ ನೌಕರರು ಪ್ರತಿ ತಿಂಗಳ 1ನೇ ತಾರೀಖಿನಂದೇ ಸಂಬಳ ಪಡೆಯುತ್ತಿದ್ದಾರೆ ಅಂತ ರೇವಂತ್ ರೆಡ್ಡಿ ಹೇಳಿದ್ದಾರೆ. ರೇವಂತ್ ರೆಡ್ಡಿ ವಿಶೇಷ ವಿಮಾನ ಬಳಸುವುದರ ಬಗ್ಗೆ ಮಾತನಾಡಿದ ರೆಡ್ಡಿ, ಸಿಎಂ ಆಗಿ ನಾನು ವಿಶೇಷ ವಿಮಾನದಲ್ಲಿ ಹಾರಲು ಅರ್ಹನಾಗಿದ್ದೇನೆ. ನಾನು ವಾಣಿಜ್ಯ ವಿಮಾನದಲ್ಲೇ ಓಡಾಡುತ್ತೇನೆ. ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣಿಸುತ್ತೇನೆ. ಹಿಂದಿನ ಸರ್ಕಾರ ಸಾಲ ಮರುಪಾವತಿಸದೇ ವ್ಯವಸ್ಥೆಯನ್ನೇ ಹಾಳುಗೆಡವಿದೆ. ನಮ್ಮ ಸರ್ಕಾರ 1.58 ಲಕ್ಷ ಕೋಟಿ ರೂ. ಸಾಲ ಮಾಡಿದ್ದೇವೆ. 1.54 ಲಕ್ಷ ಕೋಟಿ ರೂ. ಸಾಲ ಮರು ಪಾವತಿ ಮಾಡಿದ್ದೇವೆ. ಈ ವ್ಯವಸ್ಥೆಯನ್ನು ಸರಿದಾರಿಗೆ ತರಲು ಯತ್ನಿಸುತ್ತಿದ್ದೇವೆ. ದಯವಿಟ್ಟು ನಮ್ಮೊಂದಿಗೆ ಕೈ ಜೋಡಿಸಿ. ಸಹಕರಿಸಿ. ಒಟ್ಟಾಗಿ ಕೆಲಸ ಮಾಡೋಣ. ಈ ಸರ್ಕಾರ ಅಸ್ಥಿರಕ್ಕೆ ಯತ್ನಿಸುತ್ತಿರುವ ರಾಜಕೀಯ ಪಕ್ಷಗಳ ಕೈಗೊಂಬೆಗಳಾಗಬೇಡಿ ಅಂತ ಸಿಎಂ ರೇವಂತ್ ರೆಡ್ಡಿ ಮನವಿ ಮಾಡಿದ್ದಾರೆ.


">May 5, 2025

ಸರ್ಕಾರ ನಿಮ್ಮ ಹೊಸ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ನವದೆಹಲಿಯಲ್ಲಿ ಯಾರೂ ನಮಗೆ ಅಪಾಯಿಟ್ಮೆಂಟ್ ನೀಡುತ್ತಿಲ್ಲ. ಹಣಕಾಸು ಸಂಸ್ಥೆಗಳು ಸಾಲದ ವಿಚಾರಕ್ಕೆ ನಮ್ಮನ್ನು ಕಳ್ಳರಂತೆ ನೋಡುತ್ತಿದ್ದಾರೆ. ಇದಕ್ಕೆಲ್ಲ ಹಿಂದಿನ ಸರ್ಕಾರವೇ ಕಾರಣ ಎಂದು ರೇವಂತ್ ರೆಡ್ಡಿ ಆರೋಪಿಸಿದ್ದಾರೆ. ರಾಜ್ಯದಲ್ಲಿ 2.28 ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬಂದಿದೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿ. ಇದಕ್ಕೆ ಪೊಲೀಸರಿಗೆ ಅಭಿನಂದನೆಗಳು ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment