/newsfirstlive-kannada/media/post_attachments/wp-content/uploads/2024/12/ALLU_ARJUN.jpg)
ಅಲ್ಲು ಅರ್ಜುನ್ ಜೈಲಿಗೆ ಹೋಗಿ ಬಂದ್ರು. ಆದ್ರೆ, ಸ್ಟಾರ್ ನಟನ ಬಂಧಿಸಿದರ ಹಿಂದೆ ಯಾರದ್ದಾದ್ರೂ ಕೈವಾಡ ಇದ್ಯಾ? ಹೀಗೊಂದು ಚರ್ಚೆ ನಡೆಯುತ್ತಿದೆ. ಪುಷ್ಪ-2 ಚಿತ್ರದಂತೆ ಈ ಟಾಪಿಕ್ ಕೂಡಾ ಸಂಚಲನ ಮೂಡಿಸಿದೆ. ಪುಷ್ಪರಾಜ್ ಬಂಧನ ಕಹಾನಿಯಲ್ಲಿ ತೆಲಂಗಾಣ ಸಿಎಂ ನೆರಳಿದ್ಯಾ ಎಂಬ ಪ್ರಶ್ನೆ ಮೂಡಿದೆ. ಬನ್ನಿ ಬಗ್ಗೆ ರೇವಂತ್ ರೆಡ್ಡಿ ಆಡಿದ ಮಾತು ಈ ಸಂಶಯವನ್ನ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಅಲ್ಲು ಅರ್ಜುನ್ ಅಂದ್ರೆ ಒಂದು ಬ್ರ್ಯಾಂಡ್. ಪುಷ್ಪರಾಜ್ ಅಂದ್ರೆ ಫೈಯರ್. ಸದ್ಯ ದೇಶದಲ್ಲಿ ಪುಷ್ಪ ಅಂದ್ರೆ ವೈಲ್ಡ್ ಫೈರ್. ಆದ್ರೀಗ ಪ್ರೀಮಿಯರ್ ಶೋನಲ್ಲಿ ಆದ ಆ ಒಂದು ಅವಘಡ ‘ಬನ್ನಿ’ಗೆ ಕತ್ತಲಕೋಣೆಯ ಅನುಭವ ಆಗವಂತೆ ಮಾಡಿದೆ. ಮಹಿಳೆಯ ದುರಂತದಲ್ಲಿ ಅಲ್ಲು ಅರ್ಜುನ್ 1 ದಿನ ಜೈಲುವಾಸ ಅನುಭವಿಸಿ ರಿಲೀಸ್ ಆಗಿದ್ದಾರೆ. ಆದ್ರೀಗ ರೀಲ್ ರಕ್ತಚಂದನ ಸ್ಮಗ್ಲರ್ ಬಂಧನದ ಹಿಂದಿರೋ ಕಾಣದ ‘ಕೈ’ ಯಾರು ಎಂಬ ಚರ್ಚೆ ಶುರುವಾಗಿದೆ.
ಪುಷ್ಪ ಮೇಲೆ ಸೇಡು ತೀರಿಸಿಕೊಂಡ್ರಾ ರೇವಂತ್ ರೆಡ್ಡಿ?
ಹೀಗೊಂದು ಮಾತು ಎಲ್ಲರ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ. ಇದಕ್ಕೂ ರೀಸನ್ ಇದೆ. ಅಲ್ಲು ಅರೆಸ್ಟ್ ಆಗಿದ್ದನ್ನೇ ಸೀಸನ್ ಮಾಡಿಕೊಂಡು ಈ ಮಾತು ಮಾರ್ಧನಿಸುತ್ತಿದೆ. ಅದೇನಂದ್ರೆ, ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಚಿತ್ರದ ರಿಲೀಸಿಂಗ್ ಇವೆಂಟ್‌ನ ಹೈದರಾಬಾದ್‌ನಲ್ಲಿ ಆಯೋಜಿಸಲಾಗಿತ್ತು. ಈ ಇವೆಂಟ್ನಲ್ಲಿ ಅಲ್ಲು ಅರ್ಜುನ್, ಸಿಎಂ ರೇವಂತ್ ರೆಡ್ಡಿಗೆ ಧನ್ಯವಾದ ಹೇಳುವಾಗ ಹೆಸರು ಹೇಳಲು ವಿಳಂಬ ಮಾಡಿದ್ದರು. ಇದರ ಬೆನ್ನಲ್ಲೇ ಸಿಎಂ ರೇವಂತ್ ರೆಡ್ಡಿ ಹೆಸರು ಹೇಳದೇ ಅಲ್ಲು ಅರ್ಜುನ್ ಅವಮಾನ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು.
ಆ ಕುಟುಂಬಕ್ಕೆ ಮನಃ ಪೂರ್ವಕವಾಗಿ ಕ್ಷೆಮೆ ಕೇಳುತ್ತೇನೆ. ವೈಯಕ್ತಿಕವಾಗಿ ನಾನು ಆ ಕುಟುಂಬದ ಜೊತೆ ಇರುತ್ತೇನೆ. ಇದು ನಿಜವಾಗಿಯು ಆಕಸ್ಮಿಕವಾಗಿ ನಡೆದಿರುವ ಘಟನೆ. ಥಿಯೇಟರ್ನಲ್ಲಿ ಕುಟುಂಬದ ಜೊತೆ ಸಿನಿಮಾ ನೋಡುವಾಗ ಹೊರಗೆ ದುರಂತ ಆಗಿದೆ. ಆದರೆ ಇದರಲ್ಲಿ ನನ್ನ ನೇರ ಪಾತ್ರ ಇಲ್ಲ.
ಅಲ್ಲು ಅರ್ಜುನ್, ನಟ
ಅಲ್ಲು ಅರ್ಜುನ್ ಆಡಿದ ಈ ಮಾತಿಗೆ ಸಿಎಂ ಕೋಪಗೊಂಡಿದ್ರಾ? ಅಂದು ನಡೆದ ಘಟನೆಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಬಂಧಿಸಿ ಸೇಡು ತೀರಿಸಿಕೊಂಡ್ರಾ ಅನ್ನೋ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಜೊತೆಗೆ ಜಾಮೀನು ಸಿಕ್ಕರೂ ತಕ್ಷಣ ಜೈಲಿನಿಂದ ಯಾಕೆ ಬಿಡುಗಡೆ ಮಾಡಲಿಲ್ಲ? ಒಂದು ದಿನವಾದ್ರೂ ಜೈಲಲ್ಲಿ ಇರಿಸಬೇಕು ಎಂಬುದು ಸರ್ಕಾರದ ಹಠವೇ ಅನ್ನೋ ಪ್ರಶ್ನೆ ಅಲ್ಲು ಅಭಿಮಾನಿಗಳಿಗೆ ಕಾಡುತ್ತಿದೆ. ಇದ್ರ ಮಧ್ಯೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆಡಿದ ಮಾತು ಮತ್ತಷ್ಟು ಸಂಚಲನ ಮೂಡಿಸಿದೆ.
ಇದನ್ನೂ ಓದಿ: BBK11; ಡಬಲ್ ಎಲಿಮಿನೇಷನ್ ಇರುತ್ತಾ.. ಕೊನೆಯಲ್ಲಿ ಬಿಗ್ ಟ್ವಿಸ್ಟ್ ಕೊಡ್ತಾರಾ ಬಿಗ್ಬಾಸ್?
ಅಲ್ಲು ಅರ್ಜುನ್ ಬಂಧನಕ್ಕೆ ರೇವಂತ್ ರೆಡ್ಡಿ ಸಮರ್ಥನೆ!
ಅಲ್ಲು ಅರ್ಜುನ್ ಬಂಧನದ ಹಿಂದೆ ರಾಜಕೀಯ ಕೈವಾಡದ ಚರ್ಚೆ ನಡೀತಿರೋ ಹೊತ್ತಲ್ಲಿ ಸಿಎಂ ರೇವಂತ್ ರೆಡ್ಡಿ ಮಾಡಿಕೊಂಡಿರೋ ಸಮರ್ಥನೆ ಮತ್ತಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಅಲ್ಲು ಅರ್ಜುನ್ ಬಗ್ಗೆ ಚರ್ಚೆ ಮಾಡುತ್ತೀರಾ. ಆದ್ರೆ, ಸಾವನ್ನಪ್ಪಿರುವ ಮಹಿಳೆ ಕುಟುಂಬದ ಬಗ್ಗೆ ಚರ್ಚಿಸಬೇಕು ಎನ್ನುತ್ತಾ ಗರಂ ಆಗಿದ್ದಾರೆ.
ಇದಷ್ಟೇ ಅಲ್ಲ.. ಅಲ್ಲು ಅರ್ಜುನ್ ಸಿನಿಮಾ ಮಾಡಿದ್ದಾರೆ. ದುಡ್ಡು ಮಾಡೋ ನಟನಷ್ಟೇ. ಅವರೇನು ಇಂಡಿಯಾ ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿದವರಾ? ಅಂತ ಸಿಎಂ ರೇವಂತ್ ರೆಡ್ಡಿ ಪ್ರಶ್ನಿಸಿದ್ದಾರೆ.
ಪುಷ್ಪ-2 ಚಿತ್ರದಲ್ಲಿ 1 ಫೋಟೋ ವಿಚಾರಕ್ಕೆ ಸಿಎಂನೆ ಚೇಂಜ್ ಮಾಡ್ತಾನೆ ಸ್ಮಗ್ಲರ್ ಪುಷ್ಪ. ಆದ್ರೀಗ ರಿಯಲ್ ಲೈಫ್‌ನಲ್ಲಿ ಜೈಲಿಗೆ ಹೋಗೋಕೆ ಸಿಎಂ ಕಾರಣ ಅಂತ ಗೊತ್ತಾದ್ರೆ ಅಲ್ಲು ಅರ್ಜುನ್ ಏನ್ ಮಾಡ್ತಾರೆ? ತೆಲಂಗಾಣದಲ್ಲಿ ಅಲ್ಲು ಮತ್ತೊಬ್ಬ ಪವನ್ ಕಲ್ಯಾಣ್ ಆಗ್ತಾರಾ? ರೇವಂತ್ ರೆಡ್ಡಿ ವಿರುದ್ಧ ಸೇಡು ತೀರಿಸಿಕೊಳ್ತಾರಾ? ಅಲ್ಲು ಪಾಲಿಟಿಕ್ಸ್ ಚಾಪ್ಟರ್ ಶುರುವಾಗುತ್ತಾ? ಲೆಟ್ಸ್ ವೇಯ್ಟ್ ಅಂಡ್ ವಾಚ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ