/newsfirstlive-kannada/media/post_attachments/wp-content/uploads/2025/04/cm-revanth-reddy-SCCategorisation-1.jpg)
ರಾಜ್ಯದಲ್ಲಿ ಜಾತಿ ಜ್ವಾಲೆ ಅಕ್ಷರಶಃ ಧಗಧಗಿಸ್ತಿದೆ. ಅಹಿಂದ ಋಣಸಂದಾಯಕ್ಕೆ ಮುಂದಾಗಿರೋ ಸಿದ್ದರಾಮಯ್ಯನವರ ವಿರುದ್ಧ ಸ್ವಪಕ್ಷದೊಳಗೇ ರೋಷಾಗ್ನಿ ಸ್ಫೋಟಗೊಂಡಿದ್ದು ದೊಡ್ಡ ಬೆಂಕಿಯನ್ನೇ ಹೊತ್ತಿಸಿದೆ. ಪ್ರಬಲ ಜಾತಿಯ ನಾಯಕರೆಲ್ಲರೂ ಒಂದಾಗ್ತಿದ್ರೆ, ಮತ್ತೊಂದ್ಕಡೆ ಅಹಿಂದ ಬಣ ಸೈಲೆಂಟಾಗಿಯೇ ದಾಳ ಉರುಳಿಸ್ತಿದೆ. ರಾಜ್ಯ ರಾಜಕಾರಣದಲ್ಲಿ ಜಾತಿಗಣತಿ ಹೊತ್ತಿಸಿರೋ ಬೆಂಕಿಯ ಕಿಚ್ಚು ಇನ್ನೆರಡು ದಿನದಲ್ಲಿ ಕಾಡ್ಚಿಚ್ಚಾಗಿ ಬದಲಾಗೋದ್ರಲ್ಲಿ ಸಂಶಯವೇ ಬೇಡ.
ರಾಜ್ಯದಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ಜಾತಿಗಣತಿ ಪರ-ವಿರೋಧದ ದಂಗಲ್ನಿಂದ ಮನೆಯೊಂದು ಮೂರು ಬಾಗಿಲಿನಂತಾಗ್ತಿದೆ. ಒಕ್ಕಲಿಗ, ಲಿಂಗಾಯತ ಸಮುದಾಯಗಳ ನಾಯಕರು ಜಾತಿಗಣತಿಗೆ ಪ್ರಬಲ ವಿರೋಧ ವ್ಯಕ್ತಪಡಿಸ್ತಿರೋವಾಗ್ಲೇ, ಸಿದ್ದರಾಮಯ್ಯ ಸೈಲೆಂಟಾಗಿಯೇ ಒಂದು ವ್ಯೂಹ ರಚಿಸ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿರೋ ತೆಲಂಗಾಣ ರಾಜ್ಯದಲ್ಲಿ ಸಿಎಂ ರೇವಂತ್ ರೆಡ್ಡಿ ಈ ಕ್ರಾಂತಿಗೆ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಇಲ್ಲಿ ಜಾತಿ ಜಿದ್ದಾಜಿದ್ದಿ ನಡೀತಿರುವಾಗಲೇ ಸಿಎಂ ರೆಡ್ಡಿ ಕ್ರಾಂತಿ!
ಎಸ್‌ಸಿ ಒಳ ಮೀಸಲು ಜಾರಿಗೊಳಿಸಿದ ಮೊಟ್ಟ ಮೊದಲ ಸಿಎಂ!
ಕರ್ನಾಟಕ ರಾಜ್ಯದಲ್ಲಿ ಜಾತಿ ಜಿದ್ದಾಜಿದ್ದು ಜೋರಾಗಿದೆ. ಹಿಂದುಳಿದ ವರ್ಗದ ಆಯೋಗದ ರಿಪೋರ್ಟ್ನ ಪ್ರಬಲ ಸಮುದಾಯಗಳು ಒಪ್ಪೋದಕ್ಕೆ ರೆಡಿ ಇಲ್ಲ. ಮತ್ತೆ ಹೊಸದಾಗಿ ಸಮೀಕ್ಷೆ ನಡೆಸೋದಕ್ಕೆ ಅಹಿಂದ ಸಮುದಾಯದ ನಾಯಕರಿಗೆ ಮನಸ್ಸಿಲ್ಲ. ರಾಜ್ಯದಲ್ಲೂ ಕೂಡ ಒಳಮೀಸಲಾತಿಗಾಗಿ ಹಲವು ಸಮುದಾಯಗಳ ಹೋರಾಟವನ್ನೇ ಮಾಡ್ತಿವೆ.
ಇಂತಹ ಬೆಳವಣಿಗೆ ಮಧ್ಯವೇ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಸರ್ಕಾರ ಪರಿಶಿಷ್ಟ ಜಾತಿಗೆ ಒಳಮೀಸಲಾತಿಯನ್ನ ಜಾರಿಮಾಡಿ ದೊಡ್ಡ ಘೊಷಣೆ ಹೊರಡಿಸಿದೆ. ಅದೂ ಕೂಡ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿಯಂದೇ ತೆಲಂಗಾಣ ಸರ್ಕಾರ ಈ ನಿರ್ಧಾರ ಕೈಗೊಂಡು ದೇಶದಲ್ಲೇ ಕ್ರಾಂತಿ ಮಾಡಿದೆ. ಈ ಮೂಲಕ ಎಸ್‌ಸಿ ಒಳ ಮೀಸಲಾತಿಯನ್ನ ಅಧಿಕೃತವಾಗಿ ಜಾರಿಗೆ ತಂದ ದೇಶದ ಮೊಟ್ಟ ಮೊದಲ ರಾಜ್ಯ ತೆಲಂಗಾಣ ಅನ್ನೋ ಖ್ಯಾತಿ ಪಡ್ಕೊಂಡಿದೆ.
ಎಸ್‌ಸಿ ಒಳ ಮೀಸಲಾತಿ ಕುರಿತು ವರದಿ ನೀಡೋದಕ್ಕೆ ತೆಲಂಗಾಣ ಸರ್ಕಾರ ಈ ಹಿಂದೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಶಮೀಮ್ ಅಕ್ತರ್ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಈ ಆಯೋಗ ತೆಲಂಗಾಣದಲ್ಲಿ ಇರೋ ಪರಿಶಿಷ್ಟ ಜಾತಿಗಳ ಲೆಕ್ಕ ಕೊಟ್ಟಿತ್ತು.
ರೇವಂತ್ ರೆಡ್ಡಿ ಕ್ರಾಂತಿ!
ಪರಿಶಿಷ್ಟ ಜಾತಿಯಲ್ಲಿ 59 ಉಪಜಾತಿಗಳಿವೆ
SCಗೆ ಮೀಸಲಾತಿ ಇರೋದು ಶೇ. 15ರಷ್ಟು
ಶೇ.1, ಶೇ.5, ಶೇ.9ರಷ್ಟು ಮೀಸಲಾತಿ ಅಗತ್ಯ
ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಯಲ್ಲಿ 59 ಉಪಜಾತಿಗಳಿವೆ. ರಾಜ್ಯದಲ್ಲಿ SC ಸಮುದಾಯಕ್ಕೆ ಮೀಸಲಾತಿ ಇರೋದು ಶೇ.15ರಷ್ಟು ಮಾತ್ರ. ಅವುಗಳನ್ನ ಮೂರು ಪಂಗಡಗಳಾಗಿ ಮಾಡಿ ಶೇಕಡಾ 1, ಶೇಕಡಾ 5, ಶೇಕಡಾ 9 ರಷ್ಟು ಮೀಸಲಾತಿ ನೀಡುವುದು ಅಗತ್ಯ ಅಂತಾ ಆಯೋಗ ವರದಿ ನೀಡಿತ್ತು. ಈ ಸಂಬಂಧ ತೆಲಂಗಾಣ ಸರ್ಕಾರ, ತೆಲಂಗಾಣ ಪರಿಶಿಷ್ಟ ಜಾತಿಗಳ ಮೀಸಲಾತಿ ಮಸೂದೆಯನ್ನ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಿದೆ. ಇದಕ್ಕೆ ಏಪ್ರಿಲ್ 8, 2025ರಂದು ತೆಲಂಗಾಣ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣದಿಂದ ಬೋರ್ ಕೊರೆಸಿ ಗಂಗೆಯ ಭಾಗ್ಯ ಪಡೆದ ರೈತ ದಂಪತಿ; ಸಿಎಂಗೆ ಧನ್ಯವಾದ!
ಸದ್ಯದ ವರದಿ ಪ್ರಕಾರ ಗುಂಪು 1ರಲ್ಲಿ ಬರೋ 15 ಉಪ ಪಂಗಡಗಳಿಗೆ ಶೇಕಡಾ 1ರಷ್ಟು ಮೀಸಲಾತಿ ಸಿಕ್ಕರೆ, ಗುಂಪು 2ರಲ್ಲಿರೋ 18 ಉಪಜಾತಿಗೆ ಶೇಕಡಾ 9 ರಷ್ಟು, ಗುಂಪು 3ರಲ್ಲಿರೋ 26 ಉಪಜಾತಿಗಳಿಗೆ ಶೇಕಡಾ 5ರಷ್ಟು ಒಳ ಮೀಸಲಾತಿ ಸಿಗುತ್ತಿದೆ. ಇಲ್ಲಿಯವರೆಗೂ ಎಸ್‌ಸಿ ಸಮುದಾಯಕ್ಕೆ ಇದ್ದಂತ ಶೇಕಡಾ 15 ರಷ್ಟು ಮೀಸಲಾತಿಯಲ್ಲಿ ಅದರಲ್ಲಿರೋ ಪ್ರಭಾವಿ ಒಳ ಪಂಗಡಗಳೇ ಮೀಸಲಾತಿ ಲಾಭ ಪಡೀತಾ ಇದ್ವು. ಇದು ಕೆಲವು ಉಪಪಂಗಡಗಳಿಗೆ ಅನ್ಯಾಯವಾಗ್ತಿದೆ ಅನ್ನೋದು ರೇವಂತ ರೆಡ್ಡಿ ಗಮನಕ್ಕೂ ಬಂದಿತ್ತು. ಇದೇ ಹಿನ್ನೆಲೆಯಲ್ಲಿ ಆಯೋಗವೊಂದನ್ನ ರಚನೆ ಮಾಡಿದ್ದು, SC ವರ್ಗೀಕರಣ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ