1 KG ಮಾವಿನ ಹಣ್ಣುಗಳ ಬೆಲೆ 2,50,000 ರೂಪಾಯಿ.. ಇದರ ಒಂದು ಗಿಡದ ಬೆಲೆ ಎಷ್ಟು?

author-image
Bheemappa
1 KG ಮಾವಿನ ಹಣ್ಣುಗಳ ಬೆಲೆ 2,50,000 ರೂಪಾಯಿ.. ಇದರ ಒಂದು ಗಿಡದ ಬೆಲೆ ಎಷ್ಟು?
Advertisment
  • ಮೊದಲ ಬಾರಿಗೆ ಕೇವಲ 11 ಗಿಡಗಳನ್ನು ಖರೀದಿ ಮಾಡಿದ್ದ ರೈತ
  • ತೋಟದಲ್ಲಿರುವ ಮಾವಿನ ಹಣ್ಣುಗಳಿಗೆ ನಾಯಿಯಿಂದ ಕಾವಲು
  • ಈ ಮಾವಿನ ಹಣ್ಣುಗಳಿಗೆ ಇಷ್ಟೊಂದು ಹಣ ಕೊಡುವುದು ಯಾಕೆ?

ಈಗ ಮಾವು ಸೀಸನ್​.. 1 ಕೆ.ಜಿ ಮಾವಿನ ಹಣ್ಣು 200 ರೂಪಾಯಿ ಇಂದ 300 ರೂಪಾಯಿ ಇರಬಹುದು. ಅಬ್ಬಾಬ್ಬ ಅಂದರೆ ಕೆ.ಜಿಗೆ 500 ರೂಪಾಯಿ ಕೊಡಬಹುದು. ಆದರೆ ಇಲ್ಲೊಂದು ವಿಶೇಷ ಮಾವು ತಳಿ ಇದ್ದು ಇದರ ಹಣ್ಣುಗಳನ್ನು ತಿನ್ನಬೇಕು ಎಂದರೆ ಇರೋ ಆಸ್ತಿ ಮಾರಬೇಕು. ಏಕೆಂದರೆ 1 ಕೆ.ಜಿ ಮಾವಿನ ಹಣ್ಣುಗಳ ಬೆಲೆ ಕೇಳಿದರೆ ಶಾಕ್ ಆಗೋದು ಪಕ್ಕಾ.

publive-image

ತೆಲಂಗಾಣದ ಕಮ್ಮಮ್​ ಜಿಲ್ಲೆಯಲ್ಲಿ ಬಾರು ಗೂಡಲ್​ನ ಶ್ರೀಸಿಟಿಯ ರೈತ ಗರಕು ಪಾಟಿ ವಿಜಯ್ ಅವರು ವಿಶೇಷ ತಳಿ ಮಿಯಾ ಜಾಕಿ ಮಾವಿನ ಗಿಡಗಳನ್ನು ತಮ್ಮ ತೋಟದಲ್ಲಿ ಬೆಳೆಸಿದ್ದಾರೆ. ಸದ್ಯ ಈಗ ಸೀಸನ್​ ಇರುವುದರಿಂದ ಮರದ ತುಂಬಾ ಮಾವಿನ ಕಾಯಿಗಳು ಸೊಗಸಾಗಿ ಆಗಿವೆ. ಇವುಗಳ ರಕ್ಷಣೆ ಮಾಡಲೆಂದು ರೈತ ನಾಯಿಗಳಿಂದ ಕಾವಲು ಕಾಯುತ್ತಿದ್ದಾರೆ. ಮಿಯಾ ಜಾಕಿ ಮಾವಿನ ಮರಗಳನ್ನು ವಿದೇಶದಿಂದ ತಂದು ತಮ್ಮ ತೋಟದಲ್ಲಿ ತುಂಬಾ ಜಾಗ್ರತೆಯಿಂದ ರೈತ ಬೆಳೆಸಿದ್ದಾರೆ.

2020ರಲ್ಲಿ ಕೊರೊನಾ ಸಮಯದಲ್ಲಿ ಜಪಾನ್​​ನಿಂದ 15 ಮಿಯಾ ಜಾಕಿ ಮಾವಿನ ಗಿಡಗಳನ್ನು ಖರೀದಿ ಮಾಡಿ ತಂದಿದ್ದರು. ಒಂದೊಂದು ಗಿಡಕ್ಕೆ 11 ಸಾವಿರ ರೂಪಾಯಿಗಳನ್ನು ನೀಡಿ ತಂದು ತೋಟದಲ್ಲಿ ಬೆಳೆಸಿದ್ದರು. ಇದರಲ್ಲಿ ಕೇವಲ 10 ಗಿಡಗಳು ಮಾತ್ರ ಬೆಳೆದಿದ್ದು ಉಳಿದ 5 ಗಿಡಗಳು ನಾಶ ಹೊಂದಿದ್ದವು. ಸದ್ಯ 3 ವರ್ಷದ ಬಳಿಕ ಇದೀಗ ಹಣ್ಣುಗಳು ಆಗಿವೆ. ಮೊದ ಮೊದಲು ಒಂದೊಂದು ಗಿಡಕ್ಕೆ ಹತ್ತತ್ತು ಕಾಯಿಗಳು ಆಗುತ್ತಿದ್ದವು. ಆದರೆ ಈಗ 20 ರಿಂದ 30ಕ್ಕೂ ಹೆಚ್ಚು ಮಾವಿನ ಕಾಯಿಗಳು ಆಗುತ್ತಿವೆ.

ಮಾರುಕಟ್ಟೆಯಲ್ಲಿ ಈ ಮಿಯಾ ಜಾಕಿ ಮಾವಿನ ಹಣ್ಣುಗಳಿಗೆ ಒಳ್ಳೆಯ ಬೆಲೆ ಇರುವುದರಿಂದ ಮತ್ತೆ 60 ಗಿಡಗಳನ್ನು ತಂದು ನಾಟಿ ಮಾಡಿದ್ದಾರೆ. ಜಪಾನ್​ನಲ್ಲಿ ಈ ಮಿಯಾ ಜಾಕಿ ಮಾವಿನ ಹಣ್ಣುಗಳಿಗೆ ಡಿಮ್ಯಾಂಡ್ ಇರುವುದರಿಂದ ಅಲ್ಲಿಗೆ ರವಾನೆ ಮಾಡುವ ಯೋಜನೆಯಲ್ಲಿ ಇದ್ದೇವೆ ಎಂದು ರೈತ ವಿಜಯ್ ಅವರು ಹೇಳಿದ್ದಾರೆ.

ಇದನ್ನೂ ಓದಿ:ತಾಯಿಗೆ ಅನಾರೋಗ್ಯ, ತಂಗಿ ಮದುವೆಗೆ ಬಂದಿದ್ದ ಯೋಧ ಸೇನೆಗೆ ವಾಪಸ್​.. ಭಾವುಕ ಕ್ಷಣ

publive-image

ಈ ಮಿಯಾ ಜಾಕಿ ಮಾವಿನ ಹಣ್ಣುಗಳಿಗೆ ಔಷಧಿ ಗುಣಗಳು ಹೆಚ್ಚಾಗಿ ಇರುತ್ತದೆ. ಕ್ಯಾನ್ಸರ್, ಡಯಾಬಿಟಿಕ್ ವಿರುದ್ಧ ಹೋರಾಡುವ ಸಾಮರ್ಥ್ಯ ಇರುತ್ತದೆ. ನಮ್ಮ ದೇಹಕ್ಕೆ ಅವಶ್ಯಕತೆ ಇರುವ ಫೈಬರ್​, ಕ್ಯಾಲ್ಸಿಯಂ, ಐರನ್, ವಿಟಮಿನ್ಸ್​, ಮೆಗ್ನಿಷಿಯಂನಂತಹ ಅಂಶಗಳು ಇದರಲ್ಲಿವೆ. ಹೀಗಾಗಿ ಈ ಹಣ್ಣುಗಳು ಒಂದು ಕೆ.ಜಿಗೆ 2 ಲಕ್ಷದ 60 ಸಾವಿರದಿಂದ 2 ಲಕ್ಷದ 75 ಸಾವಿರ ರೂಪಾಯಿ ಇದೆ. ಪ್ರಪಂಚದಲ್ಲೇ ಈ ಹಣ್ಣುಗಳು ಅತ್ಯಂತ ದುಬಾರಿ ಬೆಲೆಗೆ ಮಾರಾಟ ಆಗುತ್ತವೆ. ಒಮ್ಮೊಮ್ಮೆ 3 ಲಕ್ಷ ರೂಪಾಯಿವರೆಗೆ ಮಾರಾಟ ಆಗಿ ಆಶ್ಚರ್ಯ ಮೂಡಿಸಿವೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment