ತಮಿಳುನಾಡು ಒಂದೇ ಅಲ್ಲ.. ಕರ್ನಾಟಕದ ಈ ಜಲಾಶಯದ ನೀರಿನ ಮೇಲೆ ಕಣ್ಣಿಟ್ಟ ಮತ್ತೊಂದು ನೆರೆ ರಾಜ್ಯ..!

author-image
Bheemappa
Updated On
ತಮಿಳುನಾಡು ಒಂದೇ ಅಲ್ಲ.. ಕರ್ನಾಟಕದ ಈ ಜಲಾಶಯದ ನೀರಿನ ಮೇಲೆ ಕಣ್ಣಿಟ್ಟ ಮತ್ತೊಂದು ನೆರೆ ರಾಜ್ಯ..!
Advertisment
  • ನೆರೆ ರಾಜ್ಯಕ್ಕೆ ನೀರು ಬಿಟ್ಟರೇ ಹೋರಾಟದ ಎಚ್ಚರಿಕೆ ನೀಡಿದ ರೈತರು
  • ಯಾವ ಡ್ಯಾಂಗೆ ನೀರು ಹರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ?
  • ಕುಡಿಯುವ ಹಾಗೂ ಕೃಷಿ ಉದ್ದೇಶಕ್ಕೆ ನೀರು ಹರಿಸುವಂತೆ ಬರೆದ ಪತ್ರ

ವಿಜಯಪುರ: ಬಿರು ಬೇಸಿಗೆ ಆರಂಭವಾಗುತ್ತಿದ್ದು ರಾಜ್ಯದ ಪ್ರಮುಖ ಜಲಾಶಯದ ನೀರಿನ ಮೇಲೆ ನೆರೆ ರಾಜ್ಯದ ಕಣ್ಣು ಬಿದ್ದಿದೆ. ಈ ಸಂಬಂಧ 5 ಟಿಎಂಸಿ ನೀರು ಹರಿಸುವಂತೆ ಪತ್ರ ಬರೆದ ಬೆನ್ನಲ್ಲೇ ರೈತರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

publive-image

ಬೇಸಿಗೆ ಆರಂಭಕ್ಕೂ ಮೊದಲೇ ಬಿಸಿಲು ನೆತ್ತಿ ಸುಡುತ್ತಿದ್ದು ಕರ್ನಾಟಕದ ಜಲಾಶಯಗಳಲ್ಲಿ ಇರುವ ನೀರು ಕರ್ನಾಟಕಕ್ಕೆ ಸಾಕಾಗುತ್ತೋ, ಇಲ್ವೋ ಎನ್ನುವ ಗೊಂದಲ ಇದೆ. ಇದರ ಮಧ್ಯೆ ಆಲಮಟ್ಟಿ ಜಲಾಶಯದ ನೀರಿನ ಮೇಲೆ ತೆಲಂಗಾಣ ಸರ್ಕಾರದ ಕಣ್ಣು ಬಿದ್ದಿದ್ದು ಕುಡಿಯಲು ಹಾಗೂ ಕೃಷಿಗೆ 5 ಟಿಎಂಸಿ ನೀರನ್ನು ಜುಲಾರಾ ಡ್ಯಾಂಗೆ ಹರಿಸುವಂತೆ ಪತ್ರ ಬರೆಯಲಾಗಿದೆ. ಆದರೆ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿಜಯಪುರ ಜಿಲ್ಲೆ ರೈತರು ನೀರು ಬಿಡುಗಡೆ ಮಾಡದಂತೆ ಆಗ್ರಹಿಸಿದ್ದಾರೆ.

ಬ್ರಿಜೇಶ್ ಕುಮಾರ್ ನೇತೃತ್ವದ 2ನೇ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ತೆಲಂಗಾಣ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಸಲ್ಲಿಕೆ ಮಾಡಿದೆ. ಇದರಿಂದ ಆಲಮಟ್ಟಿ ಜಲಾಶಯದ ನೀರಿನ ಮಟ್ಟದ ಏರಿಕೆಗೆ ಈಗಾಗಲೇ ಕೊಕ್ಕೆ ಬಿದ್ದಿದೆ. ಕರ್ನಾಟಕದ ವಿರುದ್ಧ ಅರ್ಜಿ ಸಲ್ಲಿಕೆ ಮಾಡಿರುವ ತೆಲಂಗಾಣಕ್ಕೆ ಯಾಕೆ ನೀರು ಕೊಡಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಏನಾದರೂ ತೆಲಂಗಾಣಕ್ಕೆ ನೀರು ಬಿಟ್ಟರೇ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಈಗಾಗಲೇ ತಿಳಿಸಲಾಗಿದೆ. ಈಗಾಗಲೇ ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿದೆ. ಕೇವಲ 58 ಟಿಎಂಸಿ ನೀರು ಅಷ್ಟೇ ಲಭ್ಯ ಇದೆ. ಮುಂದೆ ಬೇಸಿಗೆ ಹಾಗೂ ಹಿಂಗಾರು ಹಂಗಾಮು‌ ಬೆಳೆಗೆ ನೀರಿನ ಅಗತ್ಯ ಇದ್ದೇ ಇರುತ್ತದೆ. ಯಾವುದೇ ಕಾರಣಕ್ಕೂ ತೆಲಂಗಾಣಕ್ಕೆ ನೀರು ಬಿಡಬಾರದು ಎಂದು ಆಗ್ರಹವಿದೆ.

ಇದನ್ನೂ ಓದಿ:ಮೇಡಂ ಸೆಲ್ಫಿ ಅಂತಾ ಬಂದು ಖ್ಯಾತ ನಟಿಗೆ KISS ಕೊಡಲು ಯತ್ನಿಸಿದ ಫ್ಯಾನ್; ಆಮೇಲೆ ಏನಾಯ್ತು?

publive-image

ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಇದೆ, ನಮ್ಮ ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಇದೆ. ಹೀಗಾಗಿ ಒಂದು ವೇಳೆ ತೆಲಂಗಾಣ ಸರ್ಕಾರ ಬರೆದ ಪತ್ರದಂತೆ ನೀರು ಬಿಟ್ಟರೆ ಉಗ್ರ ಹೋರಾಟ ಮಾಡಲಾಗುವುದು. ಆಲಮಟ್ಟಿ ಜಲಾಶಯ ಮಟ್ಟದ ಎತ್ತರಕ್ಕೂ ತೆಲಂಗಾಣ ವಿರೋಧ ಮಾಡಿದೆ. ಹೀಗಾಗಿ ನೀರು ಬಿಡುವ ಮಾತೇ ಇಲ್ಲ. ಒಂದು ವೇಳೆ ನೀರು ಬಿಟ್ಟಲ್ಲಿ ಜಲಾಶಯದ ಮುಂಭಾಗ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment