/newsfirstlive-kannada/media/post_attachments/wp-content/uploads/2025/04/Hyderabad-University-2.jpg)
ತೆಲಂಗಾಣ ಸರ್ಕಾರವು ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿ ಪಕ್ಕದ 400 ಎಕರೆ ಭೂಮಿಯನ್ನು ಐಟಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಯೋಜನೆ ಘೋಷಿಸಿತ್ತು. ಯೂನಿವರ್ಸಿಟಿಯ 400 ಎಕರೆ ಭೂಮಿಗೆ ಕೈ ಹಾಕಿ ಕಾಂಗ್ರೆಸ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಸದ್ಯ ಭಾರೀ ಹೋರಾಟಕ್ಕೆ ನಾಂದಿ ಹಾಡಿದ್ದ ಈ ವಿವಾದಕ್ಕೆ ಕೋರ್ಟ್ ಮಧ್ಯ ಪ್ರವೇಶಿಸಿದೆ.
ಇದನ್ನೂ ಓದಿ: ವಿವಿಧ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿ.. ಎಷ್ಟು ಉದ್ಯೋಗಗಳು ಖಾಲಿ ಇವೆ?
ಐಟಿ ಕೇಂದ್ರಕ್ಕಾಗಿ 400 ಎಕರೆ ಅರಣ್ಯ ನಾಶ..?
ತೆಲಂಗಾಣದ ಕಾಂಗ್ರೆಸ್ ಸರ್ಕಾರವು ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿ ಕ್ಯಾಂಪಸ್ ಪಕ್ಕದಲ್ಲಿರುವ 400 ಎಕರೆ ಭೂಮಿಯನ್ನು ಐಟಿ ಕೇಂದ್ರವಾಗಿ ಮರು ಅಭಿವೃದ್ಧಿಗೊಳಿಸುವ ಯೋಜನೆಯನ್ನು ಪ್ರಕಟಿಸಿದೆ. ಸರ್ಕಾರದ ಈ ನಿಲುವಿನಿಂದ ಕಾಂಗ್ರೆಸ್ ಪಕ್ಷ ಮತ್ತು ವಿದ್ಯಾರ್ಥಿಗಳ ನಡುವೆ ದೊಡ್ಡ ಮಟ್ಟದ ಜಟಾಪಟಿ ಏರ್ಪಟ್ಟಿದೆ. ವಿರೋಧ ಪಕ್ಷಗಳಾದ ಬಿಆರ್ಎಸ್ ಮತ್ತು ಬಿಜೆಪಿಯು ಸಹ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಂತಿದ್ದು, ಯೋಜನೆಯು ವಿವಾದದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ. ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿ ಕ್ಯಾಂಪಸ್ ಪಕ್ಕದಲ್ಲಿರುವ 400 ಎಕರೆ ಭೂಮಿಯನ್ನು ಐಟಿ ಕೇಂದ್ರವಾಗಿ ಮರು ಅಭಿವೃದ್ಧಿಗೊಳಿಸುವ ಯೋಜನೆ ಘೋಷಿಸಿತ್ತು.
ಇದನ್ನೂ ಓದಿ: IPL ಗದ್ದಲದಲ್ಲಿಯೇ ತಂಡವೊಂದನ್ನು ಖರೀದಿ ಮಾಡಿದ ಸಚಿನ್ ಪುತ್ರಿ ! ಯಾವುದು ಆ ತಂಡ?
ಏನಿದು ವಿವಾದ?
ಈ ಯೋಜನೆಯ ಪ್ರಕಾರ, ಗಚ್ಚಿಬೌಲಿ ಪ್ರದೇಶದಲ್ಲಿರುವ ಸರ್ಕಾರಿ ಭೂಮಿಯನ್ನು ‘ಸಿಲಿಕಾನ್ ವ್ಯಾಲಿ’ ತರಹದ ಅಭಿವೃದ್ಧಿಯ ಭಾಗವಾಗಿ ಐಟಿ ಪಾರ್ಕ್ ಮತ್ತು ಇತರ ವಾಣಿಜ್ಯ ಯೋಜನೆಗಳಿಗೆ ಬಳಸಿಕೊಳ್ಳುವ ಉದ್ದೇಶವನ್ನ ಸರ್ಕಾರ ಹೊಂದಿದೆ.. ಆದರೆ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಆಡಳಿತವು ಈ ಭೂಮಿಯು HCUಗೆ ಸೇರಿದೆ ಎಂದು ಪ್ರತಿಪಾದಿಸಿದ್ದಾರೆ.. ಅಲ್ಲದೇ ಇದನ್ನ ವಾಣಿಜ್ಯ ಉದ್ದೇಶಗಳಿಗೆ ಬಳಸುವುದು ಪರಿಸರಕ್ಕೆ ಹಾನಿ ಮಾಡುತ್ತದೆ ಎಂದು ಆರೋಪಿಸಿದ್ದಾರೆ. 400 ಎಕರೆ ಅರಣ್ಯ ನಾಶದ ವಿವಾದ ರಾಜಕೀಯವಾಗಿ ಸಹ ತೀವ್ರ ಚರ್ಚೆಗೆ ಒಳಗಾಗಿದೆ.. ಬಿಜೆಪಿ ಮತ್ತು BRS ಎರಡೂ ಪಕ್ಷಗಳು ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನ ಟೀಕಿಸಿವೆ.
ಇದನ್ನೂ ಓದಿ: ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಬಿಗ್ಬಾಸ್ ಖ್ಯಾತಿಯ ಭವ್ಯಾ ಗೌಡ; ಯಾವ ಸೀರಿಯಲ್?
ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಚ್ಚಿದ ರೇವಂತ್ ರಡ್ಡಿ
ಸರ್ಕಾರದ ಯೋಜನೆಯ ವಿರುದ್ಧ ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ಆರಂಭಿಸಿದ್ರು.. ಮಾರ್ಚ್ನಲ್ಲಿ ಆರಂಭವಾದ ಈ ಆಂದೋಲನವು ಭೂಮಿಯನ್ನು ತೆರವುಗೊಳಿಸಲು ಬುಲ್ಡೋಜರ್‌ಗಳು ಬಂದಾಗ ಉಗ್ರಗೊಂಡಿತ್ತು. ಪ್ರತಿಭಟನೆ ಸಮಯದಲ್ಲಿ ಪೊಲೀಸರು ಹಲವಾರು ವಿದ್ಯಾರ್ಥಿಗಳನ್ನು ಬಂಧಿಸಿದಾಗ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಏಪ್ರಿಲ್ 1ರಂದಂತೂ ABVP ತರಗತಿಗಳನ್ನು ಬಹಿಷ್ಕರಿಸಿ, ಬೃಹತ್ ಆಂದೋಲನ ನಡೆಸಿತ್ತು.
ಇದನ್ನೂ ಓದಿ: ಪೊನ್ನಣ್ಣ, ಮಂಥರ್‌ಗೌಡ ವಿರುದ್ಧ FIR ಆಗೋವರೆಗೂ ಅಂತ್ಯಕ್ರಿಯೆ ಮಾಡಲ್ಲ -ಪಟ್ಟು ಹಿಡಿದ ವಿನಯ್ ಕುಟುಂಬ
ಯೂನಿವರ್ಸಿಟಿ ವಿವಾದ ಸದ್ಯ ತೆಲಂಗಾಣ ಹೈಕೋರ್ಟ್ ಅಂಗಳ ತಲುಪಿದೆ. ಏಪ್ರಿಲ್ 2 ರಂದು, ಹೈಕೋರ್ಟ್ ಈ ಭೂಮಿಯ ಮೇಲಿನ ಯಾವುದೇ ಅಭಿವೃದ್ಧಿ ಕಾರ್ಯವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶಿಸಿದೆ. ಹೈಕೋರ್ಟ್ನ ಸ್ಟೇ ಆದೇಶದ ನಂತರ ಪ್ರಸ್ತುತ ಈ ಯೋಜನೆಗೆ ಬ್ರೇಕ್ ಬಿದ್ದು ವಿದ್ಯಾರ್ಥಿಗಳ ಹೋರಾಟಕ್ಕೆ ಗೆಲುವು ಸಿಕ್ಕಂತಾಗಿದೆ. ಇನ್ನೊಂದಡೆ ತೆಲಂಗಾಣ ಕಾಂಗ್ರೆಸ್ ಸರ್ಕಾರವು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.. ಈ ಯೋಜನೆಯು ರಾಜ್ಯದ ಅಭಿವೃದ್ಧಿಗೆ ಅವಶ್ಯಕ ಎಂದು ಹೇಳಿದೆ. ಚರ್ಚೆಗೆ ಸಿಎಂ ರೇವಂತ್, ಉನ್ನತ ಸಚಿವರ ಸಮಿತಿ ರಚಿಸಿರುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ:ಅಮೆರಿಕಾಗೇ ತಿರುಗುಬಾಣ ಆಯ್ತು ಟ್ರಂಪ್ ಸುಂಕ.. ಅಗ್ರ 500 ಶ್ರೀಮಂತರ ಜೇಬಿಗೆ ಕತ್ತರಿ..!
ಒಟ್ನಲ್ಲಿ ಯೂನಿವರ್ಸಿಟಿ ಭೂಮಿಗೆ ಕೈಹಾಕಿ ಕಾಂಗ್ರೆಸ್ ಸರ್ಕಾರ ಕೈ ಸುಟ್ಟುಕೊಂಡಿದೆ. ಸದ್ಯಕ್ಕೆ ವಿವಾದ ತಣ್ಣಗಾಗಿದ್ದು ಹೈಕೋರ್ಟ್ ಮುಂದೆ ಯಾವ ನಿಲುವು ಕೈಗೊಳ್ಳುತ್ತೆ ಅನ್ನೋದೆ ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ