newsfirstkannada.com

ಕಿಲಾಡಿ ಕಳ್ಳ..!! ಪ್ರಯಾಣಿಕರಿದ್ದ ಸರ್ಕಾರಿ ಬಸ್ಸನ್ನೇ ಹೈಜಾಕ್ ಮಾಡಿದ ಭೂಪ.. ಆಮೇಲೆ ಏನಾಯ್ತು..?

Share :

Published September 12, 2023 at 4:18pm

    RTC ಡ್ರೈವರ್ ವೇಷದಲ್ಲಿ ಬಂದು ಡ್ರೈವ್ ಮಾಡೇ ಬಿಟ್ಟ..!

    ಹೆಂಗೆಂಗೋ ಡ್ರೈವ್ ಮಾಡಿದ, ಪ್ರಯಾಣಿಕರು ಕಕ್ಕಾಬಿಕ್ಕಿ..!

    ಬದುಕಿತು ಜೀವ ಅನ್ನೋಷ್ಟರಲ್ಲಿ ಕಳ್ಳ ಹೋಗಿದ್ದೆಲ್ಲಿಗೆ..!?

ತೆಲಂಗಾಣದ ಸಿರಿಸಿಲ್ಲ ಜಿಲ್ಲೆಯ ಸಾರಂಪಲ್ಲಿಯಲ್ಲಿ ನೀವು ಯಾರೂ ಊಹಿಸಿರದ ಪ್ರಸಂಗವೊಂದು ನಡೆದಿದೆ. ಕಿಲಾಡಿ ಕಳ್ಳನೊಬ್ಬ ಪ್ರಯಾಣಿಕರಿದ್ದ TSRTC ಬಸ್ಸನ್ನೇ ಕದ್ದೊಯ್ದು ಆತಂಕ ಸೃಷ್ಟಿಸಿದ್ದ.

ಕಳೆದ ಭಾನುವಾರ ರಾತ್ರಿ ಈ ಕೃತ್ಯ ನಡೆಸಿದ್ದಾನೆ. ರಾಜ್ಯದ ಸಿದ್ದಿಪೇಟ್ ಡಿಪೋಗೆ ಸೇರಿದ TSRTC ಬಸ್ಸನ್ನು ಎಗರಿಸಿದ್ದ. ಜುಬಿಲಿ ಬಸ್ ನಿಲ್ದಾಣದಲ್ಲಿ ಡ್ರೈವರ್​, ಬಸ್ ನಿಲ್ಲಿಸಿ ಆಹಾರ ಸೇವನೆಗೆ ಹೋಗಿದ್ದ. ಇದೇ ಸಮಯಕ್ಕಾಗಿ ಕಾದು ಕೂತಿದ್ದ ಕಳ್ಳ, ಆರ್​ಟಿಸಿ ಡ್ರೈವರ್​ನಂತೆ ವೇಷ ಧರಿಸಿ ಡ್ರೈವರ್ ಸೀಟ್​ ಮೇಲೆ ಕೂತಿದ್ದಾನೆ. ಬಸ್ ಸ್ಟಾರ್ಟ್ ಮಾಡಿದ ಆತ, ನಂತರ ಬಸ್ಸಿನಲ್ಲಿ ಕೂತಿದ್ದ ಪ್ರಯಾಣಿಕರಿಗೆ ಟಿಕೆಟ್ ನೀಡಿ ಹಣವನ್ನು ಎತ್ತಿದ್ದಾನೆ. ನಂತರ ಬಸ್ ನಿಲ್ದಾಣದಿಂದ ಸ್ಟಾರ್ಟ್​ ಮಾಡಿಕೊಂಡು ಹೋಗಿದ್ದಾನೆ. ಆದರೆ ಕಳ್ಳನಿಗೆ ಬಸ್ ಚಾಲನೆ ಮಾಡಲು ಸರಿಯಾಗಿ ಬಂದಿರಲಿಲ್ಲ. ಅಡ್ಡಾದಿಡ್ಡಿ ಓಡಿಸುತ್ತಿದ್ದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿ ಆತನ ಪ್ರಶ್ನೆ ಮಾಡಿದ್ದಾರೆ.

ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಲು ಶುರು ಮಾಡಿದ ಬೆನ್ನಲ್ಲೇ ಕಳ್ಳನಿಗೆ ಭಯ ಶುರುವಾಗಿದೆ. ನಂತರ ಡ್ರೈವರ್ ಸೀಟ್​ನಿಂದ ಜಿಗಿದು ಎಸ್ಕೇಪ್ ಆಗಿದ್ದಾನೆ. ವಿಚಾರ ಗೊತ್ತಾಗುತ್ತಿದ್ದಂತೆಯೇ ಆರ್​ಟಿಸಿ ಅಧಿಕಾರಿಗಳು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿದ್ದಿಪೇಟೆ ಪೊಲೀಸರು ಕಳ್ಳನಿಗಾಗಿ ಹುಡುಕಾಟ ನಡೆಸಿದ್ದಾರೆ. ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರು ಮೊಬೈಲ್​​ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಲಾಡಿ ಕಳ್ಳ..!! ಪ್ರಯಾಣಿಕರಿದ್ದ ಸರ್ಕಾರಿ ಬಸ್ಸನ್ನೇ ಹೈಜಾಕ್ ಮಾಡಿದ ಭೂಪ.. ಆಮೇಲೆ ಏನಾಯ್ತು..?

https://newsfirstlive.com/wp-content/uploads/2023/09/RTC.jpg

Load More