/newsfirstlive-kannada/media/post_attachments/wp-content/uploads/2024/12/allu-arjun2.jpg)
ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಚಿಕ್ಕಡಪಲ್ಲಿ ಪೊಲೀಸರು ಬಿಗ್ ಟ್ವಿಸ್ಟ್ ನೀಡಿದ್ದಾರೆ. ಕೇಸ್​ನಲ್ಲಿ ಅಲ್ಲು ಅರ್ಜುನ್​ಗೆ ಜೈಲು ದರ್ಶನ ಮಾಡಿಸಿದ್ದ ಪೊಲೀಸರು ಇದೀಗ, ಬೇಲ್ ರದ್ದು ಮಾಡುವಂತೆ ಸುಪ್ರೀಂ ಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಅದೊಂದು ಕಾರಣಕ್ಕೆ ಅಲ್ಲು ಅರ್ಜುನ್​ ಮತ್ತೊಮ್ಮೆ ಜೈಲು ಪಾಲಾಗುವ ಆತಂಕ ಹೆಚ್ಚಿಸಿದೆ..
ಪುಷ್ಪರಾಜ್​ಗೆ ತಪ್ಪದ ಸಂಕಷ್ಟ!
ಪುಷ್ಪ-2 ಸಕ್ಸಸ್​ ಅಲೆಯಲ್ಲಿ ತೇಲ್ತಿದ್ದ ಅಲ್ಲು ಅರ್ಜುನ್ ಸದ್ಯ ಜೈಲಿನ ಸಂಕಷ್ಟದಿಂದ ಪಾರಾಗಿದ್ರೂ ಈಗ ಮತ್ತೊಮ್ಮೆ ಕತ್ತಲೆ ಕಂಬಿಯ ಕಂಟಕ ಎದುರಾಗುವ ಆತಂಕ ಹೆಚ್ಚಿಸಿದೆ. ಈ ಹೊಸ ಆತಂಕ ಹೆಚ್ಚಲು ಕಾರಣ, ತೆಲಂಗಾಣ ಸರ್ಕಾರ ಇಟ್ಟ ಹೆಜ್ಜೆ..
ಪುಷ್ಪರಾಜ್​ಗೆ ತಪ್ಪದ ಕಂಟಕ!
- ಹೈದರಾಬಾದ್‌ನ ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸ್
- ಕಾಲ್ತುಳಿತ ಕೇಸ್​​​​ನಲ್ಲಿ ಅಲ್ಲು ಅರ್ಜುನ್ 11ನೇ ಆರೋಪಿ
- ಕಳೆದ ಶುಕ್ರವಾರ ಬಂಧಿಸಿದ ದಿನವೇ ಮಧ್ಯಂತರ ಬೇಲ್​​​
- 6 ವಾರಗಳ ಮಧ್ಯಂತರ ಜಾಮೀನು ನೀಡಿದ್ದ ಹೈಕೋರ್ಟ್​
- ಸಂಧ್ಯಾ ಥಿಯೇಟರ್ ಬಳಿ ಭೇಟಿ ನೀಡುವ ಬಗ್ಗೆ ಮಾಹಿತಿ
- ಹೆಚ್ಚುವರಿ ಭದ್ರತೆ ನೀಡಲಾಗದು ಎಂದಿದ್ದ ಪೊಲೀಸರು
- ಪೊಲೀಸರು ಹೇಳಿದ ಮೇಲು ಪುಷ್ಪರಾಜ್​​ ನಿರ್ಲಕ್ಷ್ಯತನ
- ಸಂಧ್ಯಾ ಥಿಯೇಟರ್​​ಗೆ ಭೇಟಿ ನೀಡಿದ್ದ ಅಲ್ಲು ಅರ್ಜುನ್​​
- ಈ ವಿಚಾರವನ್ನ ಹೈಕೋರ್ಟ್​ನ ಗಮನಕ್ಕೆ ತಂದಿರಲಿಲ್ಲ
- ಬೇಲ್​​ ರದ್ದಿಗೆ ಸುಪ್ರೀಂ ಕದತಟ್ಟಲು ಸಜ್ಜಾದ ಪೊಲೀಸರು
- ಭದ್ರತೆ ಮತ್ತು ನಟ ಅಲ್ಲು ಅರ್ಜುನ್​​ ನಿರ್ಲಕ್ಷ್ಯ ಪ್ರಸ್ತಾಪ
ಇದನ್ನೂ ಓದಿ:70 ವರ್ಷದ ಪತಿಗೆ ವಿಚ್ಛೇದನ ನೀಡಿದ 73 ವರ್ಷದ ಪತ್ನಿ; ಜೀವನಾಂಶ ನೀಡಲು ರೈತ ಮಾಡಿದ್ದೇನು?
ಚಿಕ್ಕಡಪಲ್ಲಿ ಪೊಲೀಸರು ಸಂಧ್ಯಾ ಥಿಯೇಟರ್​ಗೆ ಪುಷ್ಪ 2 ಚಿತ್ರತಂಡಕ್ಕೆ ಬರಬಾರದು ಎಂದು ಲಿಖಿತವಾಗಿ ಪತ್ರದ ಮೂಲಕ ಸೂಚಿಸಿದ್ದರಂತೆ.. ಪುಷ್ಪ-2 ಚಿತ್ರತಂಡಕ್ಕೆ ಥಿಯೇಟರ್‌ಗೆ ಬರಲು ಅನುಮತಿ ನೀಡಿಲ್ಲ ಅಂತ ಪೊಲೀಸರು ಹೇಳ್ತಿದ್ದಾರೆ. ಅಲ್ಲು ಅರ್ಜುನ್ ಅನುಮತಿಯಿಲ್ಲದೆ ಥಿಯೇಟರ್‌ಗೆ ಬಂದಿದ್ದಷ್ಟೇ ಅಲ್ಲ, ಕೊನೆಗೆ ಅನುಮತಿ ಇಲ್ಲದೆ ಱಲಿ ಮೂಲಕ ತೆರಳಿದ್ದಾರೆ ಅಂತ ಪೊಲೀಸರು ಹೊಸ ವಾದ ಮಂಡಿಸ್ತಿದ್ದಾರೆ.
ನಟ ಅಲ್ಲು ಅರ್ಜುನ್ ಜಾಮೀನು ರದ್ದತಿಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಹೈದರಾಬಾದ್ ಪೊಲೀಸರ ನಿರ್ಧರಿಸಿದ್ದಾರೆ. ಅದಕ್ಕೆ ತೆಲಂಗಾಣ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ವರದಿಯಾಗಿದೆ. ಹೀಗಾಗಿ ಸುಪ್ರೀಂಕೋರ್ಟ್​ನ ಜಾಮೀನು ಪರೀಕ್ಷೆ ಎದುರಿಸುವ ಸವಾಲು ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ