ಒಂದು ರಾತ್ರಿ ಜೈಲಿನಲ್ಲಿ ಕಳೆದ ಅಲ್ಲು ಅರ್ಜುನ್; ಬೆಳ್ಳಂಬೆಳಗ್ಗೆ ಅಭಿಮಾನಿಗಳಿಗೆ ಗುಡ್​​ನ್ಯೂಸ್​..!

author-image
Veena Gangani
Updated On
ನಂಬಲು ಅಸಾಧ್ಯ, ಹೃದಯ ವಿದ್ರಾವಕ -ರಶ್ಮಿಕಾ ಮಂದಣ್ಣ ಆಕ್ರೋಶ
Advertisment
  • ಸ್ಟಾರ್​ ಅಲ್ಲು ಅರ್ಜುನ್​ ವಿಚಾರಣಾಧೀನ ಖೈದಿ ನಂಬರ್​ ಎಷ್ಟು?
  • ಅಪ್ಪನಿಗಾಗಿ ಕಾದು ಕಾದು ಸುಸ್ತಾದ ಅಲ್ಲು ಅರ್ಜುನ್ ಪುತ್ರಿ ಅರ್ಹಾ
  • ಕಾಡ್ಗಿಚ್ಚಿನಂತೆ ದೇಶದೆಲ್ಲೆಡೆ ದೊಡ್ಡ ಸಂಚಲನ ಸೃಷ್ಟಿಸಿದೆ ಅಲ್ಲು ಕೇಸ್

ಪುಷ್ಪ-2 ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದ ಅಲ್ಲು ಅರ್ಜುನ್ ಬಂಧನ ದೇಶಾದ್ಯಂತ ಸಂಚಲನ ಸಷ್ಟಿಸಿತ್ತು. ಇಂದು ಬೆಳ್ಳಂಬೆಳಗ್ಗೆ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಬೆಳಗ್ಗೆ 6.30ರ ಸುಮಾರಿಗೆ ಜೈಲಿನಿಂದ ಐಕಾನ್ ಸ್ಟಾರ್ ರಿಲೀಸ್ ಆಗಿದ್ದಾರೆ.

ಪೊಲೀಸ್​ ಬಿಗಿ ಭದ್ರತೆಯೊಂದಿಗೆ ಚಂಚಲಗೂಡ ಸೆಂಟ್ರಲ್ ಜೈಲಿನ ಹಿಂಬದಿ ಗೇಟ್​ನಿಂದ ನಟ ಅಲ್ಲು ಅರ್ಜುನ್​ ಅವರನ್ನು ರಿಲೀಸ್ ಮಾಡಲಾಗಿದೆ. 4 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನಿನ್ನೆಯೇ ಬೇಲ್​​ ಸಿಕ್ಕರೂ ಕೂಡ ಅಲ್ಲು ಅರ್ಜುನ್​​ ಜೈಲಿನಲ್ಲಿ ಒಂದು ರಾತ್ರಿ ಕಳೆಯುವಂತಾಗಿತ್ತು.

ಇದನ್ನೂ ಓದಿ: ಮೆಹಂದಿ ಮಾಸುವ ಮುನ್ನವೇ ಶೂಟಿಂಗ್​ ಸೆಟ್​ಗೆ ಬಂದ ಚಿನ್ನುಮರಿ ಜಾಹ್ನವಿ; ಫ್ಯಾನ್ಸ್​ ಫುಲ್​ ಖುಷ್

publive-image

ಐಕಾನ್​ ಸ್ಟಾರ್​​ ಅಲ್ಲು ಅರ್ಜುನ್​ ಅರೆಸ್ಟ್ ವಿಚಾರ ಪುಷ್ಪ-2 ಚಿತ್ರದ ಕತೆಯನ್ನೇ ಮೀರಿಸಿದೆ. ನಿನ್ನೆ ಬೆಳಗ್ಗೆ ಅರೆಸ್ಟ್​​ ಆದ ಅಲ್ಲು ಅರ್ಜುನ್​​​​​ ಮಧ್ಯಾಹ್ನ ಜೈಲು ಸೇರಿದ್ರು. ಸಂಜೆ ಬಳಿಕ ಹೈಕೋರ್ಟ್​ ಮೆಟ್ಟಿಲೇರಿ ಜಾಮೀನು ಪಡೆದ್ರೂ, ಬೇಲ್ ಕಾಪಿ ಜೈಲಾಧಿಕಾರಿಗೆ ಸಿಗದ ಕಾರಣ ಜೈಲಿನಲ್ಲಿ ರಾತ್ರಿ ಕಳೆದ್ರು. ಇದೀಗ ಬೆಳಗ್ಗೆ 6.35ಕ್ಕೆ ಜೈಲಿನಿಂದ ರಿಲೀಸ್ ಆಗಿದ್ದಾರೆ.​ ಅಲ್ಲು ಅರ್ಜುನ್​ಗೆ ರಿಲೀಸ್​ ಆಗುತ್ತಿದ್ದಂತೆ ಅಲ್ಲು ಅರ್ಜುನ್​ ಮನೆಯಲ್ಲಿ ದುಃಖದ ಜೊತೆ ಸಂತಸವೂ ಮನೆ ಮಾಡಿದೆ.

publive-image

ಆದರೆ ನಿನ್ನೆ ಜಾಮೀನು ಸಿಕ್ಕ ಕೂಡಲೇ ಅಪ್ಪ ಮನೆಗೆ ಬರ್ತಾರೇ ಅಂತ ಅಲ್ಲು ಪುತ್ರಿ ಅರ್ಹಾ ಮನೆಯ ಕಿಟಿಕಿಯಿಂದಲೇ ಹೊರ ನೊಡುತ್ತಾ ಕಾದುಕಾದು ಸುಸ್ತಾದ್ರು. ಅಲ್ಲು ಅರ್ಜುನ್​ ಬಂಧನದ ನಂತರ ಹಲವಾರು ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಅಲ್ಲು ಪರವಾಗಿ ನಿಂತಿದ್ದಾರೆ. ಜೊತೆಗೆ ಅಲ್ಲು ಅರ್ಜುನ್​​ ಅರೆಸ್ಟ್​​ ಆಗಿರೋ ಸುದ್ದಿ ಕೇಳಿದ ಮೆಗಾ ಸ್ಟಾರ್​ ಚಿರಂಜೀವಿ ಶೂಟಿಂಗ್​ ಕ್ಯಾನ್ಸಲ್​​ ಮಾಡಿ ಅಲ್ಲು ನಿವಾಸಕ್ಕೆ ಓಡೋಡಿ ಬಂದ್ರು. ಅತ್ತ ಆಂಧ್ರ ಡಿಸಿಎಂ ಪವನ್​ ಕಲ್ಯಾಣ್​ ಕೂಡ ಸ್ಪೆಷಲ್​ ಫ್ಲೈಟ್​ ಮೂಲಕ ಹೈದ್ರಾಬಾದ್​ಗೆ ಧಾವಿಸಿ ಅಲ್ಲು ಫ್ಯಾಮಿಲಿಗೆ ಧೈರ್ಯ ತುಂಬಿದ್ರು.

publive-image

ನಟ ಅಲ್ಲು ಅರ್ಜುನ್​​​ ಅರೆಸ್ಟ್​​ ಆದ ಸುದ್ದಿ ಕಾಡ್ಗಿಚ್ಚಿನಂತೆ ದೇಶದೆಲ್ಲೆಡೆ ದೊಡ್ಡ ಸಂಚಲನ ಸೃಷ್ಟಿಸಿತ್ತು. ಈ ಬಂಧನ ರಾಜಕೀಯ ಜಟಾಪಟಿಗೂ ಕಾರಣ ಆಗಿದೆ. ಆಂಧ್ರ ಮಾಜಿ ಸಿಎಂ ಜಗನ್​​​, ತೆಲಂಗಾಣ ಮಾಜಿ ಡಿಸಿಎಂ ಕೆಟಿಆರ್​​, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್​​ ಖಂಡಿಸಿದ್ದಾರೆ. ಅಲ್ಲು ಅರ್ಜುನ್​ ಬಂಧನದ ಹಿಂದೆ ರಾಜಕೀಯ ಕೈವಾಡವಿದೆ ಅಂತ ಆರೋಪಿಸಿದ್ದಾರೆ. ಆದ್ರೆ ಈ ಆರೋಪವನ್ನ ತೆಲಂಗಾಣ ಸಿಎಂ ರೇವಂತ್​ ರೆಡ್ಡಿ, ತಳ್ಳಿಹಾಕಿದ್ದಾರೆ

ಕಾನೂನು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಪ್ರಕರಣದ ತನಿಖೆಯಲ್ಲಿ ಯಾರೂ ಮಧ್ಯಪ್ರವೇಶಿಸುವುದಿಲ್ಲ.

ತೆಲಂಗಾಣ ಸಿಎಂ ರೇವಂತ್​ ರೆಡ್ಡಿ

ಪುಷ್ಪ-2 ಸಕ್ಸಸ್​ ಅಲೆಯಲ್ಲಿ ತೇಲ್ತಿದ್ದ ಅಲ್ಲು ಅರ್ಜುನ್ ಸದ್ಯ ಜೈಲಿನ ಸಂಕಷ್ಟದಿಂದ ಪಾರಾಗಿದ್ದಾರೆ. ಆದ್ರೆ ಗೊತ್ತಿದ್ದೂ ಗೊತ್ತಿಲ್ಲದೇನೋ ಮಾಡಿದ ತಪ್ಪಿಗೆ ಅಲ್ಲು ಅರ್ಜುನ್​ ಶಿಕ್ಷೆ ಅನುಭವಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment