ರಾತ್ರಿ ರಾಡ್​ನಿಂದ ಬೀಗ ಹೊಡೆದು ಮನೆಗೆ ನುಗ್ಗಿದ್ದ ಕಳ್ಳ.. ತಾನೇ 20 ರೂಪಾಯಿ ಇಟ್ಟು ಹೋದ!

author-image
Bheemappa
Updated On
ರಾತ್ರಿ ರಾಡ್​ನಿಂದ ಬೀಗ ಹೊಡೆದು ಮನೆಗೆ ನುಗ್ಗಿದ್ದ ಕಳ್ಳ.. ತಾನೇ 20 ರೂಪಾಯಿ ಇಟ್ಟು ಹೋದ!
Advertisment
  • ಕಳ್ಳರಲ್ಲೂ ವಿಚಿತ್ರ ವಿಚಿತ್ರ ಕಳ್ಳರು ಇರುತ್ತಾರೆ, ಇವನು ಯಾವ ರೀತಿ ಕಳ್ಳ?
  • ರಾಡ್​ನಿಂದ ಬೀಗ ಒಡೆದು ಕಳ್ಳತನ ಮಾಡಲೆಂದು ನುಗ್ಗಿದ್ದ ಖದೀಮ
  • ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಮುಂದೆ ಕಳ್ಳ ಹೇಳಿರುವುದು ಏನು?

ಕಳ್ಳರಲ್ಲೂ ವಿಚಿತ್ರ ವಿಚಿತ್ರ ಕಳ್ಳರು ಇರುತ್ತಾರೆ. ಹಗಲು ಕದಿಯುವವರು ಬೇರೆ, ರಾತ್ರಿ ಕದಿಯುವವರೇ ಬೇರೆ. ದೇವಾಲಯಗಳಿಗೆ ನುಗ್ಗಿ ಹುಂಡಿಗಳನ್ನು ಲೂಟಿ ಮಾಡಿ ಅದರಲ್ಲಿನ ಹಣ ಕದ್ದು ಓಡಿ ಹೋದ ಖದೀಮರು ಇದ್ದಾರೆ. ಸಿಸಿಟಿವಿ ಇದ್ದರೂ ಹೆದರದೇ ಕಳ್ಳತನ ಮಾಡಿದ್ದು ಉಂಟು. ಇಲ್ಲೊಬ್ಬ ಕಳ್ಳ ಮನೆಗೆ ನುಗ್ಗಿ ಕದಿಯಲೆಂದು ಹುಡುಕಾಡಿ.. ಹುಡುಕಾಡಿ ಸುಸ್ತಾಗಿ ಕೊನೆಗೆ ಏನು ಮಾಡಿದ್ದಾನೆ ಗೊತ್ತಾ?.

ಇದನ್ನೂ ಓದಿ:‘ಕ್ಯಾಪ್ಟನ್ ಅಲ್ಲ, ಲೀಡರ್​​ನಂತೆ ಕಾಣಿಸಿದ್ದಾರೆ’.. ರೋಹಿತ್ ಶರ್ಮಾ ಬಗ್ಗೆ ಸೂರ್ಯಕುಮಾರ್ ಅಚ್ಚರಿ ಹೇಳಿಕೆ!

ಭಾರೀ ಆಸೆಗಳನ್ನು ಇಟ್ಟುಕೊಂಡ ಕಳ್ಳನೊಬ್ಬ ಫುಲ್ ಮಾಸ್ಕ್​​ ಧರಿಸಿ, ರಾಡ್​ ಹಿಡಿದು ರಾತ್ರಿ ಯಾರು ಇಲ್ಲದ ಮನೆಯ ಬೀಗ ಹೊಡೆದು ಕದಿಯಲೆಂದು ನುಗ್ಗಿದ್ದಾನೆ. ಮನೆ ಒಳಗೆ ಹೋದವನೇ ಚಿನ್ನಾಭರಣ, ಬೆಳ್ಳಿ ಹಾಗೂ ದುಡ್ಡು ಇರಬಹುದೆಂದು ಆ ಮನೆಯನ್ನೆಲ್ಲ ತಡಕಾಡಿದ್ದಾನೆ. ಆ ಮನೆಯಲ್ಲಿ ವಸ್ತುಗಳು ಬಿಟ್ಟರೇ ಬೇರೆ ಏನು ಇಲ್ಲ. ದುಡ್ಡಂತೂ ಒಂದು ಬಿಡಿಗಾಸೂ ಕೂಡ ಸಿಕ್ಕಿಲ್ಲ. ಇದರಿಂದ ಕಳ್ಳ ಭಾರೀ ನಿರಾಸೆಗೆ ಒಳಗಾಗಿ ಮನೆಯ ಸಿಸಿಟಿವಿ ಮುಂದೆ ಬಂದು ಕೈ ತೋರಿಸುತ್ತ ಏನೋ ಹೇಳಿದ್ದಾನೆ.

ಇದನ್ನೂ ಓದಿ: ಮಾರ್ಟಿನ್ ಅಲ್ಲ.. ಸತ್ಯಾ ರೆಡ್ಡಿ, ಸುನೀಲ್​ ರೆಡ್ಡಿಯಿಂದ ಸ್ಯಾಂಡಲ್​ವುಡ್​ಗೆ ಪಂಗನಾಮ.. AP ಅರ್ಜುನ್ ಹೇಳಿದ ಸತ್ಯವೇನು..?


">July 26, 2024

ಬಳಿಕ ಮನೆಯಲ್ಲಿದ್ದ ಫ್ರಿಡ್ಜ್ ಒಳಗಿಂದ ಒಂದು ನೀರಿನ ಬಾಟಲ್ ತೆಗೆದುಕೊಂಡಿದ್ದಾನೆ. ಅದನ್ನು ಸಿಸಿಟಿವಿ ಕ್ಯಾಮೆರಾ ಮುಂದೆ ತೋರಿಸುತ್ತ ಈ ಬಾಟಲ್​ ತಗೊಂಡಿದ್ದಕ್ಕೆ 20 ರೂಪಾಯಿಗಳನ್ನು ಇಟ್ಟು ಹೋಗುತ್ತಿದ್ದೇನೆ ಎಂದು ಸನ್ನೆಗಳನ್ನು ಮಾಡಿದ್ದಾನೆ. ಪರ್ಸ್​​ನಿಂದ 20 ರೂಪಾಯಿಗಳನ್ನು ತೆಗೆದು ಟೇಬಲ್​ ಮೇಲೆ ಇಟ್ಟು ಹೋಗಿದ್ದಾನೆ. ಸ್ವಾರಸ್ಯಕರವಾದ ಘಟನೆ ನಡೆದಿರೋದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮಹೇಶ್ವರಂ ಗ್ರಾಮದ ಮನೆಯೊಂದರಲ್ಲಿ ನಡೆದಿದೆ. ಈ ವಿಡಿಯೋ ನೋಡಿದವರೆಲ್ಲ ನಕ್ಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment