/newsfirstlive-kannada/media/post_attachments/wp-content/uploads/2025/02/TELANGANA-TUNNEL.jpg)
ತೆಲಂಗಾಣದಲ್ಲಿ ಶ್ರೀಶೈಲಂ ನಿಂದ ದೇವರಕೊಂಡಕ್ಕೆ ಕನೆಕ್ಟ್ ಮಾಡುವ ಸುರಂಗದ ಕಾರ್ಯಚರಣೆಯಲ್ಲಿದ್ದಾಗ, ನಾಗರಕರ್ನೂಲ್ ಬಳಿ ಕಾಂಕ್ರೆಟ್ನ ಮೇಲ್ಛಾವಣಿ ಕುಸಿದು ಬಿದ್ದ ಕಾರಣ 8 ಜನರು ಒಳಗೆ ಸಿಲುಕಿಕೊಂಡ ದುರಂತ ಘಟನೆ ನಡೆದಿದೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆಗೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಶುರು ಮಾಡಿದ್ದು ಈಗ ಸ್ಥಳಕ್ಕೆ ಭಾರತೀಯ ಸೇನೆಯ ಇಂಜನೀಯರ್ ಟಾಸ್ಕ್ ಫೋರ್ಸ್ ಕೂಡ ಬಂದಿದೆ.
ಈ ಭೀಕರ ದುರಂತ ಶನಿವಾರ ನಡೆದಿದ್ದು 8 ಜನರು ಇನ್ನೂ ಅವಶೇಷಗಳ ಅಡಿಯಲ್ಲಿಯೇ ಸಿಲುಕಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಲಕರಣೆಗಳನ್ನು ಬಳಸಿ ಒಳಗೆ ಸಿಲುಕಿರವವರ ರಕ್ಷಣಾ ಕಾರ್ಯಾಚರಣೆಗೆ ಸೇನೆ ಹಾಗೂ ಹೆಚ್ಎಡಿಆರ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಶ್ರೀಶೈಲಂನ ಎಡದಂಡೆ ಕಾಲುವೆಗೆ ಕಟ್ಟಲಾಗುತ್ತಿದ್ದ ಸುರಂಗವಿದು ಶ್ರೀಶೈಲಂದಿಂದ ಶುರುವಾಗಿದ ದೇವರಕೊಂಡ ತಲುಪುವ ಕಾಮಗಾರಿ. ಮೇಲ್ಛಾವಣಿಯ ಕಾಂಕ್ರೆಟ್ ಸೋರುವಿಕೆಯಿಂದಾಗಿ ಟನಲ್ ಕುಸಿದು ಬಿದ್ದ ಕಾರಣ ಈ ದುರಂತ ನಡೆದಿದೆ ಎನ್ನಲಾಗಿದೆ.
ಈ ಎಂಟು ಜನರಲ್ಲಿ ಇಬ್ಬರು ಮೂಲಸೌಕರ್ಯಗಳ ಅಭಿಯಂತರರು ಅಂದ್ರೆ ಇಂಜನಿಯರ್ಗಳು, ಯುಎಸ್ ಕಂಪನಿಯ ಇಬ್ಬರು ಸಿಬ್ಬಂದಿಗಳು ಹಾಗೂ ಉಳಿದ ನಾಲ್ಕು ಜನರು ಪಂಜಾಬ್, ಜಾರ್ಖಂಡ, ಉತ್ತರಪ್ರದೇಶ ಹಾಗೂ ಜಮ್ಮು ಕಾಶ್ಮೀರದಿಂದ ಬಂದಿದ್ದ ಕಾರ್ಮಿಕರು ಎಂದು ತಿಳಿದು ಬಂದಿದೆ. ಇನ್ನು ತೆಲಂಗಾಣದ ಸಚಿವ ಎನ್ ಉತ್ತರಮ ಕುಮಾರ್ ರೆಡ್ಡಿ ಸ್ಥಳದಲ್ಲಿಯೇ ಇದ್ದು. ರಾಜ್ಯ ಸರ್ಕಾರ ಕಾರ್ಮಿಕರ ರಕ್ಷಣೆಗೆ ಬೇಕಾದ ಎಲ್ಲಾ ತಜ್ಞರನ್ನು ಕರಸಿಕೊಂಡಿದೆ. ಅವರೆಲ್ಲರೂ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಈ ಹಿಂದೆ ಉತ್ತರಾಖಂಡ್ನಲ್ಲಿ ನಡೆದಂತಹ ಮಾದರಿಯ ದುರ್ಘಟನೆಯೇ ಇಲ್ಲಿಯೂ ನಡೆದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಚೀನಾದಲ್ಲಿ ಮತ್ತೊಂದು ಹೊಸ ವೈರಸ್.. ದೊಡ್ಡ ಸಾಂಕ್ರಾಮಿಕದ ಎಚ್ಚರಿಕೆ ಕೊಟ್ಟ ವಿಜ್ಞಾನಿಗಳು..!
ಇನ್ನು ಪ್ರಧಾನಿ ನರೇಂದ್ರ ಮೋದಿಯವರು ತೆಲಂಗಾಣದ ಸಿಎ ರೇವಂತ್ ರೆಡ್ಡಿಗೆ ಕಾಲ್ ಮಾಡಿ ಮಾತನಾಡಿದ್ದು. ನಡೆದಿರುವ ಅವಘಡದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದಾರೆ. ಕೇಂದ್ರದಿಂದ ಬೇಕಾದ ಯಾವುದೇ ಸಹಾಯವಿರಲಿ ನೀಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ ಅಂತ ತಿಳಿದು ಬಂದಿದೆ.
ಇದನ್ನೂ ಓದಿ:ಮುಹೂರ್ತಕ್ಕೂ ಮುನ್ನ ಶಾಕ್ ಕೊಟ್ಟ ಹುಡುಗಿ.. ಹಾರ್ಟ್ ಅಟ್ಯಾಕ್ ಹೈಡ್ರಾಮಾ; ಸಿನಿಮಾ ಮೀರಿಸುತ್ತೆ ಈ ಸ್ಟೋರಿ!
ಶನಿವಾರದಂದು ಸುಮಾರು 50 ಜನರು ಸುರಂಗದೊಳಗೆ 200 ಮೀಟರ್ ಉದ್ದದ ಬೋರಿಂಗ್ ಮಷಿನ್ ತೆಗೆದುಕೊಂಡು ಹೋಗಿದ್ದರು. ಕಟ್ಟಡ ಕಾಮಗಾರಿ ಇತ್ತೀಚೆಗಷ್ಟೇ ಮರಳಿ ಶುರುವಾಗಿತ್ತು. ಆದ್ರೆ 14 ಕಿಲೋ ಮೀಟರ್ ಅಂತರದೊಳಗೆ ಸುರಂಗ ಕುಸಿದು ಬಿದ್ದ ಕಾರಣ 8 ಜನರು ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಡ್ರೋಣ್ಗಳನ್ನು ಬಳಸಿಕೊಳ್ಳಲಾಗುತ್ತಿದ್ದು. ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಂಗರೇನಿ ಕೊಲೈರಿಸ್ ಕಂಪನಿ ಲಿಮಿಟೆಡ್ನ ಚೇರ್ಮನ್ ಮತ್ತು ಎಂಡಿ ಎನ್ ಬಲರಾಮ್ ಅವರು ಗಣಿಗಾರಿಕೆಯಲ್ಲಿ ಪರಿಣಿತಿ ಪಡೆದಿರುವ ಸುಮಾರು 19 ತಜ್ಞರನ್ನು ಕೂಡ ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಪಡೆಯು ಕೂಡ ಉಳಿದ ರಕ್ಷಣಾ ಕಾರ್ಯಾಚರಣೆಯ ಪಡೆಯ ಜೊತೆ ಸೇರಿಕೊಂಡು ಜಂಟಿಯಾಗಿ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ