/newsfirstlive-kannada/media/post_attachments/wp-content/uploads/2023/12/Mobile-tower.jpg)
ತುಂಬಾ ತಿಂಗಳುಗಳು ಕಳೆದ ನಂತರ ಹಣದುಬ್ಬರದಿಂದ ಜನ ಸುಧಾರಿಸಿಕೊಳ್ಳಲು ಪ್ರಯತ್ನಿಸ್ತಿದ್ದಾರೆ. ಇದರ ಮಧ್ಯೆ ಲೋಕಸಭೆ ಚುನಾವಣೆ ಮುಗಿದ ನಂತರ ಮತ್ತೆ ಹಣದುಬ್ಬರದ ಆಘಾತ ಎದುರಾಗುವ ಸಾಧ್ಯತೆ ಇದೆ. ಟೆಲಿಕಾಂ ಕಂಪನಿಗಳು ದೊಡ್ಡ ಶಾಕ್ ನೀಡಲಿವೆ ಎಂದು ಹೇಳಲಾಗುತ್ತಿದ್ದು, ಪರಿಣಾಮ ಮೊಬೈಲ್ಗಳ ಬೆಲೆಯಲ್ಲಿ ಹಾಗೂ ಅವುಗಳ ಬಳಕೆಯ ವೆಚ್ಚ ವಿಪರೀತ ಏರಿಕೆ ಆಗುವ ಸಾಧ್ಯತೆ ಇದೆ.
ಮೊಬೈಲ್ಗಳು ದುಬಾರಿ
ಜಿಯೋ ಮತ್ತು ಏರ್‌ಟೆಲ್‌ನಂತಹ ಟೆಲಿಕಾಂ ಕಂಪನಿಗಳು ಸುಂಕವನ್ನು ಏರಿಸಲು ಪ್ಲಾನ್ ಮಾಡುತ್ತಿವೆ. ದೇಶದಲ್ಲಿ ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಸಮಯದಲ್ಲೂ ಮೊಬೈಲ್ ದರ ಏರಿಕೆ ಮಾಡಬಹುದು. ಜೂನ್‌ನಲ್ಲಿ ಲೋಕಸಭೆ ಚುನಾವಣೆ ಮುಗಿಯಲಿದೆ. ನಂತರ ಮೊಬೈಲ್ಗಳು ದುಬಾರಿ ಆಗಲಿವೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕಾರು-ಟ್ರಕ್ ಮಧ್ಯೆ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು
ಸುಂಕ ಹೆಚ್ಚಾಗಬಹುದು
ಆಂಟಿಕ್ ಸ್ಟಾಕ್ ಬ್ರೋಕಿಂಗ್ (antique stock broking ltd) ಲಿಮಿಟೆಡ್ ಪ್ರಕಾರ, ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ಚುನಾವಣೆ ಮುಗಿದ ನಂತರ ಮೊಬೈಲ್ ದರಗಳನ್ನು ಏರಿಸಲಿವೆ. ಮೊಬೈಲ್ ಕಂಪನಿಗಳ ಸುಂಕದ ಪ್ರಮಾಣ 15 ರಿಂದ 17 ಪ್ರತಿಶತದಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
ಇದನ್ನೂ ಓದಿ:ಇರಾನ್-ಇಸ್ರೇಲ್ ಮಧ್ಯೆ ಉದ್ವಿಗ್ನತೆ, ವಿಶ್ವದಲ್ಲಿ ಮತ್ತೊಂದು ಘೋರ ಯುದ್ಧದ ಆತಂಕ..!
ಆಂಟಿಕ್ ಸ್ಟಾಕ್ ಬ್ರೋಕಿಂಗ್ ಪ್ರಕಾರ.. ಟೆಲಿಕಾಂ ಕಂಪನಿಗಳು ಸುಂಕವನ್ನು ಹೆಚ್ಚಿಸುವುದರಿಂದ ಲಾಭ ಪಡೆಯಲು ಮುಂದಾಗಿವೆ. ಭಾರ್ತಿ ಏರ್‌ಟೆಲ್ ಅತೀ ಹೆಚ್ಚು ಲಾಭದ ಪ್ಲಾನ್ನಲ್ಲಿದೆ. ಪ್ರತಿ ಬಳಕೆದಾರರಿಂದ ಏರ್‌ಟೆಲ್‌ನ ಸರಾಸರಿ ಆದಾಯ 208 ರೂಪಾಯಿ ಆಗಿದೆ. 2026-27ರ ಆರ್ಥಿಕ ವರ್ಷದಲ್ಲಿ ಇದರ ಪ್ರಮಾಣ 286 ರೂಪಾಯಿಗೆಗೆ ಹೆಚ್ಚಾಗಬಹುದು. ಪ್ರಸ್ತುತ ಟೆಲಿಕಾಂ ಉದ್ಯಮದಲ್ಲಿ ಜಿಯೋ ಅತಿದೊಡ್ಡ ಕಂಪನಿಯಾಗಿದೆ. ಕಳೆದ 5 ರಿಂದ 6 ವರ್ಷಗಳಲ್ಲಿ Jio ನ ಮಾರುಕಟ್ಟೆಯ ಪಾಲು ಶೇಕಡಾ 21.6 ರಿಂದ 39.7ಕ್ಕೆ ಏರಿಕೆ ಆಗಿದೆ. ಆದರೆ, ಈ ಬಗ್ಗೆ ಮೊಬೈಲ್ ಕಂಪನಿಗಳು ಅಧಿಕೃತವಾಗಿ ಇನ್ನೂ ಹೇಳಿಲ್ಲ. ದೇಶದಲ್ಲಿ ಹಣದುಬ್ಬರದ ಪ್ರಮಾಣ ಇಳಿಕೆ ಆಗುತ್ತಿದೆ. ಒಂದು ದಿನದ ಹಿಂದೆ ಬಿಡುಗಡೆಯಾದ ಅಂಕಿ-ಅಂಶಗಳ ಪ್ರಕಾರ ಮಾರ್ಚ್ನಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇಕಡಾ 5ಕ್ಕಿಂತ ಕಡಿಮೆಯಾಗಿದೆ.
ಇದನ್ನೂ ಓದಿ: ಲಕ್ನೋ ವಿರುದ್ಧ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್; ಈ ವಿಚಾರದಲ್ಲಿ ಆರ್ಸಿಬಿಗೆ ಭಾರೀ ಮುಜುಗರ..!
ಜೂನ್ವರೆಗೆ ಚುನಾವಣೆ
ಲೋಕಸಭೆ ಚುನಾವಣೆಯ ಕಾವು ದೇಶದಲ್ಲಿ ಸದ್ದು ಮಾಡ್ತಿದ್ದು, ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19 ರಿಂದ ಶುರುವಾಗಿ ಜೂನ್ ಒಂದರವರೆಗೆ ಚುನಾವಣೆ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಹೊರಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ