/newsfirstlive-kannada/media/post_attachments/wp-content/uploads/2025/07/fish-venkatesh.jpg)
ತೆಲುಗು ಸಿನಿಮಾಗಳಲ್ಲಿ ಖಳನಾಯಕ, ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ನಟ ಫಿಶ್ ವೆಂಕಟ್ ಶುಕ್ರವಾರ (ಜುಲೈ 18) ನಿಧನರಾಗಿದ್ದಾರೆ. ನಟ ಫಿಶ್ ವೆಂಕಟ್ ಅವರಿಗೆ 54 ವರ್ಷ ವಯಸ್ಸಾಗಿತ್ತು. ಫಿಶ್ ವೆಂಕಟ್ ಕೆಲವು ತಿಂಗಳುಗಳಿಂದ ನಟನ ಆರೋಗ್ಯ ಹದಗೆಟ್ಟಿತ್ತು. ಇದೇ ಕಾರಣದಿಂದ ಫಿಶ್ ವೆಂಕಟ್ ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಫಿಶ್ ವೆಂಕಟ್, ಕಾಯಿಲೆ ಉಲ್ಬಣಗೊಂಡು ಎರಡೂ ಮೂತ್ರಪಿಂಡಗಳು ಹಾಳಾದ ಕಾರಣ ಕಳೆದ ಕೆಲವು ಕಾಲದಿಂದ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು.
ಇದನ್ನೂ ಓದಿ: ಕನ್ನಡದ ಸ್ಟಾರ್ ನಿರೂಪಕಿ ಮದುವೆ.. ಅನುಶ್ರೀ ಆಗ್ತಾ ಇರೋದು ಲವ್..? ಅರೇಂಜ್ ಮ್ಯಾರೇಜ್..?
ಕೆಲ ದಿನಗಳ ಹಿಂದೆ ಮತ್ತೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಫಿಶ್ ವೆಂಕಟ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಆರ್ಥಿಕ ಪರಿಸ್ಥಿತಿ ಉಂಟಾದ ಕಾರಣ ಸಹಾಯಕ್ಕಾಗಿ ಮನವಿ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಫಿಶ್ ವೆಂಕಟ್ ನಿಧನರಾಗಿದ್ದಾರೆ. ಈ ವಿಷಯ ತಿಳಿದ ಕೂಡಲೇ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಫಿಶ್ ವೆಂಕಟ್ ಅವರ ಮೂಲ ಹೆಸರು ಮಂಗಳಂಪಲ್ಲಿ ವೆಂಕಟೇಶ್. ಆದರೆ ಮುಷೀರಾಬಾದ್‌ನ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಕಾರಣ ಅವರು ಫಿಶ್ ವೆಂಕಟ್ ಎಂದೇ ಪ್ರಸಿದ್ಧರಾದರು. ನಿರ್ದೇಶಕ ವಿ.ವಿ. ವಿನಾಯಕ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ರು. ಆದಿ ಚಿತ್ರದಲ್ಲಿ 'ತೊಡಗೊಟ್ಟು ಚಿನ್ನ' ಎಂಬ ವೆಂಕಟ್ ಅವರ ಸಂಭಾಷಣೆ ಸೂಪರ್ ಹಿಟ್ ಆಗಿತ್ತು. ಫಿಶ್ ವೆಂಕಟ್ ನಿಧನಕ್ಕೆ ಟಾಲಿವುಡ್ ಅಂಗಳದ ಗಣ್ಯರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ