newsfirstkannada.com

ಬೆಂಗಳೂರು ರೇವ್​​ ಪಾರ್ಟಿಯಲ್ಲಿ ಖ್ಯಾತ ನಟ ಶ್ರೀಕಾಂತ್​ ಇದ್ರಾ? ಈ ಬಗ್ಗೆ ಸ್ಟಾರ್​​ ಕಲಾವಿದ ಏನಂದ್ರು?

Share :

Published May 20, 2024 at 7:21pm

    ರೇವ್ ಪಾರ್ಟಿಯಲ್ಲಿ ನಟ ಶ್ರೀಕಾಂತ್ ರೀತಿ ಇರೋ ವ್ಯಕ್ತಿಯ ವಿಡಿಯೋ ವೈರಲ್​

    ಬೆಂಗಳೂರಿನ ರೇವ್ ಪಾರ್ಟಿಯಲ್ಲಿ ತೆಲುಗು ನಟ ಶ್ರೀಕಾಂತ್​ ಭಾಗಿಯಾಗಿದ್ರಾ?

    ವಿಡಿಯೋ ಮಾಡುವ ಮೂಲಕ ಸ್ಪಷ್ಟನೆ ನೀಡಿದ ಬಹುಭಾಷಾ ನಟ ಶ್ರೀಕಾಂತ್

ಬೆಂಗಳೂರು: ಜಿಆರ್ ಫಾರ್ಮ್ ಹೌಸ್ ರೇವ್​ ಪಾರ್ಟಿ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಈಗಾಗಲೇ ಐವರನ್ನು ಬಂಧಿಸಿದ್ದಾರೆ. ಪಾರ್ಟಿ ಆಯೋಜಕ ವಾಸು ಸೇರಿ ಐವರು ಅರೆಸ್ಟ್ ಆಗಿದ್ದಾರೆ. ಆದರೆ ಇದರ ಮಧ್ಯೆ ಬೆಂಗಳೂರು ರೇವ್ ಪಾರ್ಟಿಯಲ್ಲಿ ತೆಲುಗು ಸ್ಟಾರ್​​ ನಟ ಶ್ರೀಕಾಂತ್ ರೀತಿ ಇದ್ದ ವ್ಯಕ್ತಿಯೋರ್ವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ: ಅಹಮದಾಬಾದ್ ಏರ್‌ಪೋರ್ಟ್‌​​ನಲ್ಲಿ ನಾಲ್ವರು ಐಸಿಸ್ ಶಂಕಿತ ಉಗ್ರರ ಅರೆಸ್ಟ್​​; ಏನಿದು ಕೇಸ್​?

ಆದರೆ ಇದನ್ನು ನೋಡಿದ ಅಭಿಮಾನಿಗಳು ನಟ ಶ್ರೀಕಾಂತ್ ಕೂಡ ರೇವ್​ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ರೇವ್ ಪಾರ್ಟಿಯಲ್ಲಿ ತೆಲುಗು ನಟ ಶ್ರೀಕಾಂತ್​ ಕಾಣಿಸಿದ್ರಾ ಎಂಬ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಬಹುಭಾಷಾ ನಟ ಶ್ರೀಕಾಂತ್ ಅವರು ವಿಡಿಯೋ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾನು ಹೈದರಾಬಾದ್​ನಲ್ಲಿ ಇದ್ದೇನೆ. ಕೆಲವು ಫೋನ್​ ಕರೆಗಳು ನನಗೆ ಬಂದಿದ್ದವು. ನಾನು ಕೂಡ ವೈರಲ್​ ಆಗಿರೋ ಕ್ಲಿಪ್​ ಅನ್ನು ನೋಡಿದ್ದೇನೆ.

ಇದನ್ನೂ ಓದಿ: ಬೆಂಗಳೂರಲ್ಲಿ ರೇವ್ ಪಾರ್ಟಿ.. ನಮಗೆ ನಿದ್ದೆ ಮಾಡಲು ಇನ್ನೂ ಟೈಂ ಬೇಕೆಂದು ಪೊಲೀಸ್ರಿಗೇ ಆವಾಜ್ ಹಾಕಿದ್ರಂತೆ ನಟಿಯರು

ಸಾಕಷ್ಟು ಜನ ನಟ ಶ್ರೀಕಾಂತ್ ಅವರು ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಅಂತ ಅಂದುಕೊಂಡಿದ್ದರು. ನನಗೆ ಇದನ್ನು ನೋಡಿ ನಗು ಬಂತು. ಆದರೆ ಅದು ಯಾರೋ ನನ್ನ ಹಾಗೇ ಇರುವ ವಿಡಿಯೋ ನೋಡಿದ ಜನ ನಾನೇ ಅದು ಅಂತ ಅಂದುಕೊಳ್ಳುತ್ತಿದ್ದಾರೆ. ಆದರೆ ಇದನ್ನು ನಂಬಬೇಡಿ. ನಾನು ಈಗ ಹೈದರಾಬಾದ್​ನಲ್ಲೇ ಇದ್ದೇನೆ. ರೇವ್ ಪಾರ್ಟಿ, ಪಬ್ ಸಂಸ್ಕೃತಿಗೆ ಹೋಗುವ ವ್ಯಕ್ತಿ ನಾನಲ್ಲ. ಬರ್ತ್​ ಡೇ ಪಾರ್ಟಿಗೆ ಹೋಗುವುದಕ್ಕೂ ನಾನು ಹಿಂದೆ ಮುಂದೆ ನೋಡುತ್ತೇನೆ. ಆದರೆ ಇಂತಹ ಪಾರ್ಟಿಗಳಿಗೆ ನಾನು ಹೋಗುವುದಿಲ್ಲ. ಇದೆಲ್ಲಾ ಕೇವಲ ವಂದತಿ ಅಷ್ಟೇ ಯಾರೂ ನಂಬಬೇಡಿ ಎಂದು ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ರೇವ್​​ ಪಾರ್ಟಿಯಲ್ಲಿ ಖ್ಯಾತ ನಟ ಶ್ರೀಕಾಂತ್​ ಇದ್ರಾ? ಈ ಬಗ್ಗೆ ಸ್ಟಾರ್​​ ಕಲಾವಿದ ಏನಂದ್ರು?

https://newsfirstlive.com/wp-content/uploads/2024/05/srikanth.jpg

Load More