newsfirstkannada.com

ರೇವ್ ಪಾರ್ಟಿ ಕೇಸ್‌ನಲ್ಲಿ ನಟಿ ಹೇಮಾ ಲಾಕ್; ಸಿಸಿಬಿ ವಶದಲ್ಲಿದ್ರೂ ಮತ್ತೆ ಡ್ರಾಮಾ; ಮಾಡಿದ್ದೇನು?

Share :

Published June 3, 2024 at 6:24pm

Update June 3, 2024 at 6:35pm

    ವಿಡಿಯೋ ಮಾಡಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ ಹೇಮಾ

    ರೇವ್ ಪಾರ್ಟಿಯಲ್ಲಿ ನಟಿಯದ್ದೇ ಪ್ರಮುಖ ಪಾತ್ರವಹಿಸಿದ್ದ ಅನುಮಾನ

    ಬೆಂಗಳೂರು ಸಿಸಿಬಿ ಪೊಲೀಸರಿಂದ ತೆಲುಗು ನಟಿ ಹೇಮಾ ಬಂಧನ

ಬೆಂಗಳೂರು ಹೊರವಲಯದಲ್ಲಿ ನಡೆದ ರೇವ್‌ ಪಾರ್ಟಿ ಕೇಸ್‌ನಲ್ಲಿ ತೆಲುಗು ಚಿತ್ರರಂಗದ ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಗೆ ಬರಲು 2 ನೋಟಿಸ್ ನೀಡಿದ್ದರು ಹೇಮಾ ಅವರು ಹಾಜರಾಗಿರಲಿಲ್ಲ. ಇದೀಗ 3ನೇ ನೋಟಿಸ್ ನೀಡಿದ್ದು ಇಂದು ಹೇಮಾ ಅವರು ವಿಚಾರಣೆಗೆ ಆಗಮಿಸಿದ್ದರು.

ನಟಿ ಹೇಮಾ ಅವರು ಇಂದು ಸಿಸಿಬಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆಯ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ. ರೇವ್ ಪಾರ್ಟಿ ನಡೆಯುತ್ತಿದ್ದ ವೇಳೆ ವಿಡಿಯೋ ಮಾಡಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ ಹೇಮಾ ಅವರು ಬಂಧನದ ವೇಳೆಯೂ ಮಾಧ್ಯಮಗಳ ಕಣ್ತಪ್ಪಿಸಲು ಯತ್ನಿಸಿದ್ದಾರೆ.

ಇದನ್ನೂ ಓದಿ: ಅಪ್ಪನೂ IAS, ಅಮ್ಮನೂ IAS.. ಆಫೀಸರ್ಸ್‌ ದಂಪತಿ ಮುದ್ದಿನ​ ಮಗಳು ನಿಗೂಢ ಸಾವು; ಅಸಲಿಗೆ ಆಗಿದ್ದೇನು? 

ಸಿಸಿಬಿ ಪೊಲೀಸರು ಬಂಧಿಸಿದ ಮೇಲೆ ನಟಿ ಹೇಮಾ ಅವರನ್ನು ಮೆಡಿಕಲ್ ಚೆಕಪ್‌ಗೆ ಕರೆದುಕೊಂಡು ಹೋಗಲಾಯಿತು. ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ವೈದ್ಯಕೀಯ ಪರೀಕ್ಷೆಯಲ್ಲಿ ನಟಿ ಹೇಮಾ ಅವರು ಬುರ್ಖಾ ಧರಿಸಿಕೊಂಡಿದ್ದರು. ಮಾಧ್ಯಮಗಳ ಕಣ್ತಪ್ಪಿಸಲು ಬುರ್ಖಾ ಹಾಕೊಂಡು ನಟಿ ಹೇಮಾ ಅವರು ಸಿಸಿಬಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ.

ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟಿ ಹೇಮಾ ಅವರ ರಕ್ತ ಪರೀಕ್ಷೆ ಮಾಡಲಾಗಿತ್ತು. ರಕ್ತ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನಟಿ ಹೇಮಾ ಅವರಿಗೆ ನೋಟಿಸ್ ನೀಡಿತ್ತು.

ಸಿಸಿಬಿ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ತೆಲುಗು ನಟಿ ಹೇಮಾ ಅವರು ಇಂದು ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಆಗಮಿಸಿದ್ದರು. ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ನೀಡಿರುವ ನಟಿ ಹೇಮಾ ಅವರನ್ನು ಸಿಸಿಬಿ ವಶಕ್ಕೆ ಪಡೆದಿದೆ.

ಇದನ್ನೂ ಓದಿ: ರೇವ್ ಪಾರ್ಟಿಯಿಂದ ನಟಿ ಹೇಮಾ ಭವಿಷ್ಯದ ಮೇಲೆ ಕರಿನೆರಳು.. ಟಾಲಿವುಡ್​​ನಿಂದ ಹೊರಬಿತ್ತು ಶಾಕಿಂಗ್ ನ್ಯೂಸ್..! 

ನಟಿ ಹೇಮಾ ಅವರ ಮೇಲೆ ಡ್ರಗ್ಸ್ ಮತ್ತು ರೇವ್ ಪಾರ್ಟಿ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪ ಕೇಳಿ ಬಂದಿದೆ. ಇದರ ಜೊತೆಗೆ ಪೊಲೀಸರು ರೇಡ್ ಮಾಡಿದ್ದ ವೇಳೆ ವಿಡಿಯೋ ಮಾಡಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಿದ್ದ ಪ್ರಕರಣ ದಾಖಲಾಗಿದೆ. ಅದೂ ಅಲ್ಲದೇ ಡ್ರಗ್ಸ್ ಸೇವನೆ ಮಾಡಿದ್ದಕ್ಕೆ ರಕ್ತ ಪರೀಕ್ಷೆಯಲ್ಲಿ ರಿಪೋರ್ಟ್ ಪಾಸಿಟಿವ್ ಬಂದಿತ್ತು.

ಇದನ್ನೂ ಓದಿ: 10ನೇ ಮಹಡಿಯಿಂದ ಜಿಗಿದು IAS ಆಫೀಸರ್​ ಮಗಳು ಅನುಮಾನಾಸ್ಪದ ಸಾವು.. ಕಾರಣವೇನು? 

ರೇವ್ ಪಾರ್ಟಿ ಪ್ರಕರಣದಲ್ಲಿ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ನಟಿ ಹೇಮಾ ಅವರಿಗೆ ಎರಡು ನೋಟಿಸ್ ನೀಡಿದ್ದರು. ಈ ನೋಟಿಸ್ ನೀಡಿದ ಮೇಲೂ ಹೇಮಾ ಅವರು ಪೊಲೀಸರ ತನಿಖೆಗೆ ಹಾಜರಾಗಿರಲಿಲ್ಲ. ಇಂದು ವಿಚಾರಣೆಗೆ ಹಾಜರಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ನಟಿ ಹೇಮಾಗೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ವಿಚಾರಣೆ ಬಳಿಕ ಸಿಸಿಬಿ ಪೊಲೀಸರು ನಟಿ ಹೇಮಾ ಅವರನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇವ್ ಪಾರ್ಟಿ ಕೇಸ್‌ನಲ್ಲಿ ನಟಿ ಹೇಮಾ ಲಾಕ್; ಸಿಸಿಬಿ ವಶದಲ್ಲಿದ್ರೂ ಮತ್ತೆ ಡ್ರಾಮಾ; ಮಾಡಿದ್ದೇನು?

https://newsfirstlive.com/wp-content/uploads/2024/06/Hema-Arrest.jpg

Load More