ತೆಲುಗು ಬಿಗ್​ಬಾಸ್​ನಲ್ಲಿ ಕನ್ನಡ ಧ್ವನಿ.. ಅಮ್ಮ-ಮಗನ ಬಾಂಧವ್ಯಕ್ಕೆ ವೀಕ್ಷಕರಲ್ಲಿ ಕಣ್ಣೀರು..! ವಿಡಿಯೋ

author-image
Bheemappa
Updated On
ತೆಲುಗು ಬಿಗ್​ಬಾಸ್​ನಲ್ಲಿ ಕನ್ನಡ ಧ್ವನಿ.. ಅಮ್ಮ-ಮಗನ ಬಾಂಧವ್ಯಕ್ಕೆ ವೀಕ್ಷಕರಲ್ಲಿ ಕಣ್ಣೀರು..! ವಿಡಿಯೋ
Advertisment
  • ಬೇಸರದಲ್ಲಿ ಇರುವಾಗ ಮಗನಿಗೆ ತಾಯಿ ಹೇಳಿದೆ ಮಾತುಗಳಿವು
  • ಕನ್ನಡದ ಯುವ ನಟ ತೆಲುಗು ಬಿಗ್​ಬಾಸ್​ನಲ್ಲಿ ಫುಲ್ ಮ್ಯಾಜಿಕ್
  • ಸೂಪರ್ ಸ್ಟಾರ್ ಅಕ್ಕಿನೇನಿ ನಾಗರ್ಜುನ್ ನಡೆಸಿಕೊಡುವ ಶೋ

ತೆಲುಗು ಬಿಗ್​ಬಾಸ್ ಸೀಸನ್ ಕನ್ನಡದ ಬಿಗ್​ಬಾಸ್​ಗಿಂತ ಮೊದಲೇ ಆರಂಭವಾಗಿದ್ದು ಸೂಪರ್ ಸ್ಟಾರ್ ಅಕ್ಕಿನೇನಿ ನಾಗರ್ಜುನ್ ಅವರು ಮೊದಲಿನ ಸೀಸನ್​​ನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಈಗಾಗಲೇ 7 ಸೀಸನ್​ಗಳು ಮುಗಿಸಿದ್ದು ಸದ್ಯ 8ನೇ ಸೀಸನ್​ ಗ್ರ್ಯಾಂಡ್ ಆಗಿ ನಡೆಯುತ್ತಿದೆ. ತೆಲುಗು ಬಿಗ್​ಬಾಸ್​ನಲ್ಲಿ ಕನ್ನಡದ ಅದರಲ್ಲೂ ಮೈಸೂರಿನ ಹುಡುಗ ಇರುವುದು ಕನ್ನಡಿಗ ಹೆಮ್ಮೆ ಎಂದೇ ಹೇಳಬಹುದು.

publive-image

ತೆಲುಗು ಬಿಗ್​ಬಾಸ್ ಶೋನಲ್ಲಿ ಕನ್ನಡದ ಕಲರವ ಕೇಳಿ ಬಂದಿದ್ದು ತಾಯಿ-ಮಗನ ಬಾಂಧವ್ಯ ಇಡೀ ಪ್ರೇಕ್ಷಕರನ್ನ ಸೆಳೆದಿದೆ. ಸದ್ಯ ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಮೈಸೂರು ಮೂಲದ ನಟ ನಿಖಿಲ್ ಮಳಿಯಕ್ಕಲ್ ತೆಲುಗು ಧಾರಾವಾಹಿಗಳಲ್ಲಿ ಅಭಿನಯ ಮಾಡುತ್ತಿದ್ದರು. ಗೊರಿಂಟಾಕು ಎನ್ನುವ ಧಾರಾವಾಹಿಯಲ್ಲಿ ಪಾರ್ಥು ಪಾತ್ರದ ಮೂಲಕ ತೆಲುಗುನಾಡಲ್ಲಿ ಫೇಮಸ್ ಆಗಿದ್ದರು.  ಬಿಗ್​ಬಾಸ್​ನಲ್ಲಿ ಕಂಟೆಸ್ಟೆಂಟ್ ಆಗಿ ಬಿಗ್ ಹೌಸ್​ನಲ್ಲಿದ್ದಾರೆ. 8ನೇ ಸೀಸನ್​ ಗೆಲ್ಲುವ ಎಲ್ಲ ನಿರೀಕ್ಷೆ ನಿಖಿಲ್ ಮೂಡಿಸಿದ್ದಾರೆ. ಮನೆಯೊಳಗೆ ಬೇಸರಕ್ಕೆ ಒಳಗಾಗಿದ್ದಾಗ ಅಮ್ಮ ಹೇಳಿದ ಮಾತುಗಳು ನಿಖಿಲ್​ ಟ್ರೋಫಿ ಗೆಲ್ಲುವ ಉತ್ಸಾಹವನ್ನ ಮತ್ತಷ್ಟು ಇಮ್ಮಡಿಗೊಳಿಸಿವೆ.

ಇದನ್ನೂ ಓದಿ:BIGG BOSS ಡೋರ್ ಉಡೀಸ್ ಮಾಡ್ತೀನಿ ಎಂದಿದ್ದ ಜಗದೀಶ್​​.. ಕಿಚ್ಚನ ಮಾತಿಗೆ ಫುಲ್ ಸೈಲೆಂಟ್! 

ಬಿಗ್​ಬಾಸ್​ನಲ್ಲಿ ನಿಖಿಲ್ ಬೇಸರಕ್ಕೆ ಒಳಗಾಗಿ ನಾನು ನಿಮ್ಮನ್ನ ನೋಡದೇ ಇರುವುದಕ್ಕೆ ಆಗುತ್ತಿಲ್ಲ ಎಂದು ತಾಯಿಗೆ ಪತ್ರ ಬರೆದಿದ್ದರು. ಇದಕ್ಕಾಗಿ ಶೋನಲ್ಲಿ ತಾಯಿ ಮಾತಾಡಿದ್ದ ವಿಡಿಯೋ ಪ್ರಕಟಿಸಲಾಗಿದೆ. ಈ ವೇಳೆ ನಿಖಿಲ್ ಅವರ ತಾಯಿ ಕನ್ನಡದಲ್ಲಿ ಮಾತನಾಡಿ ಪ್ರೋತ್ಸಾಹ ನೀಡಿದ್ದಾರೆ. ‘ನೀನು ಹೆಂಗಿದೆಯೋ ಹಾಗೇ ಇರು. ಬೇರೆಯವರಿಗಾಗಿ ಚೇಂಜ್ ಮಾಡಿಕೊಳ್ಳಬೇಡ. ಎಮೋಷನಲ್ ಆಗಬೇಡ. ಎಲ್ಲರೂ ನಿನ್ನ ಜೊತೆ ರೇಸ್​ನಲ್ಲಿದ್ದಾರೆ. ನೀನು ಆಡುತ್ತಿರುವುದು ನನಗೆ ಸಖತ್ ಇಷ್ಟ ಆಗುತ್ತಿದೆ. ಕಪ್ ಲಿಫ್ಟ್​ ಮಾಡುವುದನ್ನ ನೋಡಲು ಕಾಯುತ್ತಿದ್ದೇವೆ. ಐ ಲವ್ ಯು ಕಂದ’ ಎಂದು ಹೇಳಿದ್ದಾರೆ. ಇದನ್ನೆಲ್ಲಾ ಕೇಳಿದ ಮೇಲೆ ವಿಡಿಯೋ ನೋಡುತ್ತಿದ್ದ ನಿಖಿಲ್ ಕಣ್ಣಲ್ಲಿ ನೀರು ಜಿನಿಗಿವೆ.

https://twitter.com/bengalurubouy2/status/1842417206337937890

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment