BBK11: ಈ ಬಾರಿ ಭವ್ಯಾ ಕಪ್ ಗೆಲ್ತಾರಾ? ತೆಲುಗು ಬಿಗ್ ಬಾಸ್ ವಿನ್ನರ್‌ ನಿಖಿಲ್‌ ಹೇಳಿದ್ದೇನು?

author-image
Veena Gangani
Updated On
BBK11: ಈ ಬಾರಿ ಭವ್ಯಾ ಕಪ್ ಗೆಲ್ತಾರಾ? ತೆಲುಗು ಬಿಗ್ ಬಾಸ್ ವಿನ್ನರ್‌ ನಿಖಿಲ್‌ ಹೇಳಿದ್ದೇನು?
Advertisment
  • ಗೀತಾ ಸೀರಿಯಲ್​ ಮೂಲಕ ಸಖತ್ ಫೇಮಸ್ ಆಗಿದ್ದ ಕಿರುತೆರೆ ಸ್ಟಾರ್ ನಟಿ
  • ಎರಡನೇ ಬಾರಿಗೆ ಬಿಗ್​ಬಾಸ್​ ಮನೆಯ ಕ್ಯಾಪ್ಟನ್​ ಆದ ಸ್ಪರ್ಧಿ ಭವ್ಯಾ ಗೌಡ
  • ಗೆಳತಿ ಭವ್ಯಾ ಗೌಡ ಬಗ್ಗೆ ಬಿಗ್​ಬಾಸ್​ ತೆಲುಗು ವಿನ್ನರ್​ ನಿಖಿಲ್ ಹೇಳಿದ್ದೇನು?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಕನ್ನಡ ಕಿರುತೆರೆಯ ಗೀತಾ ಸೀರಿಯಲ್​ ಮೂಲಕವೇ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡು ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟು ಕಮಾಲ್​ ಮಾಡುತ್ತಿದ್ದಾರೆ ಭವ್ಯಾ ಗೌಡ.

ಮತ್ತೊಂದು ಕಡೆ ಕನ್ನಡಿಗ ನಿಖಿಲ್ ಮಳಿಯಕ್ಕಲ್ ಬಿಗ್ ಬಾಸ್ ತೆಲುಗು ಸೀಸನ್ 8ರ ವಿಜೇತರಾಗಿ ದಾಖಲೆ ಬರೆದಿದ್ದಾರೆ. ಇಡೀ ಬಿಗ್‌ಬಾಸ್‌ ಇತಿಹಾಸದಲ್ಲೇ ಅತೀ ಹೆಚ್ಚು ಪ್ರೈಜ್ ಮನಿ ಗೆದ್ದ ಸ್ಪರ್ಧಿ ಎಂದೆನಿಸಿಕೊಂಡಿದ್ದಾರೆ. ಮೈಸೂರು ಮೂಲದ ನಿಖಿಲ್ ಬರೋಬ್ಬರಿ 55 ಲಕ್ಷ ರೂ. ಪ್ರೈಜ್ ಮನಿ ಜೊತೆಗೆ ತೆಲುಗು ಬಿಗ್‌ಬಾಸ್‌ 8ನೇ ಸೀಸನ್​ನ ಟ್ರೋಪಿ ಕೂಡ ಪಡೆದುಕೊಂಡಿದ್ದಾರೆ.

publive-image

ಇನ್ನೂ, ಬಿಗ್​ಬಾಸ್​ ವಿನ್ನರ್​ ಆಗಿ ಹೊರ ಹೊಮ್ಮಿದ ನಿಖಿಲ್​ ನ್ಯೂಸ್​ ಫಸ್ಟ್​ನೊಂದಿಗೆ ಮನಬಿಚ್ಚಿ ಮಾತಾಡಿದ್ದಾರೆ. ಅದರಲ್ಲೂ ಈ ಬಾರಿಯ ಕನ್ನಡದ ಬಿಗ್​ಬಾಸ್​​ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಾತಾಡಿದ ಅವರು, ಈ ಬಾರಿಯ ಬಿಗ್​ಬಾಸ್​ನಲ್ಲಿ ನನಗೆ ಭವ್ಯಾ ಗೌಡ ಫೇವರಿಟ್ ಸ್ಪರ್ಧಿ. ಏಕೆಂದರೆ ಭವ್ಯಾ ಗೌಡ ಜೊತೆಗೆ ನಾನು ಒಂದು ಸೀರಿಯಲ್ ಕೂಡ ಮಾಡಿದ್ದೀನಿ. ಈಗ ಚೆನ್ನಾಗಿ ಆಡುತ್ತಿದ್ದಾರೆ. ಟಾಸ್ಕ್​ ಕ್ವೀನ್ ಅಂತಲೇ ಹೆಸರನ್ನು ಗಳಿಸಿಕೊಂಡಿದ್ದಾರೆ. ನನಗೆ ಟಾಸ್​ ಕಿಂಗ್​ ಅಂತ ಹೆಸರು ಬಂದಿದೆ. ನಾನು ಭವ್ಯಾ ಅವರ ಕ್ಯಾಪ್ಟನ್ಸಿ ಟಾಸ್ಕ್​ ಆಡುವ ಎಪಿಸೋಡ್ ನೋಡಿದ್ದೀನಿ. ಅದರಲ್ಲಿ ತುಂಬಾ ಚೆನ್ನಾಗಿ ಆಡಿದ್ದಾರೆ. ತುಂಬಾ ಸ್ಟ್ರಾಂಗ್​ ಆಗಿ ಇದ್ದಾರೆ. ಎಲ್ಲ ಟಾಸ್ಕ್​ನಲ್ಲೂ ಉತ್ತಮವಾಗಿ ಆಡುತ್ತಿದ್ದಾರೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment