VIDEO: ತೆಲುಗು ಹಾಸ್ಯ ನಟ ಪೋಸಾನಿ ಕೃಷ್ಣ ಮುರಳಿ ಬಂಧನ.. ಮನೆಯಲ್ಲಿ ಹೈಡ್ರಾಮಾ! ಕಾರಣವೇನು?

author-image
admin
Updated On
VIDEO: ತೆಲುಗು ಹಾಸ್ಯ ನಟ ಪೋಸಾನಿ ಕೃಷ್ಣ ಮುರಳಿ ಬಂಧನ.. ಮನೆಯಲ್ಲಿ ಹೈಡ್ರಾಮಾ! ಕಾರಣವೇನು?
Advertisment
  • ಹೈದರಾಬಾದ್‌ನಲ್ಲಿರುವ ಪೋಸಾನಿ ಮನೆಗೆ ತೆರಳಿದ ಪೊಲೀಸರು
  • YSR ಕಾಂಗ್ರೆಸ್ ಪಕ್ಷದ ಬೆಂಬಲಿಗರು ಆಗಿರುವ ಪೋಸಾನಿ ಕೃಷ್ಣ
  • ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್‌ ಮೇಲೂ ಕಿಡಿ

ತೆಲುಗು ಚಿತ್ರರಂಗದ ಹಾಸ್ಯ ಕಲಾವಿದ ಪೋಸಾನಿ ಕೃಷ್ಣ ಮುರುಳಿಗೆ ಸಂಕಷ್ಟ ಎದುರಾಗಿದೆ. YSR ಕಾಂಗ್ರೆಸ್ ಪಕ್ಷದ ಬೆಂಬಲಿಗರು ಆಗಿರುವ ಪೋಸಾನಿ ಕೃಷ್ಣ ಮುರುಳಿ ಅವರ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದು, ಆಂಧ್ರ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್‌ನಲ್ಲಿರುವ ಪೋಸಾನಿ ಕೃಷ್ಣ ಅವರ ಮನೆಗೆ ತೆರಳಿದ ಪೊಲೀಸರು ಹಾಸ್ಯ ನಟನಿಗೆ ಅರೆಸ್ಟ್ ವಾರೆಂಟ್ ತೋರಿಸಿ ಶಾಕ್ ಕೊಟ್ಟರು. ಸದ್ಯ ನನ್ನ ಆರೋಗ್ಯ ಸರಿಯಿಲ್ಲ. ನೀವು ನನ್ನನ್ನು ಬಂಧಿಸುವಂತಿಲ್ಲ ಎಂದು ಪೋಸಾನಿ ಅವರು ವಾದಿಸಿದರು. ಸ್ವಲ್ಪ ಹೊತ್ತು ಪೊಲೀಸರ ಜೊತೆ ವಾಗ್ವಾದ ನಡೆಸಿದ ಪೋಸಾನಿ ಕೃಷ್ಣ ಅವರನ್ನ ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ. ಪೋಸಾನಿ ಮನೆಯಲ್ಲಿ ನಡೆದ ಗಲಾಟೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.


">February 26, 2025

ಏನಿದು ಪ್ರಕರಣ?
ಹಾಸ್ಯ ನಟ ಪೋಸಾನಿ ಕೃಷ್ಣ ಮುರುಳಿ ಅವರು SC/ST ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪಕ್ಕೆ ತುತ್ತಾಗಿದ್ದರು. ಓಬುಲವಾರಿಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಬಂಧಿಸಿ ರಾಜಂಪೇಟ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

publive-image

ಪೋಸಾನಿ ಕೃಷ್ಣ ಮುರುಳಿ ಅವರು ಸಮುದಾಯದ ವಿರುದ್ಧ ನೀಡಿದ ಹೇಳಿಕೆ ಸಮುದಾಯಗಳ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಬಂಧಿಸಿರುವುದಾಗಿ ಪೊಲೀಸರು ಪೋಸಾನಿ ಕೃಷ್ಣ ಅವರ ಪತ್ನಿಗೆ ನೋಟಿಸ್ ಜಾರಿ ಮಾಡಿದ್ದರು. ನಾನ್‌ಬೆಲೆಬಲ್ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Champions Trophy; ಸೆಮಿಸ್​ನಲ್ಲಿ ಭಾರತದ ವಿರುದ್ಧ ಅಫ್ಘಾನ್ ಅಖಾಡಕ್ಕೆ ಇಳಿದ್ರೆ ಭಾರೀ ಸಂಕಷ್ಟ! 

ಆಂಧ್ರದಲ್ಲಿ ದ್ವೇಷದ ಕಿಚ್ಚು!
ಈ ಹಿಂದೆ ಕೂಡ ಹಾಸ್ಯ ನಟ ಪೋಸಾನಿ ಕೃಷ್ಣ ಮುರುಳಿ ಅವರು ವಿವಾದಾತ್ಮಕ ಹೇಳಿಕೆ ನೀಡಿ ಆಂಧ್ರ ರಾಜಕೀಯದಲ್ಲಿ ಸುದ್ದಿಯಾಗಿದ್ದರು. YSR ಕಾಂಗ್ರೆಸ್ ಪಕ್ಷದ ಬೆಂಬಲಿಗರಾದ ಇವರು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಅವರ ವಿರುದ್ಧ ಕಿಡಿಕಾರುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment