newsfirstkannada.com

ತೆಲುಗು ಖ್ಯಾತ​ ನಟ ಮತ್ತು ನಿರ್ದೇಶಕ ಸೂರ್ಯ ಕಿರಣ್​​ ಸಾವು; ಅಸಲಿಗೆ ಆಗಿದ್ದೇನು..?

Share :

Published March 11, 2024 at 5:51pm

Update March 11, 2024 at 5:54pm

  ಖ್ಯಾತ ತೆಲುಗು ನಟ ಮತ್ತು ನಿರ್ದೇಶಕ ಸೂರ್ಯ ಕಿರಣ್ ಇನ್ನಿಲ್ಲ

  ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಸೂರ್ಯ ಕಿರಣ್..!

  ಕನ್ನಡದ ನಟಿ ಕಲ್ಯಾಣಿ ಅವರನ್ನು ಮದುವೆ ಆಗಿದ್ದ ನಟ ಸೂರ್ಯ

ಖ್ಯಾತ ತೆಲುಗು ನಟ ಮತ್ತು ನಿರ್ದೇಶಕ ಸೂರ್ಯ ಕಿರಣ್ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಸೂರ್ಯ ಕಿರಣ್ ಇಂದು ನಿಧನರಾಗಿದ್ದು, ನಾಳೆ ಇವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ. ಸೂರ್ಯ ಕಿರಣ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸೂರ್ಯ ಕಿರಣ್‌ ಜಾಂಡೀಸ್ ಕಾಯಿಲೆಗೆ ತುತ್ತಾಗಿದ್ದರು. ಇದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಇಂದು ದಿಢೀರ್​​​​ ಹಾರ್ಟ್​ ಅಟ್ಯಾಕ್​​ ಆಗಿದ್ದು, ಜೀವ ಕಳೆದುಕೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

80ರ ದಶಕದಲ್ಲೇ ತೆಲುಗು ಸಿನಿಮಾ ಇಂಡಸ್ಟ್ರಿಗೆ ಬಾಲ ನಟರಾಗಿ ಎಂಟ್ರಿ ಕೊಟ್ಟಿದ್ದ ಸೂರ್ಯ ಕಿರಣ್‌ ಬಳಿಕ ನಿರ್ದೇಶಕರಾಗಿದ್ದರು. ಯಾವಾಗ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ಸಸ್​ ಸಿಗಲಿಲ್ಲವೋ ಅಂದಿನಿಂದಲೇ ಇವರ ಆರೋಗ್ಯ ಕೆಟ್ಟಿತ್ತು.

ನಟಿ ಕಲ್ಯಾಣಿಯನ್ನು ಮದುವೆಯಾಗಿದ್ದ ಸೂರ್ಯ!

ಕನ್ನಡದ ನಟಿ ಕಲ್ಯಾಣಿ ಅವರನ್ನು ಸೂರ್ಯ ಮದುವೆ ಆಗಿದ್ದರು. 2006ರಲ್ಲಿ ಮದುವೆಯಾದ ಈ ಜೋಡಿ ಸುಮಾರು ವರ್ಷಗಳು ಜೊತೆಯಲ್ಲೇ ಇದ್ದರು. ಬಳಿಕ ಇಬ್ಬರು ಹಣಕಾಸಿನ ವಿಚಾರಕ್ಕೆ ಬೇರೆಯಾದ್ರು ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೆಲುಗು ಖ್ಯಾತ​ ನಟ ಮತ್ತು ನಿರ್ದೇಶಕ ಸೂರ್ಯ ಕಿರಣ್​​ ಸಾವು; ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2024/03/Surya-Kiran.jpg

Load More