newsfirstkannada.com

ಅಬ್ಬಾ.. ಊಟಿಯಲ್ಲಿ 0 ಡಿಗ್ರಿಗೆ ಕುಸಿದ ಉಷ್ಣಾಂಶ; ಹವಾಮಾನ ತಜ್ಞರು ಹೇಳಿದ್ದೇನು?

Share :

Published January 19, 2024 at 12:13pm

Update January 19, 2024 at 12:21pm

    ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ದಾಖಲೆಯ ಕನಿಷ್ಠ ಉಷ್ಣಾಂಶ

    ನೀಲಗಿರಿಯ ಹಲವು ಅರಣ್ಯ ಪ್ರದೇಶದಲ್ಲಿ ಹೆಪ್ಪುಗಟ್ಟಿದ ವಾತಾವರಣ

    ಊಟಿಯಲ್ಲಿ 1 ಡಿಗ್ರಿಯಿಂದ ಝೀರೋ ಡಿಗ್ರಿಗೆ ಕುಸಿದ ತಾಪಮಾನ

ನೀಲಗಿರಿ: ವಿಪರೀತ ಕೊರೆಯುವ ಚಳಿ ಬರೀ ಉತ್ತರ ಭಾರತದಲ್ಲಿ ಅಷ್ಟೇ ಅಲ್ಲ ದಕ್ಷಿಣ ಭಾರತದಲ್ಲೂ ಆವರಿಸಿದೆ. ತಮಿಳುನಾಡಿನ ಕೆಲವು ಜಿಲ್ಲೆಯಲ್ಲಂತೂ ದಾಖಲೆಯ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಹವಾಮಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಊಟಿಯಲ್ಲಿ ಮನೆಯಿಂದ ಹೊರ ಬರಲು ಜನ ಭಯಪಡುತ್ತಿದ್ದು, ಹೆಪ್ಪುಗಟ್ಟಿದ ಮಂಜಿಗೆ ನಡುಗುತ್ತಿದ್ದಾರೆ.

ಹವಾಮಾನ ಇಲಾಖೆಯ ವರದಿ ಪ್ರಕಾರ ತಮಿಳುನಾಡಿನ ಕಾಂತಲ್, ತಲೈಕುಂಠ, ಉದಗಮಂಡಲಂನಲ್ಲಿ ಕೇವಲ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಪ್ರವಾಸಿಗರ ನೆಚ್ಚಿನ ತಾಣವಾದ ಬೊಟಾನಿಕಲ್ ಗಾರ್ಡನ್‌ನಲ್ಲಿ 2 ಡಿಗ್ರಿ ಉಷ್ಣಾಂಶ, ಊಟಿಯಲ್ಲಿ 1 ಡಿಗ್ರಿಯಿಂದ ಝೀರೋ ಡಿಗ್ರಿಗೆ ತಾಪಮಾನ ಕುಸಿದಿದ್ದು ಆತಂಕವನ್ನು ಹೆಚ್ಚಿಸಿದೆ.

ಊಟಿಯ ಗಿರಿಧಾಮದಲ್ಲಿ ಮುಂಜಾನೆಯಂತೂ ಹೆಪ್ಪುಗಟ್ಟಿದ ವಾತಾವರಣ ಕಂಡು ಬಂದಿದೆ. ಮನೆಯಿಂದ ಹೊರ ಬಂದ ಜನರು ಕೊರೆಯೋ ಚಳಿಯಲ್ಲಿ ನಡುಗುತ್ತಿದ್ದು ತಮ್ಮ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೀಲಗಿರಿಯ ಹಲವು ಅರಣ್ಯ ಪ್ರದೇಶದಲ್ಲಿ ಮೊದಲ ಬಾರಿಗೆ 0 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

ಊಟಿ ಸೇರಿದಂತೆ ನೀಲಗಿರಿಯ ಹಲವು ಗಿರಿಧಾಮಗಳು ಪ್ರವಾಸಿಗರಿಗೆ ನೆಚ್ಚಿನ ತಾಣಗಳಾಗಿವೆ. ಆದರೆ ಜನವರಿಯಲ್ಲಿ ಮಂಜಿನ ಜೊತೆಗೆ ಹೆಪ್ಪುಗಟ್ಟಿದ ವಾತಾವರಣ ಕಂಡು ಬಂದಿರೋದಕ್ಕೆ ಹವಾಮಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಜಾಗತಿಕ ತಾಪಮಾನ ವೈಪರೀತ್ಯದಿಂದ ಈ ರೀತಿಯ ವಾತಾವರಣ ಎದುರಾಗುತ್ತಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಊಟಿಯಲ್ಲಿ 0 ಡಿಗ್ರಿಗೆ ಕುಸಿದ ಉಷ್ಣಾಂಶ; ಹವಾಮಾನ ತಜ್ಞರು ಹೇಳಿದ್ದೇನು?

https://newsfirstlive.com/wp-content/uploads/2024/01/OOty-Weather.jpg

Load More