ಐಫೋನ್​ಗಾಗಿ 3 ದಿನ ಮಗ ಉಪವಾಸ.. ಮಿಡಿದ ಮಾತೃ ಹೃದಯ, ಯುವಕನ ಹಠಕ್ಕೆ ಭಾರೀ ಆಕ್ರೋಶ

author-image
Bheemappa
Updated On
ಐಫೋನ್​ಗಾಗಿ 3 ದಿನ ಮಗ ಉಪವಾಸ.. ಮಿಡಿದ ಮಾತೃ ಹೃದಯ, ಯುವಕನ ಹಠಕ್ಕೆ ಭಾರೀ ಆಕ್ರೋಶ
Advertisment
  • ಈಗಿನ ಯುವಕರಿಗೆ ಐಫೋನ್​ ಎಂದರೆ ಸಖತ್ ಕ್ರೇಜ್​
  • ತನ್ನ ಕಷ್ಟದಲ್ಲೂ ಮಗನಿಗೆ ದುಬಾರಿ ಮೊಬೈಲ್ ಇಸ್ಕೊಟ್ಟ ತಾಯಿ
  • ತಾಯಿ ದೇವಾಲಯದ ಮುಂದೆ ಹೂವು ಮಾರಾಟ ಮಾಡ್ತಾರೆ

ಈಗಿನ ಯುವಕರಿಗೆ ಫೋನ್​ಗಳೆಂದರೆ ಹೆಚ್ಚು ಕ್ರೇಜ್. ತನ್ನ ಸ್ನೇಹಿತ ಒಂದು ಒಳ್ಳೆ ಮೊಬೈಲ್ ತೆಗೆದುಕೊಂಡಿದ್ದಾನೆ ಎಂದರೆ, ಅದಕ್ಕಿಂತ ಚೆನ್ನಾಗಿರೋದು ನಾನು ತೆಗೆದುಕೊಳ್ಳಬೇಕು ಎನ್ನುವುದು ಹಠ. ಸದ್ಯ ಇಂತಹದ್ದೆ ಸಂಗತಿಯೊಂದು ನಡೆದಿದ್ದು ಯುವಕನೊರ್ವ 3 ದಿನ ಉಪವಾಸವಿದ್ದು ಹಠ ಸಾಧಿಸಿ ತನ್ನ ತಾಯಿಯಿಂದ ಐಫೋನ್​ ಖರೀದಿ ಮಾಡಿದ್ದಾನೆ. ಆದರೆ ಈ ಸಂಬಂಧ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:ಬ್ಯಾಂಕ್​ನಲ್ಲಿ ಉದ್ಯೋಗ ಹುಡುಕುವವರಿಗೆ ಗುಡ್ ನ್ಯೂಸ್​.. ಕರ್ನಾಟಕದಲ್ಲೂ ಪೋಸ್ಟ್​ಗಳು ಖಾಲಿ ಖಾಲಿ, ಅಪ್ಲೇ ಮಾಡಿ

ಯುವಕ ದುಬಾರಿ ಐಫೋನ್ ತೆಗೆದುಕೊಳ್ಳುತ್ತಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಾತನಾಡಿರುವ ಯುವಕನ ತಾಯಿ, ನಾನು ದೇವಾಲಯದ ಮುಂದೆ ಹೂವುಗಳನ್ನು ಮಾರಾಟ ಮಾಡುತ್ತೇನೆ. ಮಗ ಐಫೋನ್ ಬೇಕೆಂದು ಒಂದೇ ರೋಧನೆ ಕೊಡುತ್ತಿದ್ದ. ಕೊಡಿಸಲ್ಲ ಎಂದು ಹೇಳಿದ್ದಕ್ಕೆ 3 ದಿನಗಳಿಂದ ಏನನ್ನು ತಿನ್ನದೆ ಉಪವಾಸ ಇದ್ದ. ಹೀಗಾಗಿ ಕೊನೆಗೆ ಹಣ ಕೊಟ್ಟು ಐಫೋನ್ ಖರೀದಿ ಮಾಡುತ್ತಿದ್ದೇವೆ. ಮತ್ತೆ ದುಡಿದು ಐಫೋನ್​ಗೆ ಕೊಟ್ಟ ಹಣ ವಾಪಸ್ ಮಾಡಬೇಕೆಂದು ಮಗನಿಗೆ ಹೇಳಿದ್ದೇನೆ ಎಂದು ಹೇಳಿದ್ದಾರೆ.


">August 18, 2024

ತಾಯಿ ಕಷ್ಟಪಟ್ಟು ಸಂಪಾದನೆ ಮಾಡಿರುವುದು ಕೇವಲ ಐಫೋನ್​ಗಾಗಿ ಖರ್ಚು ಮಾಡಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಯುವಕನ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತಿಯಾದ ಪ್ರೀತಿ ಯಾವಾಗಲೂ ಮಕ್ಕಳನ್ನು ನಾಶಪಡಿಸುತ್ತದೆ. ಈಗಿನ ಮಕ್ಕಳನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದಿದ್ದಾರೆ. ಯುವಕನಿಗೆ ಹಾಗೇ ಹಸಿವಿನಿಂದ ಬಿಡಬೇಕಿತ್ತು. ಇಂತಹ ಮಗ ಇದ್ದರೆಷ್ಟು, ಇಲ್ಲದಿದ್ದರೆ ಎಷ್ಟು ಕಾಮೆಂಟ್ ಮಾಡಿದ್ದಾರೆ. ಅವನಿಂದ ಏನು ಉಪಯೋಗವಿಲ್ಲ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಎಲ್ಲಿಯದ್ದು ಎಂದು ತಿಳಿದಿಲ್ಲವಾದರೂ Incognit ಎಂಬ ಎಕ್ಸ್​ ಅಕೌಂಟ್​​ ಇದನ್ನು ಶೇರ್ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment