newsfirstkannada.com

ಓವರ್​ ಟೇಕ್​ ಮಾಡಲು ಹೋಗಿ ಟೆಂಪೋ ಪಲ್ಟಿ.. ಓರ್ವ ಸಾವು, ಮತ್ತೋರ್ವ ಗಂಭೀರ 

Share :

Published June 9, 2024 at 12:41pm

  ಓವರ್​​ ಟೇಕ್​ ಮಾಡಲು ಹೋದ ಟೆಂಪೋ ಟ್ರೈವರ್

  ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಟೆಂಪೋ

  ಕೂಲಿ ಕೆಲಸಕ್ಕೆಂದು ಹೊರಟಿದ್ದ ಕಾರ್ಮಿಕ ಅಪಘಾತದಲ್ಲಿ ಸಾವು

ಕಲಬುರಗಿ: ಗೂಡ್ಸ್ ಮಿನಿ ಟೆಂಪೋ ಪಲ್ಟಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾಂವ್ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ: ಘಟಪ್ರಭಾ ನದಿ ದಾಟುವ ವೇಳೆ ಅವಘಡ.. 13 ಜನರನ್ನು ಹೊತ್ತು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿ

ಹರಕಂಚಿ ಗ್ರಾಮದ ಕೂಲಿ ಕಾರ್ಮಿಕ ಶಿವಪ್ಪ ಸಾವನ್ನಪ್ಪಿದ ದುರ್ದೈವಿ. ಟೆಂಪೋ ಪಲ್ಟಿ ಹೊಡೆದ ಪರಿಣಾಮ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಗಂಭೀರ ಗಾಯಗೊಂಡ ವ್ಯಕ್ತಿಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ನಿಯಂತ್ರಣ ತಪ್ಪಿ ಖಾಸಗಿ ಬಸ್​ ಪಲ್ಟಿ.. 20ಕ್ಕೂ ಅಧಿಕ ಪ್ರಯಾಣಿಕರಿಗೆ ತೀವ್ರ ಗಾಯ

ಟೆಂಪೋದಲ್ಲಿ ಹರಕಂಚಿ ಗ್ರಾಮದಿಂದ ಕೂಲಿ ಕೆಲಸಕ್ಕೆಂದು ಹುಮನಬಾದ್ ಪಟ್ಟಣಕ್ಕೆ ತೆರಳುತ್ತಿದ್ದರು. ವಾಹನವೊಂದನ್ನು ಓವರ್‌ಟೆಕ್ ಮಾಡಲು ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಟೆಂಪೋ ಪಲ್ಟಿ ಹೊಡೆದಿದೆ. ಸ್ಥಳಕ್ಕೆ ಕಮಲಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಓವರ್​ ಟೇಕ್​ ಮಾಡಲು ಹೋಗಿ ಟೆಂಪೋ ಪಲ್ಟಿ.. ಓರ್ವ ಸಾವು, ಮತ್ತೋರ್ವ ಗಂಭೀರ 

https://newsfirstlive.com/wp-content/uploads/2024/06/Kalaburagi-1.jpg

Load More