Advertisment

ಸಚಿನ್ ತೆಂಡುಲ್ಕರ್​​​​​ ಭದ್ರತೆಗೆ ನಿಯೋಜಿಸಿದ್ದ VVIP ಸೆಕ್ಯೂರಿಟಿ ಸಾವಿಗೆ ಶರಣು.. ಆಗಿದ್ದೇನು..

author-image
Ganesh
Updated On
ಸಚಿನ್ ತೆಂಡುಲ್ಕರ್​​​​​ ಭದ್ರತೆಗೆ ನಿಯೋಜಿಸಿದ್ದ VVIP ಸೆಕ್ಯೂರಿಟಿ ಸಾವಿಗೆ ಶರಣು.. ಆಗಿದ್ದೇನು..
Advertisment
  • ಮುಂಬೈನ ಬಾಂದ್ರಾದಲ್ಲಿರುವ ಸಚಿನ್​ ನಿವಾಸಕ್ಕೆ ನಿಯೋಜನೆ
  • ಮಹಾರಾಷ್ಟ್ರ ಪೊಲೀಸರಿಂದ ತನಿಖೆ ಆರಂಭ ಆಗಿದೆ
  • ಮಧ್ಯರಾತ್ರಿ 1.30ಕ್ಕೆ ಹಣೆಗೆ ಗುಂಡು ಹಾರಿಸಿಕೊಂಡು ಸಾವು

ಹಿರಿಯ ಕ್ರಿಕೆಟಿಗ, ಭಾರತ ರತ್ನ ಸಚಿನ್ ತೆಂಡುಲ್ಕರ್ ಭದ್ರತೆಗಾಗಿ ನಿಯೋಜಿಸಲಾಗಿದ್ದ ಸಿಆರ್​ಪಿಎಫ್​​ ಯೋಧ ನಿನ್ನೆ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕಾಶ್ ಕಾಪ್ಡೆ (36) ಆತ್ಮಹತ್ಯೆಗೆ ಶರಣಾದ ಭದ್ರತಾ ಸಿಬ್ಬಂದಿ.

Advertisment

ಮುಂಬೈನ ಬಾಂದ್ರಾದಲ್ಲಿರುವ ಸಚಿನ್ ತೆಂಡೂಲ್ಕರ್ ನಿವಾಸದಲ್ಲಿ ಪ್ರಕಾಶ್ ಕಾಪ್ಡೆಯನ್ನು ಭದ್ರತೆಗೆಂದು ನಿಯೋಜಿಸಲಾಗಿತ್ತು. ರಾಜ್ಯ ಮೀಸಲು ಪೊಲೀಸ್ ಪಡೆಗೆ ಸೇರಿದ ಪ್ರಕಾಶ್ ತಮ್ಮ ಸರ್ವಿಸ್ ರಿವಾಲ್ವರ್‌’ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಆತ್ಮಹತ್ಯೆಗೆ ಕಾರಣಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಮಹಾರಾಷ್ಟ್ರ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ:SRH vs GT ನಡುವೆ ಇವತ್ತು ಮೆಗಾ ಫೈಟ್​.. ಹೈದರಾಬಾದ್​ ಸೋತರೆ ಆರ್​ಸಿಬಿಗೆ ಭಾರೀ ಲಾಭ.. ಅದು ಹೇಗೆ..?

ಪ್ರಕಾಶ್ ಕಾಪ್ಡೆ ಮಧ್ಯರಾತ್ರಿ 1.30 ರ ಸುಮಾರಿಗೆ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ತನಿಖೆ ಪೂರ್ಣಗೊಂಡ ನಂತರ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲಾಗುವುದು. ಮೃತರಿಗೆ ಪೋಷಕರು, ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ ಎಂದು ಜಾಮ್ನೇರ್ ಪೊಲೀಸರು ತಿಳಿಸಿದ್ದಾರೆ.

Advertisment

ಇದನ್ನೂ ಓದಿ:‘ಬೇಕಂತ ಕೊಲೆ ಮಾಡ್ಲಿಲ್ಲ ಸರ್..’ ಪೊಲೀಸರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮೋನಿಕಾ

ಇದನ್ನೂ ಓದಿ: CSK vs RCB ನಡುವಿನ ಮ್ಯಾಚ್​ಗೆ ಮಳೆ ಬಂದರೆ ಏನಾಗುತ್ತದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment