ಟೆನ್ನಿಸ್ ಲೋಕದಲ್ಲಿ ರಫೇಲ್ ನಡಾಲ್ ಯುಗಾಂತ್ಯ! ನಿವೃತ್ತಿ ಘೋಷಿಸಿದ ಸ್ಪೇನ್ ಧ್ರುವತಾರೆ

author-image
Gopal Kulkarni
Updated On
ಟೆನ್ನಿಸ್ ಲೋಕದಲ್ಲಿ ರಫೇಲ್ ನಡಾಲ್ ಯುಗಾಂತ್ಯ! ನಿವೃತ್ತಿ ಘೋಷಿಸಿದ ಸ್ಪೇನ್ ಧ್ರುವತಾರೆ
Advertisment
  • ಟೆನ್ನಿಸ್ ಲೋಕದಿಂದ ದೂರ ಸರಿದ ದ್ರುವತಾರೆ ರಫೇಲ್ ನಡಾಲ್​
  • ಟೆನ್ನಿಸ್ ಆಟಕ್ಕೆ ನಿವೃತ್ತಿ ಘೋಷಿಸಿದ 24 ಗ್ರಾಂಡ್​ಸ್ಲ್ಯಾಮ್ ವಿಜೇತ
  • ಕಳೆದ ಎರಡು ವರ್ಷದಿಂದ ಗಾಯದ ಸಮಸ್ಯೆಯಿಂದ ನರಳಿದ್ದ ರಫೇಲ್

ಸ್ಪೇನ್ ರಾಷ್ಟ್ರ ಕಂಡ ಟೆನ್ನಿಸ್ ಅಂಗಳದ ಧ್ರುವತಾರೆ, 22 ಗ್ರಾಂಡ್​ ಸ್ಲ್ಯಾಮ್ ಸಿಂಗಲ್ ಚಾಂಪಿಯನ್ ರಫೇಲ್ ನಡಾಲ್ ಟೆನ್ನಿಸ್ ಅಂಗಳದಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ತಮ್ಮ ಎರಡು ದಶಕಕ್ಕೂ ಹೆಚ್ಚು ಕಾಲ ಆಡಿದ ಆಟಕ್ಕೆ ನಿವೃತ್ತಿ ಘೋಷಿಸದ್ದಾರೆ.  ಟೆನ್ನಿಸ್ ಲೋಕದಲ್ಲಿ ರಫೇಲ್ ನಡಾಲ್ ಯುಗಾಂತ್ಯವಾಗಿದೆ.

38 ವರ್ಷದ ರಫೇಲ್ ನಡಾಲ್ ಇತ್ತೀಚಿನ ವರ್ಷಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ, ಕಳೆದ ಎರಡು ವರ್ಷಗಳಲ್ಲಿ ಅದು ಇನ್ನೂ ಹೆಚ್ಚಾಗಿದೆ ಇದರಿಂದಾಗಿ ನಾನು ನನ್ನ ಆಟಕ್ಕೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಅದು ಮಾತ್ರವಲ್ಲ ಮುಂಬರುವ ಡೇವಿಸ್ ಕಪ್ ನನ್ನ ವೃತ್ತಿ ಜೀವನದ ಕೊನೆಯ ಆಟವಾಗಲಿದೆ. ಡೇವಿಸ್ ಕಪ್​ನಲ್ಲಿ ನಾನು ನನ್ನ ದೇಶವನ್ನು ಪ್ರತಿನಿಧಿಸುತ್ತಿರುವುದು ತುಂಬಾ ಉತ್ಸುಕತೆ ತಂದಿದೆ. ಎಂದು ಹೇಳಿದ್ದಾರೆ ರಫೇಲ್ ನಡಾಲ್​

ಇದನ್ನೂ ಓದಿ:ಮತ್ತೊಂದು ತಪ್ಪು ಮಾಡಿದ ಬಿಸಿಸಿಐ.. ಬಟಾ ಬಯಲಾಯ್ತು ಬಿಸಿಸಿಐನ ಇಬ್ಬಗೆಯ ನೀತಿ..!

ನವೆಂಬರ್​ನಲ್ಲಿ ಸ್ಪೇನ್ ನಡೆಯಲಿರುವ ಡೇವಿಸ್ ಕಪ್ ಬಳಿಕ ಮುಂದೆ ರಫೇಲ್ ನಡಾಲ್ ನಿವೃತ್ತಿ ಜೀವನವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. 22 ಬಾರಿ ಗ್ರಾಂಡ್ ಸ್ಲ್ಯಾಮ್ ಸಿಂಗಲ್ಸ್ ಚಾಂಪಿಯನ್ ಜೊತೆಗೆ ರಫೇಲ್ ನಡಾಲ್ 14 ಬಾರಿ ಫ್ರೆಂಚ್ ಓಪನ್ ಟೆನ್ನಿಸ್ ಟೈಟಲ್ ಗೆದ್ದ ಕೀರ್ತಿಯನ್ನು ಪಡೆದಿದ್ದಾರೆ. ರಫೇಲ್ ನಡಾಲ್ ಅವರ ಈ ನಿವೃತ್ತಿ ಟೆನ್ನಿಸ್​ ಅಂಗಳದ ಮಹಾನ್ ಧ್ರುವತಾರೆಯ ಯುಗಾಂತ್ಯವಾದಂತೆ ಆಗಿದೆ.

ಇದನ್ನೂ ಓದಿ:ಆರ್​​​ಸಿಬಿಯಿಂದ ಬಿಗ್​ ಅಪ್ಡೇಟ್​​; ಬೆಂಗಳೂರು ತಂಡಕ್ಕೆ ಸ್ಫೋಟಕ ಬ್ಯಾಟರ್​ ಎಂಟ್ರಿ!

ಕಳೆದ ಎರಡು ವರ್ಷಗಳಿಂದ ನಡಾಲ್ ಗಾಯದ ಸಮಸ್ಯೆಗಳಿಂದ ಅತಿಯಾಗಿ ಬಳಲಿದ್ದರು. ಇದರ ನಡುವೆಯೂ ಕೂಡ ಟೆನ್ನಿಸ್​ನಿಂದ ದೂರ ಸರಿದಿರಲಿಲ್ಲ. ಆದ್ರೆ ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾಗಿಯಾಗುವುದರಿಂದ ಹಿಂದೆ ಸರಿದ ನಡಾಲ್, ತವರಿನಲ್ಲಿ ನಡೆಯಲಿರುವ ಡೇವಿಸ್ ಕಪ್ ಕೊನೆಯದಾಗಲಿದೆ. ನವೆಂಬರ್ 19 ರಿಂದ 24ರವರೆಗೂ ಈ ಪಂದ್ಯ ನಡೆಯಲಿದ್ದು. ಇದನ್ನು ಗೆದ್ದು ತವರಲ್ಲಿಯೇ ತಮ್ಮ ಆಟಕ್ಕೆ ಮಹಾವಿದಾಯ ಹೇಳಲಿದ್ದಾರೆ ನಡಾಲ್​. ಇನ್ನೊಂದು ವಿಷಯ ನಿಮಗೆ ಗೊತ್ತಿರಲಿ ಇಡೀ ಟೆನ್ನಿಸ್ ಜಗತ್ತೇ ಈ ಮಹಾನ್ ಟೆನ್ನಿಸ್ ಆಟಗಾರನನ್ನು ‘ಕಿಂಗ್ ಆಫ್ ಕ್ಲೇಯ್‘ ಎಂದೇ ಕರೆಯುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment