ಹೊಸ ಜೀವನ ಆರಂಭ.. ತನ್ನ ಹೊಸ ಮನೆಗೆ ವಿಶೇಷ ವ್ಯಕ್ತಿಯ ಹೆಸರಿಟ್ಟ ಸಾನಿಯಾ ಮಿರ್ಜಾ; ಏನದು?

author-image
Veena Gangani
Updated On
ಕೊನೆಗೂ ಶೋಯೆಬ್ ಮಲಿಕ್‌ಗೆ ಸೆಡ್ಡು ಹೊಡೆದ ಸಾನಿಯಾ ಮಿರ್ಜಾ.. ಟೆನಿಸ್ ತಾರೆ ದಿಟ್ಟ ನಿರ್ಧಾರ!
Advertisment
  • ಶೋಯೆಬ್​ ಮಲ್ಲಿಕ್​ಗೆ ​​ವಿಚ್ಛೇದನ ನೀಡಿದ ಬಳಿಕ ಸಾನಿಯಾ ಏನ್ ಮಾಡ್ತಿದ್ದಾರೆ?
  • 14 ವರ್ಷದ ದಾಂಪತ್ಯ ಜೀವನಕ್ಕೆ ಫುಲ್​ ಸ್ಟಾಪ್​ ಇಟ್ಟಿದ್ದ ಸಾನಿಯಾ ಮಿರ್ಜಾ
  • ದುಬೈ ಮನೆಯಿಂದ ತಮ್ಮ ಮಾಜಿ ಪತಿಯ ಹೆಸರನ್ನು ಕಿತ್ತು ಹಾಕಿದ ಸಾನಿಯಾ

ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೆಬ್​ ಮಲ್ಲಿಕ್ ಮತ್ತು ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿಚ್ಛೇದನ ಪಡೆದು ಒಂದು ವರ್ಷ ಕಳೆದಿದೆ. ಶೋಯೆಬ್​ ಮಲ್ಲಿಕ್​ಗೆ ​​ವಿಚ್ಛೇದನ ನೀಡಿದ ಬಳಿಕ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ:2ನೇ ಮದ್ವೆ ವದಂತಿ ನಡುವೆ ಸಾನಿಯಾ ಮಿರ್ಜಾರಿಂದ ಮಹತ್ವದ ಘೋಷಣೆ! ವಾಟ್ಸ್​ಆ್ಯಪ್​ ನಂಬರ್​​ ಹಂಚಿಕೊಂಡ್ರು ನೋಡಿ

ಸಾನಿಯಾ ಮಿರ್ಜಾ ತಮ್ಮ 14 ವರ್ಷದ ದಾಂಪತ್ಯ ಜೀವನಕ್ಕೆ ಫುಲ್​ ಸ್ಟಾಪ್​ ನೀಡಿದ ಬಳಿಕ ಹೊಸ ಜೀವನ ಶುರು ಮಾಡಿದ್ದಾರೆ. ಹೌದು, ವಿಚ್ಛೇದನದ ಒಂದು ವರ್ಷದ ನಂತರ, ಸಾನಿಯಾ ಮಿರ್ಜಾ ತಮ್ಮ ದುಬೈ ಮನೆಯಿಂದ ತಮ್ಮ ಮಾಜಿ ಪತಿ ಶೋಯೆಬ್ ಮಲಿಕ್ ಹೆಸರನ್ನು ತೆಗೆದು ಹಾಕಿದ್ದಾರೆ ಎಂಬ ಸುದ್ದಿ ಈಗ ಹೊರ ಬಿದ್ದಿದೆ. ಸಾನಿಯಾ ಮಿರ್ಜಾ ಈಗ ತಮ್ಮ ದುಬೈ ಮನೆಯ ಮೇಲೆ ಶೋಯೆಬ್ ಮಲಿಕ್ ಹೆಸರಿನ ಬದಲು ವಿಶೇಷ ವ್ಯಕ್ತಿಯ ಹೆಸರನ್ನು ಬರೆದಿದ್ದಾರಂತೆ.

publive-image

ಸಾನಿಯಾ ಮಿರ್ಜಾ ತಮ್ಮ ದುಬೈ ಮನೆಯ ಮೇಲೆ ಶೋಯೆಬ್ ಮಲಿಕ್ ಹೆಸರಿನ ಬದಲಿಗೆ ತಮ್ಮ ಮಗ ಇಜಾನ್ ಹೆಸರನ್ನು ಬರೆದಿದ್ದಾರೆ. ಅದರಲ್ಲೂ ಸಾನಿಯಾ ಮಿರ್ಜಾ ಈಗ ಈ ಮನೆಯಲ್ಲಿ ತಮ್ಮ ಮಗ ಇಜಾನ್ ಜೊತೆ ವಾಸಿಸುವ ಮೂಲಕ ಹೊಸ ಜೀವನ ಆರಂಭ ಮಾಡೋದಕ್ಕೆ ಸಜ್ಜಾಗಿದ್ದಾರಂತೆ. ಬಹಳ ದಿನಗಳಿಂದ ತನ್ನ ಮಗನೊಂದಿಗೆ ಯುಎಇಯಲ್ಲಿ ವಾಸಿಸುತ್ತಿರುವ ಸಾನಿಯಾ ಮಿರ್ಜಾ, ಇಜಾನ್ ಈಗ ನನ್ನ ಬದುಕಿನ ದೊಡ್ಡ ಆದ್ಯತೆ ಎಂದು ಹೇಳಿದ್ದರು. ಸಾನಿಯಾ ಮಿರ್ಜಾ ತಮ್ಮ ಮಗ ಇಜಾನ್‌ನನ್ನು ತಮ್ಮ ಆತ್ಮೀಯ ಗೆಳೆಯ ಎಂದು ಹೇಳಿದ್ದರು.

ಇನ್ನೂ, 2010ರಲ್ಲಿ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಹೈದರಾಬಾದ್‌ನಲ್ಲಿ ವಿವಾಹವಾಗಿದ್ದರು. 2018ರಲ್ಲಿ, ಸಾನಿಯಾ ಮಿರ್ಜಾ ಇಜಾನ್‌ಗೆ ಜನ್ಮ ನೀಡಿದ್ದರು. ಆದರೆ ಈ ಜೋಡಿ ಬಹುಕಾಲ ಒಟ್ಟಿಗೆ ಬಾಳಲು ಸಾಧ್ಯವಾಗಲಿಲ್ಲ. ನಂತರ ಇಬ್ಬರೂ 2023 ರಲ್ಲಿ ವಿಚ್ಛೇದನ ಪಡೆದರು. ಇದೀಗ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಶೋಯೆಬ್ ಮಲಿಕ್ ವಿವಾಹವಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment