ಕೊನೆಗೂ ಶೋಯೆಬ್ ಮಲಿಕ್‌ಗೆ ಸೆಡ್ಡು ಹೊಡೆದ ಸಾನಿಯಾ ಮಿರ್ಜಾ.. ಟೆನಿಸ್ ತಾರೆ ದಿಟ್ಟ ನಿರ್ಧಾರ!

author-image
admin
Updated On
ಮಗಳ ಡಿವೋರ್ಸ್​​ ಬಗ್ಗೆ ಸಾನಿಯಾ ಮಿರ್ಜಾ ತಂದೆ ಹೇಳಿದ್ದೇನು..? ಇಲ್ಲಿದೆ ಅಸಲಿ ಸತ್ಯ!
Advertisment
  • 2010ರಲ್ಲಿ ಶೋಯೆಬ್ ಮಲಿಕ್ ಜೊತೆ ಸಾನಿಯಾ ಮಿರ್ಜಾ ಮದುವೆ
  • 2023ರಲ್ಲಿ ತಮ್ಮ 14 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಟೆನಿಸ್ ಕ್ವೀನ್‌!
  • ಡಿವೋರ್ಸ್ ಪಡೆದ 2 ವರ್ಷದ ಬಳಿಕ ಸಾನಿಯಾ ಮಿರ್ಜಾ ದಿಟ್ಟ ನಿರ್ಧಾರ

ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದುವರೆಗೆ ಟೆನಿಸ್‌ನಲ್ಲಿ ಅತಿ ಹೆಚ್ಚಿನ ಕ್ರಮಾಂಕ ಪಡೆದ ಭಾರತೀಯ ಮಹಿಳೆ. ಚಿಕ್ಕ ವಯಸ್ಸಿನಲ್ಲಿಯೇ ಟೆನಿಸ್​ನಲ್ಲಿ ಉನ್ನತ ಸಾಧನೆಗಳಿಂದಾಗಿ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.

ಕಳೆದ ವರ್ಷ ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದ ಸಾನಿಯಾ ಮಿರ್ಜಾ ತಾವೇ ಮೆಚ್ಚಿ ಮದುವೆಯಾದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆ ವಿಚ್ಛೇದನ ಪಡೆದಿರುವುದು ಗೊತ್ತೇ ಇದೆ.

publive-image

2010ರಲ್ಲಿ ಶೋಯೆಬ್ ಮಲಿಕ್ ಜೊತೆ ಸಾನಿಯಾ ಮಿರ್ಜಾ ಮದುವೆ ಹೈದ್ರಾಬಾದ್​ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಇಬ್ಬರ ಮದುವೆಗೆ ಸಾಕ್ಷಿಯಾಗಿ 2018ರಲ್ಲಿ ಪುತ್ರ ಇಜಾನ್ ಮಿರ್ಜಾ ಮಲಿಕ್ ಜನಿಸಿದ್ದ. ಶೋಯೆಬ್​ ಮಲಿಕ್ ಜೊತೆ ಪ್ರೀತಿಸಿ ಮದುವೆಯಾಗಿದ್ದ ಸಾನಿಯಾ ಮಿರ್ಜಾರ ಜೀವನ ಸುಖದ ಉತ್ತುಂಗದಲ್ಲಿದ್ದಾಗಲೇ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು.

ವದಂತಿಗಳ ನಡುವೆಯೇ 2023ರಲ್ಲಿ ತಮ್ಮ 14 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ರು. ಸಾನಿಯಾ ವಿಚ್ಛೇದನದ ಬಳಿಕ ಶೋಯೆಬ್ ಮಲಿಕ್ ಬೇರೊಂದು ಹುಡುಗಿಯನ್ನು ಮದುವೆಯಾದ್ರು. ಶೋಯೆಬ್ ಮತ್ತೊಂದು ಹುಡುಗಿ ಜೊತೆ ಡೇಟಿಂಗ್​ನಲ್ಲಿದ್ದಕ್ಕೆ ಸಾನಿಯಾ ವಿಚ್ಛೇದನ ಎಂಬ ವರದಿಗಳು ಬಂದಿವೆ.

publive-image

2024 ಜನವರಿಗೆ ಶೋಯೆಬ್ ಮಲಿಕ್ ಜೊತೆ ಸಾನಿಯಾ ಮಿರ್ಜಾ ಡಿವೋರ್ಸ್​ ಪಡೆದು ಸರಿಯಾಗಿ 1 ವರ್ಷವಾಗಿದೆ. ಇದೀಗ ಸಾನಿಯಾ ಮಿರ್ಜಾ ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ದುಬೈನಲ್ಲಿರುವ ತಮ್ಮ ಮನೆಯಿಂದ ಶೋಯೆಬ್ ಹೆಸರು ತೆಗೆದು ಹಾಕುವ ಮೂಲಕ ಸಾನಿಯಾ ಜೀವನದಲ್ಲಿ ಹೊಸ ಹೆಜ್ಜೆ ಇರಿಸಿದ್ದಾರೆ.

ದುಬೈನಲ್ಲಿ ಸಾನಿಯಾ ಹೊಸ ಜೀವನ!
ಸಾನಿಯಾ ಮಿರ್ಜಾ ದುಬೈನಲ್ಲಿರುವ ತಮ್ಮ ನಿವಾಸದಲ್ಲಿ ಶೋಯೆಬ್ ಮಲಿಕ್ ಹೆಸರು ತೆಗೆದು ತಮ್ಮ ಪುತ್ರ ಇಜಾನ್ ಹೆಸರು ಸೇರಿಸಿದ್ದಾರೆ. ಅವರು ತಮ್ಮ ವಿಲ್ಲಾದಲ್ಲಿ ನವೀಕರಣ ಬಳಿಕ ಪುತ್ರನೊಂದಿಗೆ ದುಬೈನಲ್ಲಿ ವಾಸಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: 2ನೇ ಮದ್ವೆ ವದಂತಿ ನಡುವೆ ಸಾನಿಯಾ ಮಿರ್ಜಾರಿಂದ ಮಹತ್ವದ ಘೋಷಣೆ! ವಾಟ್ಸ್​ಆ್ಯಪ್​ ನಂಬರ್​​ ಹಂಚಿಕೊಂಡ್ರು ನೋಡಿ 

ಸಾನಿಯಾರ ವಿಲ್ಲಾದ ಕೆಲಸ ಬಹುತೇಕ ಪೂರ್ಣವಾಗಿದೆ. ಶೋಯೆಬ್ ಮಲಿಕ್ ಜೊತೆ ವಿಚ್ಛೇದನದ ಬಳಿಕ ಯುಎಇಯಲ್ಲಿ ವಾಸಿಸುತ್ತಿರುವ ಸಾನಿಯಾ, ಈಗ ತಮ್ಮ ಮಗನೊಂದಿಗೆ ಹೊಸ ಜೀವನ ಆರಂಭಿಸುತ್ತಿದ್ದಾರೆ. ತನ್ನ ಮಗ ಇಜಾನ್ ತನ್ನ ಮೊದಲ ಆದ್ಯತೆ ಎಂದು ಸಾನಿಯಾ ಹೇಳಿದ್ದಾರೆ. ಇಜಾನ್ ಮಗನಷ್ಟೇ ಅಲ್ಲ. ತನ್ನ ಬೆಸ್ಟ್​ ಫ್ರೆಂಡ್ ಅಂತ ಸಾನಿಯಾ ಮಿರ್ಜಾ ಹೇಳಿದ್ದಾರೆ.

2023ರಲ್ಲಿ ವೃತ್ತಿಪರ ಟೆನಿಸ್​ಗೆ ವಿದಾಯ ಹೇಳುವವರೆಗೂ ತಮ್ಮ 20 ವರ್ಷಗಳ ಟೆನಿಸ್ ಜೀವನದಲ್ಲಿ ಸಾನಿಯಾ ಮಿರ್ಜಾ 43 ಡಬ್ಲ್ಯುಟಿಎ ಡಬಲ್ಸ್ ಪ್ರಶಸ್ತಿ ಮತ್ತು 1 ಸಿಂಗಲ್ಸ್​ ಪ್ರಶಸ್ತಿ ಗೆದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment