newsfirstkannada.com

ಮಗಳ ಡಿವೋರ್ಸ್​​ ಬಗ್ಗೆ ಸಾನಿಯಾ ಮಿರ್ಜಾ ತಂದೆ ಹೇಳಿದ್ದೇನು..? ಇಲ್ಲಿದೆ ಅಸಲಿ ಸತ್ಯ!

Share :

Published January 20, 2024 at 5:37pm

    ಸಾನಿಯಾ ಮಿರ್ಜಾಗೆ ಕೈ ಕೊಟ್ಟು ಪಾಕ್​ ನಟಿ ಕೈ ಹಿಡಿದ ಶೋಯೆಬ್​​​

    4 ತಿಂಗಳ ಹಿಂದೆಯೇ ಸಾನಿಯಾ, ಶೋಯೆಬ್​​ಗೆ ಡಿವೋರ್ಸ್​ ಆಗಿತ್ತಾ?

    ಈ ಬಗ್ಗೆ ಸಾನಿಯಾ ಮಿರ್ಜಾ ಇಮ್ರಾನ್​ ಅವರು ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದ ಮಾಜಿ ಕ್ರಿಕೆಟರ್​​ ಶೋಯೆಬ್ ಮಲಿಕ್ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಎರಡನೇ ಮದುವೆಯಾಗಿದ್ದರು. ಕಳೆದ 12 ವರ್ಷಗಳಿಂದ ಶೋಯೆಬ್ ಮತ್ತು ಸಾನಿಯಾ ಪರಸ್ಪರ ಜೊತೆಯಲ್ಲೇ ಇದ್ದರು. ಇಬ್ಬರಿಗೂ ಒಬ್ಬ ಮಗ ಕೂಡ ಇದ್ದಾನೆ. ಸದ್ಯ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ವಿಚ್ಛೇದನ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿಯೇ ಪಾಕ್​​ ಮಾಜಿ ಕ್ರಿಕೆಟರ್​​ ಶೋಯೆಬ್ ಮಲಿಕ್ ಪಾಕ್​​​​ ನಟಿ ಸನಾ ಜಾವೇದ್ ಅವರನ್ನು ಮೂರನೇ ಮದುವೆ ಆಗಿದ್ದಾರೆ.

ಇನ್ನು, ಈ ಸಂಬಂಧ ಈಗ ಪಿಟಿಐಗೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂದೆ ಇಮ್ರಾನ್​ ಮಿರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗಳು ಶೋಯೆಬ್​ ಅವರಿಗೆ ಖುಲಾ ನೀಡಿದ್ದಾಳೆ. ಖುಲಾ ಎಂದರೆ ಸ್ತ್ರೀ ತನ್ನ ಪತಿಯಿಂದ ಬಿಡುಗಡೆ ಕೇಳುವ ಸ್ವಾತಂತ್ರ್ಯ. ಇದು ಸಮ್ಮತಿಯ ವಿಚ್ಛೇದನವಾಗಿದ್ದು, ಮದುವೆಯ ಬಂಧದಿಂದ ತನ್ನನ್ನು ಬಿಡುಗಡೆ ಮಾಡುವಂತೆ ಪತಿಗೆ ಮಹಿಳೆ ತಿಳಿಸುವ ಕ್ರಮ ಎಂದರು.

ಹೌದು, ಇಬ್ಬರು 4 ತಿಂಗಳ ಹಿಂದೆಯೇ ವಿಚ್ಛೇದನ ಪಡೆದಿದ್ದಾರೆ ಎಂದು ವರದಿಯಾಗಿದೆ. ಶೋಯೆಬ್ ಮತ್ತು ಸಾನಿಯಾ ಡಿವೋರ್ಸ್​​ಗೆ ಕಾರಣವೇ ಪಾಕ್​​​ ನಟಿ ಸನಾ ಜಾವೇದ್ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ಶೋಯೆಬ್​​, ಸನಾ ಜಾವೇದ್​​ ಡೇಟಿಂಗ್​ ಮಾಡುತ್ತಿದ್ದರು. ಈ ವಿಚಾರ ಗೊತ್ತಾದ ಮೇಲೆ ಸಾನಿಯಾ, ಶೋಯೆಬ್​​ ಮಧ್ಯೆ ಜಗಳ ಆಗಿತ್ತು. ಈಗ ಇಬ್ಬರು ಡಿವೋರ್ಸ್​ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗಳ ಡಿವೋರ್ಸ್​​ ಬಗ್ಗೆ ಸಾನಿಯಾ ಮಿರ್ಜಾ ತಂದೆ ಹೇಳಿದ್ದೇನು..? ಇಲ್ಲಿದೆ ಅಸಲಿ ಸತ್ಯ!

https://newsfirstlive.com/wp-content/uploads/2024/01/Sania-Mirza.jpg

Load More