/newsfirstlive-kannada/media/post_attachments/wp-content/uploads/2025/02/Karnataka-bundh-SSLC-Exam-2025.jpg)
ಬೆಂಗಳೂರು: ಮಾರ್ಚ್ 21ರಿಂದ ರಾಜ್ಯದಲ್ಲಿ SSLC ಪರೀಕ್ಷೆ ಶುರುವಾಗಿದೆ. ಇತ್ತ 4, 5, 6 ಮತ್ತು 7ನೇ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿವೆ. ಈ ಮಧ್ಯೆ ಇಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೋರಾಟಗಾರರು ಪ್ರತಿಭಟನೆಗೆ ಇಳಿದಿದ್ದಾರೆ.
ಇದನ್ನೂ ಓದಿ:ನಾಳೆ ಓಲಾ, ಉಬರ್ ರಸ್ತೆಗೆ ಇಳಿಯಲ್ಲ.. ಕರ್ನಾಟಕ ಬಂದ್ಗೆ ಯಾರೆಲ್ಲ ಬೆಂಬಲ ಕೊಟ್ಟವ್ರೆ..?
ಈ ಹಿಂದೆ ಪರೀಕ್ಷೆ ವಿಚಾರಕ್ಕೆ ಬಂದ್ಗೆ ಹಲವು ಸಂಘಟನೆಗಳ ವಿರೋಧ ವ್ಯಕ್ತಪಡಿಸಿದ್ದವು. ಇದೇ ಕಾರಣಕ್ಕೆ ಬಂದ್ ದಿನಾಂಕ ಮುಂದೂಡಿಕೆ ಮಾಡಲು ಸಹ ಆಗ್ರಹಿಸಿದ್ದರು. ಹೀಗಾಗಿ ಸಾಕಷ್ಟು ಮಂದಿ ಕರ್ನಾಟಕ್ ಬಂದ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಸಾಕಷ್ಟು ವಿದ್ಯಾರ್ಥಿಗಳು ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಪರೀಕ್ಷೆ ಮುಂದೂಡಿಕೆ ಆಗುತ್ತಾ ಅಂತ ಗೊಂದಲದಲ್ಲಿದ್ದರು.
ಸದ್ಯದ ಮಾಹಿತಿ ಪ್ರಕಾರ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪೂರ್ವ ನಿಗದಿಯಂತೆ ಮೌಲ್ಯಾಂಕನ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳಿಂದ ನ್ಯೂಸ್ ಫಸ್ಟ್ಗೆ ಮಾಹಿತಿ ಲಭ್ಯವಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ 4, 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಪರೀಕ್ಷೆ ನಡೆಯಲಿದೆ. ಒಂದು ವೇಳೆ ಬಂದ್‌ನಿಂದ ತೀರಾ ಅಡಚಣೆಯಾದರೆ ಮಾತ್ರ ಪರೀಕ್ಷೆ ಸಮಯ ಅಥವಾ ದಿನ ಬದಲಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ