newsfirstkannada.com

ಸರ್ಕಾರ, ಪಕ್ಷದ ಮಟ್ಟದಲ್ಲಿ ಪತ್ರ ತಂದ ಮುಜುಗರ.. ಇದರ ಹಿಂದಿನ ಮೂಲ ಪುರುಷನ ಹುಡುಕಾಟಕ್ಕಿಳಿದ ಕಾಂಗ್ರೆಸ್..!

Share :

Published July 28, 2023 at 8:37am

    ಕಾಂಗ್ರೆಸ್​ನಲ್ಲಿ ಉಂಟಾದ ಅಸಮಾಧಾನಕ್ಕೆ ಇದೆ 3 ಕಾರಣ

    ಶಾಸಕ ತನ್ವೀರ್​​​​ ಸೇಠ್ ಪತ್ರದ ಹಿಂದಿನ ಉದ್ದೇಶವೇನು?

    ಅಸಮಾಧಾನದ ಬಿಸಿ ತಾಗಿಸುವ ಕಾನ್ಸೆಪ್ಟ್ ಯಾರದು?

ಅಧಿಕಾರಕ್ಕೆ ಬಂದು ಎರಡೇ ತಿಂಗಳ ಹೊತ್ತಲ್ಲಿ ಶಾಸಕರ ಅಸಮಾಧಾನ ಏಕೆ? ಕಾರಣ ಹುಡುಕದಿದ್ರೆ ಸರ್ಕಾರಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ.. ಪಕ್ಷದೊಳಗೆ ಬಂಡಾಯದ ಈ ಬೇಗುದಿಗೆ ಬಿಜೆಪಿ-ಜೆಡಿಎಸ್​ಗೆ ಲಿಂಕ್​​ ಕೊಟ್ಟು ಬಚಾವ್​ ಏನೋ ಆಗಬಹುದು. ಆದ್ರೆ, ಪಕ್ಷದಲ್ಲಿ ಅದಕ್ಕೆ ಮೂಲ ಪುರುಷರು ಇರಲೇಬೇಕು? ಹೀಗಾಗಿ ಆ ಮೂಲ ಹುಡುಕಾಟವನ್ನೂ ಸರ್ಕಾರ ಮತ್ತು ಪಕ್ಷ ಶೋಧಿಸ್ತಿದೆ.

ಪಿತೂರಿ.. ಷಡ್ಯಂತ್ರ.. ಕಾಂಗ್ರೆಸ್​​ನಲ್ಲಿ ಆಗ್ತಿರೋ ಬೆಳವಣಿಗೆ ಏನು? ದಿಢೀರ್​​ ಅಂತ ಲೆಟರ್​ ಬಾಂಬ್​​ ಸಿಡಿದಿದ್ಹೇಗೆ? ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದಿಲ್ಲ. ಆಗ್ಲೇ ಸರ್ಕಾರದ ಒಳಗೆ ಏನೋ ತಲ್ಲಣ, ಆತಂಕ. ಕಾಂಗ್ರೆಸ್ ಒಳಮನೆಯಲ್ಲಿ ಗುದ್ದಾಟ ನಡೀತಿದ್ಯಾ ಅನ್ನೋ ಸಂಶಯ. ಅಷ್ಟಕ್ಕೂ ಬೆಂಕಿಯಲ್ಲದೇ ಹೊಗೆ ಆಡಲು ಹೇಗೆ ಸಾಧ್ಯ? ಶಾಸಕರನ್ನ ವಿಶ್ವಾಸಕ್ಕೆ ತೆಗೊಳ್ಳೋ ಯತ್ನ ಏನೋ ನಡೆದಿದೆ.. ಆದ್ರೆ ಅದೊಂದು ಪ್ರಶ್ನೆ ಮಾತ್ರ ಹಸ್ತ ಪಡಸಾಲೆಯಲ್ಲಿ ಚಿಂತೆಯ ಹುಳು ಹೊಕ್ಕಿದೆ.

ಪಕ್ಷ, ಸರ್ಕಾರದ ಮಟ್ಟದಲ್ಲಿ ಪತ್ರ ತಂದ ಮುಜುಗರ

ರಾಜ್ಯ ರಾಜಕೀಯದಲ್ಲಿ ಏನೋ ಗುಸುಗುಸು? ಇದಕ್ಕೆ ಪೂರಕ ಎನ್ನುವಂತೆ ಸಿಟ್ಟು, ಸೆಡವುಗಳ ಸಮ್ಮಿಲನ.. ಡಿಕೆ ಶಿವಕುಮಾರ್ ಹೇಳಿದ ಆಪರೇಷನ್​ ಸರ್ಕಾರ ಎಂಬ ಮಾತಿನ ಪ್ರತಿಧ್ವನಿ. ಗುಪ್ತಗಾಮಿನಿ ರೀತಿ ಅಸಮಾಧಾನ ಮೊಳಕೆ ಒಡೆಯುತ್ತಿದ್ಯಾ ಅನುಮಾನಗಳ ಮೋಡ ಕಟ್ಟಿದೆ. ಆದ್ರೆ ಈ ಮೊಳಕೆಗೆ ನೀರು ಹಾಯ್ಸಿಸ್ತಿರೋದ್ಯಾರು? ಗೊಬ್ಬರ ಕಟ್ತಿರೋದ್ಯಾರು? ಇದೇ ಪ್ರಶ್ನೆಗಳು ಕಾಂಗ್ರೆಸ್​ನಲ್ಲಿ ಚಿಂತೆಗೆ ದೂಡಿವೆ.

ಲೋಕಸಭೆ ಎಲೆಕ್ಷನ್​​​ ಹೊಸ್ತಿಲಲ್ಲಿ ಶಾಸಕರು ಸಿಡಿಮಿಡಿ!

ಅಧಿಕಾರ ಗ್ರಹಣ ಮಾಡುತ್ತಲೇ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್​​​ ಜಾರಿ ಮಾಡಿದೆ. ಇದೇ ಗ್ಯಾರಂಟಿಗಳು ಲೋಕಸಭಾ ಚುನಾವಣೆಗೆ ಟ್ರಂಪ್​ ಕಾರ್ಡ್​​ ಆಗಲಿದೆ ಅಂತ ಬಯಸಿದ್ದ ಕೈಪಡೆಗೆ ಶಾಸಕರ ಸಿಟ್ಟು ಗರಬಡಿಸಿದೆ. ಶಾಸಕರ ಸಾಲು ಸಾಲು ಪತ್ರ ವ್ಯವಹಾರ ಸಿಎಂ ಸಿದ್ದರಾಮಯ್ಯಗೆ ಮುಜುಗರ ತಂದೊಡ್ಡಿದೆ. ನಿನ್ನೆಯ ಸಿಎಲ್​​ಪಿ ಸಭೆಯಲ್ಲೂ ಈ ಪತ್ರದ ಬಗ್ಗೆ ದೊಡ್ಡ ಚರ್ಚೆ ನಡೆದಿದೆ.

ಹಿರಿಯ ಶಾಸಕ ರಾಯರೆಡ್ಡಿ, ಬಿ.ಆರ್.ಪಾಟೀಲ್, ಶಿವಲಿಂಗೇಗೌಡ, ನರೇಂದ್ರಸ್ವಾಮಿ ಸೇರಿ 10ಕ್ಕೂ ಹೆಚ್ಚು ಶಾಸಕರ ಸಹಿವುಳ್ಳ ಪತ್ರ ಸಂಚಲನ ಸೃಷ್ಟಿಸಿತ್ತು. ಬಹಿರಂಗಗೊಂಡ ಪತ್ರದ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ಆಗಿದೆ. ಹರಿದಾಡಿದ ಪತ್ರ ನಕಲಿ ಅಂತ ಕಂಪ್ಲೇಂಟ್​​​ ಏನೋ ನೀಡಲಾಗಿದೆ. ಆದ್ರೆ, ಶಾಸಕರು ಪತ್ರ ಬರೆದಿದ್ದನ್ನ ಯಾರು ತಳ್ಳಿಹಾಕ್ತಿಲ್ಲ.. ಬದಲಾಗಿ ಪತ್ರ ಬರೆದು ಶಾಸಕಾಂಗ ಪಕ್ಷದ ಸಭೆಗೆ ಆಗ್ರಹ ಮಾಡಿದ್ರೆ ತಪ್ಪೇನು ಅನ್ನೋದು ಹಿರಿಯ ಶಾಸಕ ರಾಯರೆಡ್ಡಿ ಪ್ರಶ್ನೆ ಮಾಡಿದ್ದಾರೆ.

‘ಅಮಾಯಕರ’ ರಿಲೀಸ್​​ಗೆ ಶಾಸಕ ತನ್ವೀರ್​ ಸೇಠ್​ ಪತ್ರ!

ಕೆ.ಜಿ. ಹಳ್ಳಿ, ಡಿ.ಜೆ ಹಳ್ಳಿ ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಗಲಭೆ ಕಾರಣಕ್ಕೆ ಸುಳ್ಳು ಕೇಸ್ ದಾಖಲಾಗಿದೆ.. ಆದ್ರೆ, ಕೆಲ ಅಮಾಯಕರನ್ನ ಜೈಲಿಗೆ ತಳ್ಳಲಾಗಿದೆ ಅನ್ನೋದು ಶಾಸಕತನ್ವೀರ್ ಸೇಠ್ ವಾದ.. ಸೇಠ್ ಮೈಸೂರಿನರಾಗಿದ್ದು, ಕೆಜಿ ಹಳ್ಳಿ, ಡಿಜಿ ಹಳ್ಳಿ ಅಮಾಯಕರಿಗೆ ಏನು ಸಂಬಂಧ ಅನ್ನೋ ಚರ್ಚೆ ಹುಟ್ಟುಹಾಕಿದೆ.

ಅಮಾಯಕರು ಮತ್ತು ವಿದ್ಯಾರ್ಥಿಗಳು ಇದ್ದರೆ, ಅವರ ಭವಿಷ್ಯದ ದೃಷ್ಟಿಯಿಂದ ಮತ್ತೊಮ್ಮೆ ಪರಿಶೀಲಿಸಿ ಎಂದು ನಾನು ಕೇಳಿದ್ದೇನೆ. ಯಾವುದೇ ದಾವೆಯನ್ನು ಹಿಂಪಡೆಯುವಂತೆ ನಾನು ಕೇಳಿಲ್ಲ. ವಿನಃ ಕಾರಣ ಪತ್ರದ ಸಾರಾಂಶವನ್ನು ಬಿಜೆಪಿ ಓದಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ. -ತನ್ವೀರ್ ಸೇಠ್, ಶಾಸಕ

ಪತ್ರದಲ್ಲಿನ ಅಂಶಗಳನ್ನ ತಿರುಚಲಾಗಿದೆ ಎಂಬ ಅಭಿಪ್ರಾಯ ಕೈ ಶಾಸಕರಿಂದ ವ್ಯಕ್ತವಾದ್ರೂ, ಪತ್ರ ಬರೆದು ಅಸಮಾಧಾನ ಹೊರ ಹಾಕಿರೋದು ಸ್ಪಷ್ಟವಾಗಿದೆ. ಈ ಲೆಟರ್​ ಬಾಂಬ್​ಗಳು ರಾಜ್ಯ ರಾಜಕೀಯಕ್ಕೆ ಹೊಸದೇನಲ್ಲ. ಗೌಡರಿಂದ ಶುರುವಾದ ಈ ರಾಜಕೀಯ, ಹೆಚ್​ಡಿಕೆ ಸರ್ಕಾರದ ಸಮನ್ವಯ ಅಧ್ಯಕ್ಷರಾಗಿದ್ದ ಸಿದ್ದು ಕೂಡ ಇದನ್ನೇ ಅಸ್ತ್ರ ಆಗಿಸಿದ್ದರು. ಈಗ ಅದೇ ಸಿದ್ದು ಸರ್ಕಾರದಲ್ಲಿ ಪತ್ರಾಸ್ತ್ರವಾಗಿ ಪ್ರಯೋಗ ಆಗ್ತಿದೆ.

ಲೆಟರ್​ ಪಾಲಿಟಿಕ್ಸ್​​!

ಪ್ರಶ್ನೆ 1 : ಶಾಸಕ ತನ್ವೀರ್​​​​ ಸೇಠ್ ಪತ್ರದ ಹಿಂದಿನ ಉದ್ದೇಶವೇನು?
ಪ್ರಶ್ನೆ 2 : ಇತರರಿಗೂ ಪತ್ರ ಬರೆಯಲು ಪ್ರಚೋದನೆ ನೀಡಿದ್ರಾ?
ಪ್ರಶ್ನೆ 3 : ಅಸಮಾಧಾನದ ಬಿಸಿ ತಾಗಿಸುವ ಕಾನ್ಸೆಪ್ಟ್ ಯಾರದು?
ಪ್ರಶ್ನೆ 4 : ಅಸಮಾಧಾನಿತ ಶಾಸಕರ ಹಿಂದಿರುವ ವ್ಯಕ್ತಿ ಯಾರು?
ಪ್ರಶ್ನೆ 5 : ಶಾಸಕರ ಸಹಿ ಪಡೆಯವ ನೇತೃತ್ವ ವಹಿಸಿದ್ದು ಯಾರು?

ಸರ್ಕಾರ ಟೇಕ್ ಆಗ್ತಿರುವ ಸಂದರ್ಭದಲ್ಲಿ ಸ್ವಪಕ್ಷೀಯ ಶಾಸಕರ ಪತ್ರ ಸಾಕಷ್ಟು ಇರಿಸು-ಮುರಿಸು ಉಂಟು ಮಾಡಿದೆ. ಶಾಸಕರ ಪತ್ರ ವ್ಯವಹಾರದ ಹಿಂದಿನ ಉದ್ದೇಶ ಅರಿಯುವ ಕೆಲಸ ಏನೋ ಆಗಿದೆ. ಅಷ್ಟಕ್ಕೂ ಅಸಮಾಧಾನದ ಮೂಲ ಯಾವುದು ಅನ್ನೋದು ಬಹಿರಂಗ ರಹಸ್ಯ.

ಮೂರು ಮೂಲ ಸಮಸ್ಯೆ
ಕಾರಣ 1 : ಸಚಿವ ಸ್ಥಾನ ಸಿಗದಿದ್ದಕ್ಕೆ ಹಿರಿಯರ ಬೇಸರ
ಕಾರಣ 2 : ನಿರೀಕ್ಷೆಯಷ್ಟು ಸರ್ಕಾರದ ಅನುದಾನ ಸಿಗ್ತಿಲ್ಲ
ಕಾರಣ 3 : ಕ್ಷೇತ್ರದಲ್ಲಿ ಹೇಳಿದಂಗೆ ವರ್ಗಾವಣೆ ಮಾಡ್ತಿಲ್ಲ

ಅನುಮಾನಗಳು ಏನೇ ಇರಲಿ.. ಈ ಉದ್ದೇಶಗಳೂ ಮೀರಿ ಶಾಸಕರ ನಿರೀಕ್ಷೆ ಬೇರೆ ಏನಾದರೂ ಇದ್ಯಾ ಎಂಬುವುದರ ಬಗ್ಗೆ ನಾಯಕರು ಹುಡುಕಾಟ ನಡೆಸಿದ್ದಾರೆ. ಒಟ್ಟಾರೆ, ಸಿದ್ದರಾಮಯ್ಯ ಸರ್ಕಾರಕ್ಕೆ ಹೊಸ ಆತಂಕವಂತೂ ಸೃಷ್ಟಿಯಾಗಿರೋದು ಸುಳ್ಳಲ್ಲ.

ವಿಶೇಷ ವರದಿ: ಶಿವಪ್ರಸಾದ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರ, ಪಕ್ಷದ ಮಟ್ಟದಲ್ಲಿ ಪತ್ರ ತಂದ ಮುಜುಗರ.. ಇದರ ಹಿಂದಿನ ಮೂಲ ಪುರುಷನ ಹುಡುಕಾಟಕ್ಕಿಳಿದ ಕಾಂಗ್ರೆಸ್..!

https://newsfirstlive.com/wp-content/uploads/2023/07/Siddu_DKS-1.jpg

Load More