/newsfirstlive-kannada/media/post_attachments/wp-content/uploads/2025/04/India-pak-shimla-agreement.jpg)
ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ಶಿಮ್ಲಾ ಒಪ್ಪಂದ ಸಸ್ಪೆಂಡ್‌ಗೆ ನಿರ್ಧಾರ ಮಾಡಿದೆ.
ಭಾರತ-ಪಾಕಿಸ್ತಾನದ ಶಿಮ್ಲಾ ಒಪ್ಪಂದ ಅಮಾನತು ಆಗಿರೋದ್ರಿಂದ ಈಗ ಗಡಿ ನಿಯಂತ್ರಣ ರೇಖೆಗೆ 2 ದೇಶಗಳು ಗೌರವ ನೀಡಬೇಕಾಗಿಲ್ಲ. ಹೀಗಾಗಿ ಭಾರತ ಈಗ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರುವಶಕ್ಕೆ ತೆಗೆದುಕೊಳ್ಳುವ ಅವಕಾಶವಿದೆ.
ಶಿಮ್ಲಾ ಒಪ್ಪಂದ ಸಸ್ಪೆಂಡ್ ಎಂದ ಕೂಡಲೇ ಪಾಕ್ ಸೇನೆ ಗಡಿಯಲ್ಲಿ ಗುಂಡಿನ ದಾಳಿ ನಡೆಸುತ್ತಿದೆ. ಹೀಗಾಗಿ ಭಾರತದ ಸೇನೆಯಿಂದಲೂ ಪಾಕ್ ಸೇನೆಯ ವಿರುದ್ಧ ಪ್ರತಿ ದಾಳಿ ನಡೆಸುತ್ತಿದೆ.
ಶಿಮ್ಲಾ ಒಪ್ಪಂದದಲ್ಲಿ ಪ್ರಮುಖವಾಗಿ 2 ದೇಶಗಳು ಪರಸ್ಪರರ ರಾಷ್ಟ್ರೀಯ ಐಕ್ಯತೆ, ಭೌಗೋಳಿಕ ಐಕ್ಯತೆ, ರಾಜಕೀಯ ಸ್ವಾತಂತ್ರ್ಯ, ಸಾರ್ವಭೌಮತೆ ಗೌರವಿಸಬೇಕು. ಎರಡು ದೇಶಗಳ ಮಾತುಕತೆಯ ಮೂಲಕ ಯಾವುದೇ ವಿವಾದವನ್ನಾದರೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎನ್ನಲಾಗಿತ್ತು.
ಇದನ್ನೂ ಓದಿ: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ತಾತ್ಕಾಲಿಕ ಅಮಾನತು; ಹನಿ ಹನಿ ನೀರಿಗೂ ಪರದಾಡಲಿದೆ ಪಾಕ್..!
2 ದೇಶಗಳಿಗೂ ಒಪ್ಪಿಗೆಯಾಗುವ ವಿಧಾನದ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕು. ಯಾವುದೇ ಒಂದು ದೇಶವು ಏಕಪಕ್ಷೀಯವಾಗಿ ಪರಿಸ್ಥಿತಿಯನ್ನು ಹಾಳುಗೆಡವಬಾರದು ಅನ್ನೋದು ಶಿಮ್ಲಾ ಒಪ್ಪಂದದ ಪ್ರಮುಖ ಅಂಶಗಳಾಗಿತ್ತು.
ಆದರೆ ಈಗ ಈ ಒಪ್ಪಂದವನ್ನು ಪಾಕಿಸ್ತಾನವೇ ಅಮಾನತು ಮಾಡಿದೆ. ಹೀಗಾಗಿ ಸದ್ಯ 2 ದೇಶಗಳು ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ದಾಳಿ ಮಾಡುವುದು ಹೆಚ್ಚಾಗಲಿದೆ. ಗಡಿಯಲ್ಲಿ ಇನ್ನೂ ಮುಂದೆ ಕದನ ವಿರಾಮದ ಬದಲು ಉದ್ವಿಗ್ನ ವಾತಾವರಣ ಇರಲಿದೆ. ಭಾರತ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರುವಶಕ್ಕೆ ತೆಗೆದುಕೊಳ್ಳುವ ಸುಸಮಯ ಇದೇ ಎನ್ನಲಾಗಿದೆ.
ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಪ್ರಾಣ ಪಣಕ್ಕಿಟ್ಟು ಮಗು ರಕ್ಷಿಸಿದ ಟೂರಿಸ್ಟ್ ಗೈಡ್.. ಇದು ಮನಮಿಡಿಯುವ ಸ್ಟೋರಿ!
ಏನಿದು ಶಿಮ್ಲಾ ಒಪ್ಪಂದ?
1972ರಲ್ಲಿ ಭಾರತದ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ ಹಾಗೂ ಪಾಕ್ ಅಧ್ಯಕ್ಷ ಜುಲ್ಪಿಕರ್ ಅಲಿ ಭುಟ್ಟೋ ನಡುವೆ ಶಿಮ್ಲಾ ಒಪ್ಪಂದ ಆಗಿತ್ತು.
ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು ಅನ್ನೋ ಶಿಮ್ಲಾ ಒಪ್ಪಂದದಲ್ಲಿ ಉಲ್ಲೇಖ ಆಗಿದೆ. ಭಾರತದ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 2 ದೇಶಗಳ ನಾಯಕರಿಂದ ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಈಗ ಈ ಶಿಮ್ಲಾ ಒಪ್ಪಂದವನ್ನ ಪಾಕಿಸ್ತಾನವೇ ಅಮಾನತು ಮಾಡಿ ಯಡವಟ್ಟು ಮಾಡಿಕೊಂಡಿದೆ. ಪಾಕಿಸ್ತಾನದ ಈ ನಿರ್ಧಾರದಿಂದ ಗಡಿಯಲ್ಲಿ ಇನ್ನು ಮುಂದೆ ಉದ್ವಿಗ್ನ ವಾತಾವರಣ ನಿರ್ಮಾಣ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ