/newsfirstlive-kannada/media/post_attachments/wp-content/uploads/2023/11/Yadgiri-Accident.jpg)
ಯಾದಗಿರಿ: ಲಾರಿಯ ಹಿಂಬದಿಗೆ ಟಾಟಾ ಎಸಿ ವಾಹನ ಗುದ್ದಿರುವ ಭೀಕರ ಅಪಘಾತ ಯಾದಗಿರಿ ತಾಲೂಕಿನ ಆರ್. ಹೊಸಳ್ಳಿ ಬಳಿ ನಡೆದಿದೆ. ಗುದ್ದಿದ ರಭಸಕ್ಕೆ ಟಾಟಾ ಎಸಿ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಭೀಕರ ಅಪಘಾತದಲ್ಲಿ ಮನ್ನು ಚವ್ಹಾಣ್ (35), ಹಣಮಂತ (30) ಮೃತ ದುರ್ದೈವಿಗಳು. ಅಪಘಾತದಲ್ಲಿ ಸಾವಿಗೀಡಾದ ಇಬ್ಬರು ಮುದ್ನಾಳ್ ತಾಂಡಾದ ನಿವಾಸಿಗಳಾಗಿದ್ದಾರೆ.
ಲಾರಿಗೆ ಗುದ್ದಿದ ರಭಸಕ್ಕೆ ಟಾಟಾ ಎಸಿ ವಾಹನ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us