/newsfirstlive-kannada/media/post_attachments/wp-content/uploads/2024/12/Vijayapura-Accident-1.jpg)
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೆಬಾವಿ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಕಬ್ಬು ಕಟಾವು ಮಷೀನ್ ಹಾಗೂ ಕಾರಿನ ಮಧ್ಯೆ ಈ ದುರಂತ ಸಂಭವಿಸಿದೆ.
ತೊಗರಿ ಕಟಾವು ಮಷೀನ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದಾರೆ. ಆಕ್ಸಿಡೆಂಟ್ ಆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರಿನಲ್ಲಿ ಮೃತರಾದ ಐವರು ಅಸ್ಕಿ ಗ್ರಾಮಕ್ಕೆ ಕನ್ಯ ನೋಡಲು ಹೋಗಿದ್ದರು ಎಂದು ತಿಳಿದು ಬಂದಿದೆ. ಕನ್ಯೆ ನೋಡಿಕೊಂಡು ವಾಪಸ್ ಬರುವಾಗ ಈ ದುರಂತ ಸಂಭವಿಸಿದೆ. ಮೃತರನ್ನು ನಿಂಗಪ್ಪ ಪಾಟೀಲ್ (55) ಶಾಂತಪ್ಪ ಪಾಟೀಲ್(45), ಭೀಮಶಿ ಸಂಕನಾಳ(65) ಶಶಿಕಲಾ(50) ದಿಲೀಪ್ ಪಾಟೀಲ್ (45) ಎಂದು ಗುರುತಿಸಲಾಗಿದೆ.
/newsfirstlive-kannada/media/post_attachments/wp-content/uploads/2024/12/Vijayapura-Accident.jpg)
ಕಾರು ಹುಣಸಗಿಯಿಂದ ತಾಳಿಕೋಟೆಗೆ ಹೋಗುತ್ತಿದ್ದಾಗ ಬಿಳೆಬಾವಿ ಕ್ರಾಸ್ ಬಳಿ ಅಪಘಾತಕ್ಕಿಡಾಗಿದೆ. ತಾಳಿಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us