ನೈಸ್ ರಸ್ತೆಯಲ್ಲಿ ಭೀಕರ ಅಪಘಾತ.. ಕಾರು, ಲಾರಿ, ಬಸ್‌ ಮಧ್ಯೆ ಭಯಾನಕ ಡಿಕ್ಕಿ; ಘೋರ ದುರಂತ!

author-image
admin
Updated On
ನೈಸ್ ರಸ್ತೆಯಲ್ಲಿ ಭೀಕರ ಅಪಘಾತ.. ಓರ್ವ ಸ್ಥಳದಲ್ಲೇ ಸಾವು; ಹಲವರ ಸ್ಥಿತಿ ಗಂಭೀರ
Advertisment
  • ಸಿಲಿಕಾನ್ ಸಿಟಿ ನೈಸ್ ರೋಡ್ ಟೋಲ್ ಬಳಿ ಭೀಕರ ಅಪಘಾತ
  • ಕಾರು ಹಿಂದಿನಿಂದ ಬಂದು ಬಸ್‌ಗೆ ಗುದ್ದಿದ್ದು, ಬಸ್‌ ಲಾರಿಗೆ ಡಿಕ್ಕಿ
  • ಅಪಘಾತದಲ್ಲಿ ಲಾರಿ, ಬಸ್ ಹಾಗೂ ಕಾರು ಸಂಪೂರ್ಣ ಜಖಂ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೈಸ್ ರೋಡ್ ಟೋಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು, ಲಾರಿ, ಖಾಸಗಿ ಕಂಪನಿಯ ಬಸ್ ಮಧ್ಯೆ ದುರಂತ ನಡೆದಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಬಸ್‌ನಲ್ಲಿದ್ದ ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ.

ಇದನ್ನೂ ಓದಿ: ರೈಲ್ವೆ ಬ್ರಿಡ್ಜ್​ ಮೇಲೆ ಫೋಟೋಶೂಟ್.. ಸಡನ್ ಆಗಿ ಬಂದ ರೈಲು.. 90 ಅಡಿ ಆಳಕ್ಕೆ ಬಿದ್ದ ದಂಪತಿ; ಮುಂದೇನಾಯ್ತು? 

ನೈಸ್ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಹಿಂದಿನಿಂದ ಬಂದು ಬಸ್‌ಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಸ್ಕೈಲೈನ್‌ ಬಸ್‌ನಲ್ಲಿದ್ದವರಿಗೆ ಮುಂದಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

publive-image

ನಿಂತಿದ್ದ ಲಾರಿಗೆ, ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾನೆ. ಕುಣಿಗಲ್ ಮೂಲದ ದೇವರಾಜ್ ಮೃತ ದುರ್ದೈವಿ. 42 ವರ್ಷದ ದೇವರಾಜ್ ಎಲಿನ್ಸ್ ಅನ್ನೋ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ. ಮೃತ ದೇವರಾಜ್ ಶವ ಮರಣೋತ್ತರ ಪರೀಕ್ಷೆಗೆ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ:ಮಹಾನಟಿ ವಿನ್ನರ್​ ಪ್ರಿಯಾಂಕ ಆಚಾರ್​​ಗೆ ಅಭಿಮಾನಿಗಳಿಂದ ಸ್ಪೆಷಲ್ ವಿಶ್​​; ಏನದು? 

ನೈಸ್ ರೋಡ್ ಟೋಲ್ ಬಳಿ ಸಂಭವಿಸಿದ ಅಪಘಾತದಲ್ಲಿ ಲಾರಿ, ಬಸ್ ಹಾಗೂ ಕಾರು ಸಂಪೂರ್ಣ ಜಖಂ ಆಗಿದೆ. ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್‌ನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿದೆ. ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment