VIDEO: ಭೀಕರ ಅಪಘಾತ.. ಪಾದಚಾರಿಗೆ ಗುದ್ದಿ 3 ಪಲ್ಟಿ ಹೊಡೆದ ಕಾರು; ಹಾರಿ ಬಿದ್ದ ಮಹಿಳೆ!

author-image
admin
Updated On
VIDEO: ಭೀಕರ ಅಪಘಾತ.. ಪಾದಚಾರಿಗೆ ಗುದ್ದಿ 3 ಪಲ್ಟಿ ಹೊಡೆದ ಕಾರು; ಹಾರಿ ಬಿದ್ದ ಮಹಿಳೆ!
Advertisment
  • ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಭಯಾನಕ ಡಿಕ್ಕಿ
  • ಅತಿಯಾದ ವೇಗ ರಾಂಗ್ ರೂಟ್‌ನಲ್ಲಿ ಬಂದು ಗುದ್ದಿದ ಕಾರು
  • ಗುದ್ದಿದ ರಭಸಕ್ಕೆ ಪಾದಚಾರಿ ಮಹಿಳೆ ಹಾರಿ ಕೆಳಗೆ ಬಿದ್ದಿದ್ದಾರೆ

ಹೈದರಾಬಾದ್: ರಸ್ತೆ ಅಪಘಾತಗಳು ಯಾವಾಗ? ಹೇಗೆ ಸಂಭವಿಸುತ್ತವೆ ಅನ್ನೋದನ್ನ ಊಹಿಸಿಕೊಳ್ಳೋದು ಅಸಾಧ್ಯ. ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಬಲಿ ಆಗೋದು ನಿಜಕ್ಕೂ ದುರಂತ. ತೆಲಂಗಾಣದ ನಾಗರ್‌ ಕರ್ನೂಲ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ.

ನಾಗರ್‌ ಕರ್ನೂಲ್‌ನಿಂದ ಕೊಲ್ಲಾಪುರಕ್ಕೆ ಹೋಗುತ್ತಿದ್ದ ಕಾರು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ಪಾದಚಾರಿ ಮಹಿಳೆ ಮೇಲೆ ಹಾರಿ ಕೆಳಗೆ ಬಿದ್ದಿದ್ದಾರೆ.

ಇದನ್ನೂ ಓದಿ: BREAKING: ಪ್ರಯಾಣಿಕರಿಗೆ ಬಿಗ್‌ ಶಾಕಿಂಗ್ ನ್ಯೂಸ್.. ಬಸ್ ಪ್ರಯಾಣ ದರ ಏರಿಕೆ; ಎಷ್ಟು ಹೆಚ್ಚಳ? 

ಮಹಿಳೆಗೆ ಗುದ್ದಿದ ಕಾರು ಹಾಗೆ ಗಿರಗಿಟ್ಲೆ ಹೊಡೆಯೋ ರೀತಿ 3 ಬಾರಿ ಪಲ್ಟಿ ಹೊಡೆದಿದೆ. ಕೊನೆಗೆ ಒಂದು ಗೋಡೆಗೆ ಡಿಕ್ಕಿಯಾಗಿದೆ. ಈ ಭೀಕರ ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.


">January 2, 2025

ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆಗೆ ರಾಂಗ್ ರೂಟ್‌ನಲ್ಲಿ ಬಂದ ಕಾರು ಗುದ್ದಿದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ವೇಗವಾಗಿ ಕಾರು ಗುದ್ದಿದ ರಭಸಕ್ಕೆ ಮಹಿಳೆ ಹಾರಿ ಬಿದ್ದಿದ್ದಾರೆ. ಅತಿಯಾದ ವೇಗದಲ್ಲಿ ಬಂದಿದ್ದರಿಂದ ಕಾರು ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment