newsfirstkannada.com

ಉಗ್ರರ ಡ್ರೋನ್ ದಾಳಿಗೆ ಯೋಧರ ಸಾವು; ಇರಾನ್ ಮೇಲೆ ಯುದ್ಧ ಸಾರುತ್ತಾ ಅಮೆರಿಕಾ?

Share :

Published January 29, 2024 at 12:16pm

Update January 29, 2024 at 12:17pm

    ಜೋರ್ಡಾನ್‌ ಗಡಿಯಲ್ಲಿ ಇರಾನ್ ಉಗ್ರರಿಂದ ಡ್ರೋನ್ ದಾಳಿ

    ಮೂವರು ಅಮೆರಿಕಾ ಯೋಧರ ಸಾವು, 25ಕ್ಕೂ ಹೆಚ್ಚು ಮಂದಿಗೆ ಗಾಯ

    ಗಾಜಾಪಟ್ಟಿಯ ಮೇಲೆ ಇಸ್ರೇಲ್ ಯುದ್ಧ ಸಾರಿದ ಮೇಲೆ ಮೊದಲ ಅಟ್ಯಾಕ್

ಇಸ್ರೇಲ್‌, ಹಮಾಸ್ ಉಗ್ರರ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕಾ ಸೇನೆಯ ಮೇಲೆ ಭಯಾನಕ ದಾಳಿ ನಡೆದಿದೆ. ಸಿರಿಯಾ ಗಡಿಯಲ್ಲಿರುವ ಜೋರ್ಡಾನ್‌ ಪ್ರಾಂತ್ಯದಲ್ಲಿ ಡ್ರೋನ್ ದಾಳಿ ಮಾಡಲಾಗಿದ್ದು ಮೂವರು ಅಮೆರಿಕಾ ಯೋಧರು ಸಾವನ್ನಪ್ಪಿದ್ದಾರೆ. 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಜೋರ್ಡಾನ್‌ನಲ್ಲಿ ಮೂವರು ಯೋಧರನ್ನು ಉಗ್ರರು ಬಲಿ ಪಡೆದಿರುವುದಕ್ಕೆ ಅಮೆರಿಕಾ ಕೆರಳಿ ಕೆಂಡವಾಗಿದೆ. ರಾತ್ರೋರಾತ್ರಿ ಭಯಾತ್ಪಾದಕರ ಈ ಕೃತ್ಯವನ್ನು ಅಮೆರಿಕಾ ಉಗ್ರವಾಗಿ ಖಂಡಿಸಿದ್ದು, ಸೇಡು ತೀರಿಸಿಕೊಳ್ಳುವ ಸಾಧ್ಯತೆ ಇದೆ. 2023ರ ಅಕ್ಟೋಬರ್‌ನಲ್ಲಿ ಗಾಜಾಪಟ್ಟಿಯ ಮೇಲೆ ಇಸ್ರೇಲ್ ಯುದ್ಧ ಸಾರಿದ ಮೇಲೆ ಅಮೆರಿಕಾ ಸೈನಿಕರ ಮೇಲೆ ನಡೆದಿರೋ ಮೊಟ್ಟ ಮೊದಲ ದಾಳಿ ಇದಾಗಿದ್ದು, ಅಮೆರಿಕಾದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಭಯೋತ್ಪಾದಕ ದಾಳಿಯ ಬಳಿಕ ಜೋರ್ಡಾನ್‌ ಗಡಿಗೆ ಅಮೆರಿಕಾದ ಹೆಚ್ಚುವರಿ ಸೇನೆಯನ್ನು ರವಾನೆ ಮಾಡಲಾಗಿದೆ. ಗಡಿಭಾಗದ ಪ್ರತಿಯೊಂದು ವಾಹನಗಳ ಮೇಲೆ ಕಣ್ಣಿಟ್ಟಿದ್ದು ಉಗ್ರರ ಸಣ್ಣ ಸುಳಿವು ಸಿಕ್ಕರೂ ಬಗ್ಗು ಬಡಿಯೋ ಸಾಧ್ಯತೆ ಇದೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ಕಠಿಣ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಅಮೆರಿಕಾ- ಇರಾನ್ ಯುದ್ಧ ನಡೆಯುತ್ತಾ? 
ಜೋರ್ಡಾನ್‌ನಲ್ಲಿ ಸಾವನ್ನಪ್ಪಿರೋ ಮೂವರು ಯೋಧರ ಬಲಿದಾನಕ್ಕೆ ಅಮೆರಿಕಾ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಯಾಕಂದ್ರೆ, ಸೈನಿಕರನ್ನು ಉಗ್ರರು ಸಾಯಿಸಿರೋದು ಅಮೆರಿಕಾದಂತಹ ಬಲಿಷ್ಠ ದೇಶಕ್ಕೆ ಸಾಮಾನ್ಯವಾದ ವಿಚಾರವಲ್ಲ. ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಎದುರಾಗುತ್ತಿರೋ ಈ ಸಂದರ್ಭದಲ್ಲಿ ಇದು ರಾಜಕೀಯದ ಅಸ್ತ್ರವಾಗಿದೆ. ರಿಪಬ್ಲಿಕನ್ ಅಭ್ಯರ್ಥಿ ನಿಕ್ಕಿ ಹ್ಯಾಲಿ ಅವರು ಈ ಘಟನೆಯನ್ನು ಖಂಡಿಸಿದ್ದು, ಇದೊಂದು ಶೇಮ್‌ಫುಲ್ ಘಟನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಗ್ರರ ಡ್ರೋನ್ ದಾಳಿಗೆ ಯೋಧರ ಸಾವು; ಇರಾನ್ ಮೇಲೆ ಯುದ್ಧ ಸಾರುತ್ತಾ ಅಮೆರಿಕಾ?

https://newsfirstlive.com/wp-content/uploads/2024/01/US-ARMY-Attack.jpg

Load More