newsfirstkannada.com

ಕೀನ್ಯಾದಲ್ಲಿ ಭೀಕರ ಬಾಂಬ್​​ ಸ್ಫೋಟ, 3 ಸಾವು.. 300 ಮಂದಿ ಗಂಭೀರ

Share :

Published February 3, 2024 at 6:21am

Update February 3, 2024 at 6:22am

    ಬೆಂಕಿ ನಂದಿಸಲು ಹರಸಾಹಸಪಟ್ಟ ಅಗ್ನಿಶಾಮಕ ಸಿಬ್ಬಂದಿ

    ಸ್ಫೋಟದ ತೀವ್ರತೆಯಿಂದಾಗಿ ಬೃಹತ್​​​​​ ಕಟ್ಟಡಗಳಲ್ಲಿ ಬಿರುಕು

    ಭೀಕರ ಸ್ಫೋಟದಿಂದ ಇತರೆ ವಾಹನಗಳು ಸುಟ್ಟು ಭಸ್ಮ

ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಬೆಳಗಿನ ಜಾವ ಭೀಕರ ಅಗ್ನಿ ಅವಘಡ ಸಂಭವಿಸಿ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ. ಭಯಂಕರವಾಗಿ ಅಪ್ಪಳಿಸಿದ ಸದ್ದು ಜನರ ಎದೆ ನಡುಗುವಂತೆ ಮಾಡಿದೆ. ಕಟ್ಟಡ ಮತ್ತು ವಾಹನಗಳು ಸುಟ್ಟು ಕರಕಲಾಗಿದ್ದು, ಭೀಕರ ಘಟನೆಯಲ್ಲಿ 3 ಮಂದಿ ಸಾವನ್ನಪ್ಪಿ 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಭೀಕರ ಅಗ್ನಿ ದುರಂತವೊಂದು ಸಂಭವಿಸಿದೆ. ನೈರೋಬಿಯ ಎಂಬಾಕಸಿ ಎಂಬ ನಗರದಲ್ಲಿರುವ ಜನವಸತಿ ಪ್ರದೇಶದಲ್ಲಿದ್ದ ಗ್ಯಾಸ್​​​ ಫಿಲ್ಲಿಂಗ್​​​​ ಸ್ಟೇಷನ್​​ನಲ್ಲಿ ಗ್ಯಾಸ್​​​ ತುಂಬಿದ್ದ ಟ್ರಕ್​​ವೊಂದು ಸ್ಫೋಟಗೊಂಡಿದೆ. ಟ್ರಕ್​​ ಬ್ಲಾಸ್ಟ್​​​​ನ ಪರಿಣಾಮ ಇಡೀ ಎಂಬಾಕಸಿ ನಗರವೇ ಗಢಗಢ ನಡುಗಿದೆ.

ಅಕ್ಕಪಕ್ಕದಲ್ಲಿದ್ದ ಕಟ್ಟಡಗಳಲ್ಲೂ ಅಗ್ನಿ ನರ್ತನ!

ಭೀಕರ ಬ್ಲಾಸ್ಟ್​​​​ನಿಂದಾಗಿ ಸ್ಥಳದಲ್ಲಿದ್ದ ಮೂವರು ಜೀವ ಚೆಲ್ಲಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂಬ ಮಾಹಿತಿ ಲಭ್ಯವಾಗಿದ್ದು, ಸುಮಾರು 300ಕ್ಕೂ ಹೆಚ್ಚು ಮಂದಿ ಭೀಕರವಾಗಿ ಗಾಯಗೊಂಡಿದ್ದಾರೆ. ಜೊತಗೆ ಸ್ಫೋಟದಿಂದಾಗಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಕ್ಕಪಕ್ಕದಲ್ಲಿದ್ದ ಇದ್ದ ಸಣ್ಣ ಅಂಗಡಿ, ಮಳಿಗೆಗಳು ಸೇರಿದಂತೆ ಜನರು ವಾಸಿಸುತ್ತಿದ್ದ ಕಟ್ಟಡಗಳಿಗೂ ಬೆಂಕಿ ಆವರಿಸಿಕೊಂಡಿದ್ದು, ಸ್ಫೋಟದ ತೀವ್ರತೆಯಿಂದಾಗಿ ಬೃಹತ್​​​​​ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ!

ಭೀಕರ ಸ್ಫೋಟದಿಂದ ಹತ್ತಿರದಲ್ಲಿ ಪಾರ್ಕ್​ ಮಾಡಿದ್ದ ಇತರೆ ವಾಹನಗಳಿಗು ಬೆಂಕಿ ತಗುಲಿದೆ. ಘಟನೆಯ ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಸುಮಾರು 15ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಸತತ 3 ಗಂಟೆ ಕಾರ್ಯಚರಣೆ ಬಳಿಕ ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿದ್ದಾರೆ.

ಇನ್ನೂ, ಘಟನೆಯಿಂದಾಗಿ ಅಕ್ಕಪಕ್ಕ ಕಟ್ಟಡಗಳಲ್ಲಿ ವಾಸಿಸುತ್ತಿದ್ದ ಜನರು ಸುಟ್ಟ ಗಾಯಗಳಿಂದ ನರಳುತ್ತಿದ್ದು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ತಿಳಿದು ಬಂದಿದ್ದು, ಗ್ಯಾಸ್​​​ ಫಿಲ್ಲಿಂಗ್​ ಸ್ಟೇಷನ್​​ನ ಬೇಜವಬ್ದಾರಿಯೇ ಈ ಘಟನೆಗೆ ಕಾರಣ ಎನ್ನಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೀನ್ಯಾದಲ್ಲಿ ಭೀಕರ ಬಾಂಬ್​​ ಸ್ಫೋಟ, 3 ಸಾವು.. 300 ಮಂದಿ ಗಂಭೀರ

https://newsfirstlive.com/wp-content/uploads/2024/02/kinya-1.jpg

Load More