/newsfirstlive-kannada/media/post_attachments/wp-content/uploads/2025/02/Devanahalli-Car-Accident-2.jpg)
ಗೂಗಲ್ ಮ್ಯಾಪ್.. ಗೊತ್ತಿಲ್ದೇ ಇರೋ ದಾರಿನಾ ಗೊತ್ತು ಮಾಡೋ ಒಂದು ಡಿಜಿಟಲ್ ಆ್ಯಪ್. ಆದರೆ ಅತಿಯಾದ್ರೆ ಅಮೃತವೂ ವಿಷ ಅನ್ನೋ ಹಂಗೆ ಇದೇ ಗೂಗಲ್ ಮ್ಯಾಪ್ ಇದೀಗ ಜೀವಕ್ಕೆ ಕುತ್ತು ತಂದಿದೆ. ದೇಗುಲಕ್ಕೆ ಹೊರಟಿದ್ದ ಆ ಇಬ್ಬರು ವೈದ್ಯರು, ದೇವರ ದರ್ಶನ ಮಾಡೋ ಮುನ್ನವೇ ಓರ್ವ ಮಸಣಕ್ಕೆ ಸೇರಿದ್ರೆ, ಮತ್ತೊಬ್ಬರು ಆಸ್ಪತ್ರೆ ಪಾಲಾಗಿದ್ದಾರೆ.
ಅಪಘಾತ.. ನೋಡ ನೋಡ್ತಿದ್ದಂತೆ ನಡೆದ ಅಪಘಾತ. ನಜ್ಜುಗುಜ್ಜಾಗಿರುವ ಕಾರು. ಕಾರಲ್ಲೇ ಪ್ರಯಾಣಿಕರು ಅಸ್ವಸ್ಥ. ಈ ದೃಶ್ಯಗಳನ್ನ ನೋಡಿದ್ರೆ ಖಂಡಿತ ಇಲ್ಲೇನೋ ಆಗಬಾರದ ಘಟನೆ ನಡೆದೋಗಿದೆ ಅನ್ನೋದು ಸ್ವಷ್ಟ. ಈ ಎಲ್ಲಾ ಭಯಾನಕ ದೃಶ್ಯಗಳಿಗೆ ಸಾಕ್ಷಿಯಾಗಿರೋದು ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 648.
‘ಗೂಗಲ್’ ಮ್ಯಾಪ್ ನೋಡ್ಕೊಂಡು ಕಾರ್ ಡ್ರೈವ್.. ಟ್ರಕ್ಗೆ ಡಿಕ್ಕಿ!
ಓರ್ವ ಸ್ಥಳದಲ್ಲೇ ಸಾವು.. ಮತ್ತಿಬ್ಬರು ಪ್ರಯಾಣಿಕರು ಜಸ್ಟ್ ಮಿಸ್!
ಕಳೆದ ಫೆಬ್ರವರಿ 6 ಬೆಳಗ್ಗೆ 10 ಗಂಟೆ. ಈ ಅಪಘಾತಕ್ಕೆ ಕಾರಣವಾಗಿದ್ದು ಗೂಗಲ್ ಮ್ಯಾಪ್. ಆಂಧ್ರ ಮೂಲದ ಇಬ್ಬರು ವೈದ್ಯರು ದೇವರ ದರ್ಶನಕ್ಕೆ ಅಂತ ಎಸ್ಯುವಿ ಕಾರ್ನಲ್ಲಿ ಹೊರಟಿದ್ರು. ಆದ್ರೆ, ದೇವರ ದರ್ಶನ ಮಾಡೋ ಮುನ್ನವೇ ಚಾಲಕ ಮಾಡಿದ ಯಡವಟ್ಟಿಗೆ ಓರ್ವ ಮಸಣ ಸೇರಿದ್ರೆ, ಮತ್ತೋರ್ವ ಆಸ್ಪತ್ರೆ ಪಾಲಾಗಿದ್ದಾರೆ.
‘ಮ್ಯಾಪ್’ ತಂದ ಸಾವು!
ಹೈದರಾಬಾದ್ ಮೂಲದ ಅಮರ್ ಪ್ರಸಾದ್, ವೇಣು ಹಾಗೂ ಪ್ರವಳಿಕಾ ಈ ಮೂವರು ಸ್ನೇಹಿತರು ತಮಿಳುನಾಡಿನ ಪಳನಿಯ ದೇವಸ್ಥಾನಕ್ಕೆ ಹೋಗಲು ಮುಂಜಾನೆ 2 ಗಂಟೆಗೆ ಹೊರಟಿದ್ದಾರೆ. ದೇವನಹಳ್ಳಿ ಮೂಲಕ ಹೊಸಕೋಟೆಗೆ ಬರ್ತಿದ್ದ ಕಾರು, ಕೋಲಾರದ ಹೆದ್ದಾರಿ ಕಡೆ ಯೂಟರ್ನ್ ಪಡೆಯಲು ಚಾಲಕ ಮುಂದಾಗಿದ್ದಾನೆ. ಹೀಗಾಗಿ, ಮೊಬೈಲ್ನಲ್ಲಿ ಗೂಗಲ್ ಮ್ಯಾಪ್ ಹಾಕ್ಕೊಂಡು ಕಾರ್ ಡ್ರೈವ್ ಮಾಡಿದ್ದಾನೆ. ಈ ವೇಳೆ ವೇಗವಾಗಿ ಬಂದ ಕಾರು ನೋಡ ನೋಡ್ತಿದ್ದಂತೆ ರಸ್ತೆ ಬದಿ ನಿಂತಿದ್ದ ಟ್ರಕ್ಗೆ ಡಿಕ್ಕಿಯಾಗಿ ಮೂರು ರೌಂಡ್ ಸುತ್ತಿದೆ.
ಆಗಷ್ಟೇ ಟ್ರಕ್ನ ಚಾಲಕ ರಸ್ತೆಯಲ್ಲಿ ನಿಲ್ಲಿಸಿ, ತಿಂಡಿ ತಿನ್ನಲು ಹೋಗಿದ್ರು. ಆ ವೇಳೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಹಿಂಬದಿ ಸೀಟ್ನಲ್ಲಿ ಕೂತಿದ್ದ ಅಮರ್ ಪ್ರಸಾದ್ ಸಾವನ್ನಪ್ಪಿದ್ದಾರೆ. ಕಾರು ಚಾಲಕ ವೇಣು ಹಾಗೂ ಮತ್ತೊರ್ವ ವೈದ್ಯೆ ಪ್ರವಳಿಕಾ ಸ್ವಲ್ಪದ್ರಲ್ಲೇ ಪಾರಾಗಿದ್ದಾರೆ.
ಇದನ್ನೂ ಓದಿ: ಅಪ್ಪನ ಕಳೇಬರ ಹೊತ್ತು ಠಾಣೆಗೆ ಬಂದ ಪೊಲೀಸ್ ಇನ್ಸ್ಪೆಕ್ಟರ್.. ಚಿಕ್ಕೋಡಿಯಲ್ಲಿ ಹೃದಯ ವಿದ್ರಾವಕ ಘಟನೆ!
ಸ್ಥಳೀಯರ ಪ್ರಕಾರ ಅತಿಯಾದ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಪ್ರವಳಿಕಾ ಕೊಟ್ಟ ದೂರಿನ ಆಧಾರದ ಮೇಲೆ ಸುಲಿಬೆಲೆ ಪೊಲೀಸ್ ಠಾಣೆಯಲ್ಲಿ ಚಾಲಕ ವೇಣು ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಮೃತ ಪ್ರಸಾದ್ ದೇಹವನ್ನ ಮರಣೋತ್ತರ ಪರೀಕ್ಷೆ ಮುಗಿಸಿ ಅವ್ರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.
ಹೆದ್ದಾರಿಯಲ್ಲಿ ಅತಿಯಾದ ವೇಗದ ಚಾಲನೆ ಮಾಡಿದ್ದು ಮೊದಲನೇ ತಪ್ಪು. ಅಂತಹದ್ರಲ್ಲಿ ಡ್ರೈವಿಂಗ್ಗಿಂತ ಹೆಚ್ಚು ಮ್ಯಾಪ್ ನೋಡಿದ್ದೇ ಈ ಅಪಘಾತಕ್ಕೆ ಕಾರಣ ಅನ್ನೋದು ತನಿಖೆಯಲ್ಲಿ ಬಯಲಾಗಿದೆ. ಇಲ್ಲಿ ಅತಿ ವೇಗದ ಚಾಲನೆ ಜೊತೆಗೆ ಮ್ಯಾಪ್ನ ಅತಿಯಾಗಿ ನೋಡಿದ್ದೇ ಜೀವಕ್ಕೆ ಕುತ್ತು ತಂದಿರೋದು ವಿಪರ್ಯಾಸ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ