ಭೀಕರ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಟಾಟಾ ಸುಮೋ.. 6 ಮಂದಿ ಸಾವು, ಇಬ್ಬರು ಗಂಭೀರ

author-image
AS Harshith
Updated On
ಭೀಕರ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಟಾಟಾ ಸುಮೋ.. 6 ಮಂದಿ ಸಾವು, ಇಬ್ಬರು ಗಂಭೀರ
Advertisment
  • ಧಾರ್ಮಿಕ ಕಾರ್ಯಕ್ರಮಕ್ಕಾಗಿ ಹೊರಟ್ಟಿದ್ದಾಗ ನಡೆದ ದುರಂತ
  • ಟಾಟಾ ಸುಮೋದಲ್ಲಿ ಮಂದಿರಕ್ಕೆ ಹೊರಟಿದ್ದ ಯಾತ್ರಾರ್ಥಿಗಳು
  • ಅಪಘಾತದಲ್ಲಿ ಆರು ಮಂದಿ ಸಾವು, ಮತ್ತಿಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಯಾತ್ರಾರ್ಥಿಗಳನ್ನ ಕರೆದುಕೊಂಡು ಹೋಗ್ತಿದ್ದ ಟಾಟಾ ಸುಮೋಗೆ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ 6 ಜನರು ಸಾವನಪ್ಪಿದ್ದಾರೆ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನ ಬಾಗ್ಡೋಗ್ರಾನ ಏಷ್ಯನ್ ಹೆದ್ದಾರಿ 2ರಲ್ಲಿ ಈ ಘಟನೆ ನಡೆದಿದೆ. ಯಾತ್ರಾರ್ಥಿಗಳ ಗುಂಪೊಂದು ಧಾರ್ಮಿಕ ಕಾರ್ಯಕ್ರಮಕ್ಕಾಗಿ ಹೊರಟ್ಟಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: ಮಳೆ ನೀರಿಗೆ ಮಗು ಸಾವು, ನದಿಗೆ ಬಿದ್ದ ಪರ್ವತದ ಒಂದು ಭಾಗ.. ಹತೋಟಿಗೆ ಬಾರದ ಪ್ರವಾಹ

ಯಾತ್ರಾರ್ಥಿಗಳು ಜಂಗ್ಲಿ ಬಾಬಾ ಮಂದಿರಕ್ಕೆ ಟಾಟಾ ಸುಮೋದಲ್ಲಿ ತೆರಳುತ್ತಿದ್ರು. ಈ ವೇಳೆ ವೇಗವಾಗಿ ಬಂದ ವಾಹನವೊಂದು ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಟಾಟಾ ಸುಮೋದಲ್ಲಿದ್ದ ಆರು ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ: ಹೊಸ ದಾಖಲೆ ಬರೆಯಲಿರೋ ಪ್ರಧಾನಿ ನರೇಂದ್ರ ಮೋದಿ ಭಾಷಣ

ಸಾವನ್ನಪ್ಪಿದ ಪ್ರಯಾಣಿಕರನ್ನು ಪ್ರಹ್ಲಾದ್ ರಾಯ್, ಗೋಬಿಂದ್ ಸಿಂಗ್, ಅಮಲೇಶ್ ಚೌಧರಿ, ಕನಕ್ ಬರ್ಮನ್, ಪ್ರಣಬ್ ರಾಯ್ ಮತ್ತು ಪದಕಾಂತ್ ರಾಯ್ ಎಂದು ಗುರುತಿಸಲಾಗಿದೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment