newsfirstkannada.com

ಭಯಾನಕವಾಗಿದೆ ಉಗ್ರ ನಜೀರ್​ ಹಿಸ್ಟರಿ; 2008ರ ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಈತ

Share :

Published July 20, 2023 at 9:14am

Update July 20, 2023 at 9:20am

    ಉಗ್ರ ಟಿ. ನಸೀರ್ ಮಾಡಿರುವ ಪ್ಲಾನ್​ ಒಂದೆರಡಲ್ಲ

    ಜೈಲಿನಲ್ಲಿದ್ದುಕೊಂಡೇ ಪ್ಲಾನ್​ ಹೆಣೆದಿದ್ದ ಶಂಕಿತ ಉಗ್ರ

    ಅಮೆರಿಕದಿಂದ ಬಂತು ಟಿ. ನಸೀರ್ ಮಾಡುತ್ತಿದ್ದ ಕಿತಾಪತಿ ಮಾಹಿತಿ

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ A1 ಆರೋಪಿ ಟಿ ನಜೀರ್ ಸಹಾಯದಿಂದಲೇ ಶಂಕಿತ ಉಗ್ರರು ಪ್ಲಾನ್​ ಹೆಣೆದಿದ್ದಾರೆ ಎಂದು ತಿಳಿದುಬಂದಿದೆ. ಅಂದಹಾಗೆಯೇ ಟಿ.ನಸೀರ್ ಇತಿಹಾಸವೇ ಭಯಾನಕವಾಗಿದ್ದು, ಈತನ ಮೇಲೆ ಸಾಲು ಸಾಲು ಪ್ರಕರಣಗಳಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ನಜೀರ್​​ ಅಲಿಯಾಸ್​​ ತಂಡಿಯಾಂತಾವಿಡೆ ಯಾರು? ಎಲ್ಲಿಯವನು?

ಟಿ. ನಜೀರ್ ಕರ್ನಾಟಕದವನಲ್ಲ. ಈತ ಕೇರಳದ ಕಣ್ಣೂರು ಮೂಲದವನು. ಈತನ ಮತ್ತೊಂದು ಹೆಸರು ಉಮ್ಮರ್​​ ಹಜಿ. ಪಿಡಿಪಿಯ ಸಂಘಟನೆಯ ಮಾಜಿ ಕಾರ್ಯಕರ್ತನು ಆಗಿದ್ದ, ಕಣ್ಣೂರಿನಲ್ಲಿ ಕಚೇರಿಯನ್ನು ಹೊಂದಿದ್ದ. ಕೇರಳದ ರಾಜಕಾರಣಿ ಅಬ್ದುಲ್​ ನಜೀರ್​ ಮದಾನಿ ಜೊತೆಗೆ ಈತನ ಸಂಪರ್ಕವಿತ್ತು. ಮಾತ್ರವಲ್ಲದೆ ಅಬ್ದುಲ್​ ನಜೀರ್​ ಮದಾನಿ ಹೆಂಡತಿ ಕೂಡ ಈತನನಿಗೆ ಸಂಪರ್ಕ ಇರುವುದು ಬೆಳಕಿಗೆ ಬಂದಿತ್ತು.

2008ರ ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣ

ಟಿ ನಜೀರ್​ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಆದರೆ ಉಗ್ರ 2008ರ ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಅಂದು ಜುಲೈ 25ರಂದು ಮಧ್ಯಾಹ್ನ 1.20 ಬೆಂಗಳೂರು ಮಡಿವಾಳ ಬಸ್​ ಡಿಪೋದಲ್ಲಿ ಬಾಂಬ್​ ಬ್ಲಾಸ್ಟ್​ ಮಾಡಿಸಿದ್ದನು. ಬಳಿಕ 2.35ಕ್ಕೆ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇಷ್ಟೆಲ್ಲಾ ಮಾಡಿದ್ದ ನಜೀರ್​ ಲಷ್ಕರ್- ಇ-ತೋಯ್ಬಾ ಸಂಘಟನೆಯ ಪ್ರಮುಖನಾಗಿದ್ದು, ದಕ್ಷಿಣ ಭಾರತದ ಕಮಾಂಡರ್‌ ಕೂಡ ಆಗಿದ್ದನು.

ಅವಳಿ ಬಾಂಬ್ ಬ್ಲಾಸ್ಟ್

ಇನ್ನು ಕೇರಳದ ಕೋಜಿಕೋಡೆಯಲ್ಲಿ ನಡೆದ ಅವಳಿ ಬಾಂಬ್ ಬ್ಲಾಸ್ಟ್​ನಲ್ಲೂ ಈತನ ಹೆಸರು ಕೇಳಿಬಂದಿತ್ತು. ಆದರೆ ಈ ಬಾಂಬ್ ಬ್ಲಾಸ್ಟ್ ಕೇಸ್‌ನಲ್ಲಿ ಖುಲಾಸೆಯಾಯ್ತು. ಇವಿಷ್ಟು ಮಾತ್ರವಲ್ಲದೆ, ಟಿ.ನಜೀರ್ ಕಾಲಮಸ್ಸಿ ಬಸ್ ಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಯಾಗಿದ್ದನು. ಈ ಪ್ರಕರಣದ ಆರೋಪ ಸಾಬೀತಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

ಉಗ್ರರ ನೇಮಕಾತಿ ಪ್ರಕರಣ

2006ರಲ್ಲಿ ಕಾಶ್ಮೀರದಲ್ಲಿ ಉಗ್ರರ ನೇಮಕಾತಿ ಪ್ರಕರಣ ಬೆಳಕಿಗೆ ಬಂದಿತ್ತು.  ಈ ಪ್ರಕರಣದಲ್ಲೂ ಟಿ.ನಜೀರ್ ಆರೋಪಿಯಾಗಿದ್ದು, ಶಿಕ್ಷೆಯಾಗಿದೆ. ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎ1 ಆರೋಪಿ ನಜೀರ್​ ಸರಣಿ ಬ್ಲಾಸ್ಟ್ ನಡೆಸಲು ಈತನ ಕೈವಾಡವಿರುವುದು ಕೇಳಿಬಂದಿದೆ.

ಈತನನ್ನು ಬಂಧಿಸಿದ್ದು ಬಾಂಗ್ಲಾದೇಶ ಪೊಲೀಸರು!

ಇಷ್ಟೆಲ್ಲಾ ಖತರ್ನಾಕ್​ ಪ್ಲಾನ್​ ಹೆಣೆದಿದ್ದ ನಜೀರ್​ನನ್ನು 2009ರಲ್ಲಿ ಬಂಧಿಸಲಾಯಿತು. ಬಾಂಗ್ಲಾದೇಶ ಪೊಲೀಸರು ಬಾಂಗ್ಲಾ ಮತ್ತು ಮಯನ್ಮಾರ್​ ಗಡಿಯಲ್ಲಿ ನವೆಂಬರ್​ ತಿಂಗಳಿನಲ್ಲಿ ಬಂಧಿಸುತ್ತಾರೆ.

ಮುಂಬೈ ದಾಳಿಗೆ ಒಂದು ವರ್ಷ ತುಂಬಿದಕ್ಕೆ ಪ್ಲಾನ್​ ಹೆಣೆದಿದ್ದ ಟಿ ನಜೀರ್​ ಬಾಂಗ್ಲಾದೇಶದಲ್ಲಿದ್ದ ಭಾರತ ಮತ್ತು ಅಮೆರಿಕ ರಾಯಭಾರಿ ಕಚೇರಿ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದ. ಆದರೆ ಇವೆಲ್ಲ ವಿಚಾರವನ್ನು ಉಗ್ರ ಡೇವಿಡ್​ ಹೇಡ್ಲಿಯನ್ನು ತನಿಖೆ ನಡೆಸಿದಾಗ ಬಾಯಿ ಬಿಟ್ಟಿದ್ದ.

ಡೇವಿಡ್​​ ಹೇಡ್ಲಿ ಅಮೆರಿಕದಲ್ಲಿ ಬಂಧನವಾದ ಲಷ್ಕರ್​​ ಆಪರೇಟರ್ ಆಗಿದ್ದನು. ಈತನನನ್ನು ಬಂಧಿಸಿದ ಅಮೆರಿಕ ಪೊಲೀಸರು ಸರಿಯಾಗಿ ಬಾಯಿ ಬಿಡಿಸಿದಾಗ ನಿಜ ಸಂಗತಿಯನ್ನು ಹೇಳಿಕೊಂಡಿದ್ದನು. ಈ ವೇಳೆ ನಜೀರ್​​ ಅಲಿಯಾಸ್​​ ತಂಡಿಯಾಂತಾವಿಡೆ ಹೆಸರು ಹೇಳಿದ್ದನು.

ನಜೀರ್​ ಬಂಧನವಾದ ಬಳಿಕ ಕೇರಳದಲ್ಲಿ ಉಗ್ರರ ಜೊತೆ ನಂಟು ಹೊಂದಿದ್ದ ಹಲವು ಮುಸ್ಲಿಂ ಯುವಕರನ್ನು ಬಂಧಿಸಲಾಯಿತು. ತನಿಖೆಗೆ ಒಳಪಡಿಸಲಾಯಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಯಾನಕವಾಗಿದೆ ಉಗ್ರ ನಜೀರ್​ ಹಿಸ್ಟರಿ; 2008ರ ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಈತ

https://newsfirstlive.com/wp-content/uploads/2023/07/Nazir-2.jpg

Load More