Advertisment

2,847 ಹುದ್ದೆಗಳಿಗೆ ನೇರ ನೇಮಕಾತಿ.. ಬೆಳಗಾವಿಯ 2 ಹಂತದ Rallyಯಲ್ಲಿ ನೀವೂ ಭಾಗಿಯಾಗಿ

author-image
Bheemappa
Updated On
2,847 ಹುದ್ದೆಗಳಿಗೆ ನೇರ ನೇಮಕಾತಿ.. ಬೆಳಗಾವಿಯ 2 ಹಂತದ Rallyಯಲ್ಲಿ ನೀವೂ ಭಾಗಿಯಾಗಿ
Advertisment
  • ಯಾವ್ಯಾವ ಜಿಲ್ಲೆಗಳಿಗೆ ಯಾವ ದಿನಾಂಕದಂದು ರ್ಯಾಲಿ?
  • ಗುಜರಾತ್, ಬಿಹಾರ್ ಸೇರಿ ವಿವಿಧ ರಾಜ್ಯಗಳಲ್ಲಿ ನೇಮಕಾತಿ
  • ಅಭ್ಯರ್ಥಿಗಳು ಈ ರ್ಯಾಲಿಯಲ್ಲಿ ಪಾಲ್ಗೊಳ್ಳುವುದು ಹೇಗೆ?

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರತೀಯ ಪ್ರಾದೇಶಿಕ ಸೇನೆಯಿಂದ (Territorial Army) ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಒಟ್ಟು 2,847 ಖಾಲಿ ಹುದ್ದೆಗಳಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಆಹ್ವಾನ ಮಾಡಿದೆ. ಪ್ರಾದೇಶಿಕ ಸೇನೆ ನಿಗದಿ ಪಡಿಸಿರುವ ದಿನಾಂಕಗಳಂದು ರ್ಯಾಲಿ ನಡೆಯಲಿದೆ. ಇದಕ್ಕೆ ಯಾವುದೇ ಅರ್ಜಿ ಹಾಕುವುದು ಬೇಡ. ಬದಲಿಗೆ ಅಭ್ಯರ್ಥಿಗಳು ಭಾರತಿ ರ್ಯಾಲಿಗೆ ಹಾಜರಾಗಬೇಕು.

Advertisment

ಇದನ್ನೂ ಓದಿ: ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳಿಗೆ ಆಹ್ವಾನ.. ₹60,000 ಸಂಬಳ, ಅರ್ಜಿಗಳು ಯಾವಾಗ ಆರಂಭ?

ಪ್ರಾದೇಶಿಕ ಸೇನೆಯು ರ್ಯಾಲಿಗಳನ್ನು ಪಂಜಾಬ್, ರಾಜಸ್ಥಾನ, ಉತ್ತರಖಂಡ್, ನವದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಅಂಡಮಾನ್ ಮತ್ತು ನಿಕೋಬಾರ್, ಒಡಿಶಾ, ಗುಜರಾತ್, ಬಿಹಾರ್ ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿಗದಿ ಪಡಿಸಲಾದ ದಿನಾಂಕಗಳಂದು ನಡೆಸಲಾಗುತ್ತದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನವೆಂಬರ್ 04 ರಿಂದ 16ರವರೆಗೆ ರ್ಯಾಲಿ ನಡೆಯಲಿದೆ. ಇನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ರ್ಯಾಲಿ ನಡೆಯಲಿದೆ. ನವೆಂಬರ್ 16 ರಂದು ದಾಖಲೆ ಪರಿಶೀಲನೆ, ಮೆಡಿಕಲ್ ಟೆಸ್ಟ್, ಟ್ರೇಡ್ ಟೆಸ್ಟ್ ಸೇರಿದಂತೆ ಪೆಂಡಿಂಗ್ ಉಳಿದ ಇತರೆ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲಾಗುತ್ತದೆ. ಕರ್ನಾಟಕದಲ್ಲಿ 2 ಹಂತದಲ್ಲಿ ರ್ಯಾಲಿ ನಡೆಸಲಾಗುತ್ತದೆ.

Advertisment

ಇದನ್ನೂ ಓದಿ: Bharti Rallyಯಲ್ಲಿ ನೇರ ನೇಮಕಾತಿ, 2 ಸಾವಿರಕ್ಕೂ ಅಧಿಕ ಹುದ್ದೆಗಳು.. 8th, SSLC, PUC ಆದವ್ರಿಗೆ ಚಾನ್ಸ್

publive-image

ನವೆಂಬರ್ 07 ರಂದು ಈ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬೇಕು

ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಚಾಮರಾಜನಗರ, ರಾಮನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ.

ನವೆಂಬರ್ 10 ರಂದು ಈ ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ

ಬಾಗಲಕೋಟೆ, ಧಾರವಾಡ, ಬೆಳಗಾವಿ, ಕಲಬುರಗಿ, ಕೊಪ್ಪಳ, ರಾಯಚೂರು, ಗದಗ, ಹಾವೇರಿ, ಬಳ್ಳಾರಿ, ಬೀದರ್, ವಿಜಯಪುರ, ವಿಜಯನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಯಾದಗಿರಿ.

Advertisment

ಕರ್ನಾಟಕದ ಬೆಳಗಾವಿಯಲ್ಲಿ ಈ ರ್ಯಾಲಿಯನ್ನು ಆಯೋಜನೆ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ವಿಳಾಸ ಈ ಕೆಳಕಂಡಂತೆ ಇದೆ.
ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಗ್ರೌಂಡ್, ಬೆಳಗಾವಿ (ಕರ್ನಾಟಕ)

ಅಭ್ಯರ್ಥಿಯ ದೈಹಿಕ ಸಾಮರ್ಥ್ಯ ಹೇಗಿರಬೇಕು?

  • ಎತ್ತರ 160 ಸೆಂಟಿ ಮೀಟರ್,
  • ಎದೆಯ ಸುತ್ತಳತೆ- 77 ರಿಂದ 82 ಸೆಂ.ಮೀ.
  • ಸ್ಪೋರ್ಟ್ಸ್​, ಮಾಜಿ ಸೈನಿಕರಿಗೆ ವಿನಾಯತಿ ಇದೆ.

ರ್ಯಾಲಿ ಕೈಗೊಳ್ಳುವ ಪ್ರತಿಯೊಂದು ಪರೀಕ್ಷೆಗೂ ಅಂಕಗಳನ್ನು ನಿಗದಿ ಮಾಡಲಾಗಿರುತ್ತದೆ. ಹೀಗಾಗಿ ಅಭ್ಯರ್ಥಿಗಳು ಪ್ರತಿಯೊಂದನ್ನು ಗಮನವಿಟ್ಟು ಮಾಡಬೇಕು. ಅಲ್ಲದೇ ರ್ಯಾಲಿಯಲ್ಲಿ ಯಾವುದೇ ಅಸಭ್ಯ ವರ್ತನೆ ತೋರಬಾರದು. ಇನ್ನು ಇತ್ತೀಚಿನ ಭಾವಚಿತ್ರ ಹಾಗೂ ಶೈಕ್ಷಣಿಕತೆಗೆ ಸಂಬಂಧಿಸಿದ ಎಲ್ಲ ದಾಖಲೆಗಳೊಂದಿಗೆ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕು.

Advertisment

ಮುಖ್ಯವಾದ ಲಿಂಕ್- https://static-cdn.publive.online/newsfirstlive-kannada/media/pdf_files/blog/wp-content/uploads/2024/10/09125310Territorial-Army-Notification-2024-PDF-Rajasthan.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment