/newsfirstlive-kannada/media/post_attachments/wp-content/uploads/2025/04/Pahalgama-terror-attack-scene-1.jpg)
ಪಹಲ್ಗಾಮ್‌ಗೆ ನುಗ್ಗಿದ ಉಗ್ರರು ನರಮೇಧ ನಡೆಸಿ 10 ದಿನಗಳೇ ಕಳೆದಿದೆ. ಆ ಪರಮ ಪಾಪಿಗಳ ಸುಳಿವು ಇನ್ನೂ ಪತ್ತೆಯಾಗಿಲ್ಲ ಅನ್ನೋ ಆಕ್ರೋಶ ಭಾರತೀಯರಲ್ಲಿ ಕುದಿಯುತ್ತಿದೆ. ಪ್ರತೀಕಾರದ ಕಿಚ್ಚು ಜ್ವಾಲಾಮುಖಿ ಆಗಿರುವಾಗಲೇ ಪಾತಕಿಗಳ ಹೆಜ್ಜೆ ಗುರುತು ಪತ್ತೆಯಾಗಿದೆ. ಕಾಶ್ಮೀರದಿಂದ ತಪ್ಪಿಸಿಕೊಂಡ ಉಗ್ರರು ಚೆನ್ನೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನರಮೇಧ ನಡೆದ ಮೇಲೆ ಗಡಿಯಲ್ಲಿ ಗುಂಡಿನ ದಾಳಿ ನಿಂತಿಲ್ಲ. ಗಡಿಯಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಇಷ್ಟಕ್ಕೆಲ್ಲಾ ಕಾರಣವಾದ ರಾಕ್ಷಸರು ಸದ್ದಿಲ್ಲದೇ ಭಾರತದ ಗಡಿಯನ್ನು ದಾಟಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಮುಗಿಸಲು ಪಕ್ಕಾ ಪ್ಲಾನ್.. 2 ಬಾರಿ ಟಾರ್ಗೆಟ್ ಮಿಸ್; ಮೂರನೇ ಬಾರಿ ಫಿನಿಶ್!
ಪಹಲ್ಗಾಮ್ ದಾಳಿಕೋರರು ಧರ್ಮದ ರಕ್ತ ಹರಿಸಿ ಕಾಶ್ಮೀರದಿಂದ ಓಡಿ ಹೋಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಭಯೋತ್ಪಾದಕರು ಚೆನ್ನೈನಿಂದ ಶ್ರೀಲಂಕಾದತ್ತ ತೆರಳಿರುವ ಸಾಧ್ಯತೆ ಇದೆ.
ಉಗ್ರರು ವಿಮಾನದ ಮೂಲಕ ಶ್ರೀಲಂಕಾಗೆ ಹೋಗಿರುವ ಶಂಕೆ ಇದ್ದು, ಶ್ರೀಲಂಕಾದ ಭಂಡಾರನಾಯಕೆ ಏರ್‌ಪೋರ್ಟ್‌ನಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಚೆನ್ನೈನಿಂದ ಕೊಲಂಬೋಗೆ ತೆರಳುವ ಶ್ರೀಲಂಕಾ ಏರ್‌ಲೈನ್ಸ್ ವಿಮಾನದಲ್ಲಿ ಹುಡುಕಾಟ ನಡೆಸಲಾಗಿದೆ.
ಚೆನ್ನೈ ವಿಮಾನದಲ್ಲಿ ಪಹಲ್ಗಾಮ್ ದಾಳಿಯ ಉಗ್ರರು ಕಾಣಿಸಿಕೊಂಡಿದ್ದಾರೆ. ಕಾಶ್ಮೀರದಿಂದ ಚೆನ್ನೈವರೆಗೂ ಆರೋಪಿಗಳು ತಲುಪಿದ್ದು ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ