newsfirstkannada.com

ರಾಮಮಂದಿರಕ್ಕೆ ಗೌರವ ಸೂಚಿಸಿದ ಹಿಂದೂ ಪರಿಷತ್.. ಅಮೆರಿಕದಲ್ಲಿ 100ಕ್ಕೂ ಹೆಚ್ಚು ಟೆಸ್ಲಾ ಕಾರುಗಳಿಂದ ಲೈಟ್​ ಶೋ

Share :

Published January 21, 2024 at 10:42am

    100ಕ್ಕೂ ಹೆಚ್ಚು ಟೆಸ್ಲಾ ಕಾರುಗಳಿಂದ ರಾಮನಿಗೆ ಗೌರವ ಸಮರ್ಪಣೆ

    ಹೇಗಿದೆ ಗೊತ್ತಾ ಡ್ರೋನ್ ಕ್ಯಾಮೆರಾದಲ್ಲಿ ಶೂಟ್ ಮಾಡಿರುವುದು..?

    ಯುಎಸ್​​ನಲ್ಲಿ ಲೈಟ್​ ಶೋಗಾಗಿ ರಾಮಭಕ್ತರನ್ನ ಆಹ್ವಾನಿಸಲಾಗಿತ್ತು

ನಾಳೆ ಅದ್ಧೂರಿಯಾಗಿ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಗೌರವ ಸೂಚಿಸಲು ಅಮೆರಿಕದ ಹಿಂದೂ ಪರಿಷತ್​ನವರು 100ಕ್ಕೂ ಹೆಚ್ಚು ಟೆಸ್ಲಾ ಕಾರುಗಳಿಂದ ರಾಮ ಎಂದು ಲೈಟ್​ ಶೋ ನಡೆಸಿದೆ. ಶ್ರೀರಾಮನಿಗೆ ಗೌರವ ನೀಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ಅಮೆರಿಕ ಹಿಂದೂ ಪರಿಷತ್ ಆಹ್ವಾನದಂತೆ​ 100ಕ್ಕೂ ಅಧಿಕ ಟೆಸ್ಲಾ ಕಾರುಗಳನ್ನು ಹೊಂದಿರುವ ರಾಮ ಭಕ್ತರು ಅಮೆರಿಕದ ಎಂಡಿ, ಫ್ರೆಡ್ರಿಕ್​ನಲ್ಲಿರುವ ಶ್ರೀ ಭಕ್ತ ಆಂಜನೇಯ ದೇವಾಲಯಕ್ಕೆ ಆಗಮಿಸಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಮುನ್ನಾದಿನವೇ ಅಮೆರಿಕದ ದೇವಾಲಯದ ಆವರಣದಲ್ಲಿ 100ಕ್ಕೂ ಅಧಿಕ ಟೆಸ್ಲಾ ಕಾರುಗಳನ್ನ ರಾಮ ಹೆಸರಿನಂತೆ ಜೋಡಿಸಿದ್ದಾರೆ. ಬಳಿಕ ಟೆಸ್ಲಾ ಕಾರುಗಳಲ್ಲಿಂದ ಲೈಟ್ ಶೋ ಮಾಡಿದ್ದು ಬಿಳಿ, ಕೆಂಪು ಬಣ್ಣದ ಲೈಟ್​ ಬ್ಲಿಂಕ್ ಮಾಡಿರುವುದು ನೋಡುಗರಿಗೆ ಮನಮೋಹಕವಾಗಿ ಕಾಣಿಸುತ್ತಿದೆ. ಇದೇ ವೇಳೆ ಜೈ ಶ್ರೀರಾಮ್​ ಎನ್ನುವ ಸಾಂಗ್ ಕೂಡ ಪ್ಲೇ ಮಾಡಿದ್ದರು ಎಂದು ತಿಳಿದು ಬರುತ್ತದೆ.

View this post on Instagram

A post shared by Siva Sottallu (@sivasottallu)

ರಾಮನ ಹೆಸರಿನಂತೆ ಕಾರುಗಳನ್ನ ನಿಲ್ಲಿಸಿ ಲೈಟ್ ಶೋ ಮಾಡಿರುವುದನ್ನು ಡ್ರೋನ್ ಕ್ಯಾಮೆರಾದ ಮೂಲಕ ಸೆರೆ ಹಿಡಿಯಲಾಗಿದೆ. ಹೀಗಾಗಿ ಈ ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಮಾಡಲಾಗಿದ್ದು ಸಾಕಷ್ಟು ಮೆಚ್ಚುಗೆ, ಲೈಕ್ಸ್​ ಬರುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಮಂದಿರಕ್ಕೆ ಗೌರವ ಸೂಚಿಸಿದ ಹಿಂದೂ ಪರಿಷತ್.. ಅಮೆರಿಕದಲ್ಲಿ 100ಕ್ಕೂ ಹೆಚ್ಚು ಟೆಸ್ಲಾ ಕಾರುಗಳಿಂದ ಲೈಟ್​ ಶೋ

https://newsfirstlive.com/wp-content/uploads/2024/01/US_RAM_TEMPLE_1.jpg

Load More