/newsfirstlive-kannada/media/post_attachments/wp-content/uploads/2023/06/Elon-Musk-Twitter.jpg)
ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳನ್ನ ಮುನ್ನಡೆಸ್ತಿರೋರು ಭಾರತೀಯರು. ಇದರ ಜೊತೆಗೆ ಹೂಡಿಕೆಗೂ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿ ಇತ್ತೀಚಿನ ದಿನಗಳಲ್ಲಿ ಉದ್ಯಮಿಗಳನ್ನೂ ಆಕರ್ಷಿಸುತ್ತಿದೆ. ಈಗ ಅಮೆರಿಕಾ ಸರ್ಕಾರದಲ್ಲಿ ಸಚಿವರಾಗಿರುವ, ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ, ಯಶಸ್ವಿ ಉದ್ಯಮಿ ಎಲಾನ್ ಮಸ್ಕ್ನ ಸರದಿ. ಎಲಾನ್ ಮಸ್ಕ್ ಭಾರತಕ್ಕೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಇತ್ತೀಚಿಗೆ ಪ್ರಧಾನಿ ಮೋದಿ ಭೇಟಿಯಾದ ಬಳಿಕ ಟೆಸ್ಲಾ ಸಂಸ್ಥೆ ಭಾರತದಲ್ಲಿ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ತಮ್ಮ ಅಮೆರಿಕಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಎಲಾನ್ ಮಸ್ಕ್ ಹಾಗೂ ಅವರ ಕುಟುಂಬವನ್ನ ಭೇಟಿಯಾಗಿದ್ರು. ಈ ವೇಳೆ ಇಬ್ಬರು ನಾಯಕರ ನಡುವೆ ಬಹು ದೀರ್ಘ ಚರ್ಚೆಯೂ ನಡೆದಿತ್ತು. ಇದರ ಬೆನ್ನಲ್ಲೇ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಸಂಸ್ಥೆ ಭಾರತದಲ್ಲಿ ನೇಮಕಾತಿ ಶುರು ಮಾಡಿದೆ. ಭಾರತದಲ್ಲಿ 3 ಉತ್ಪಾದನಾ ಘಟಕಗಳನ್ನ ತೆರೆಯೋದಕ್ಕೆ ಟೆಸ್ಲಾ ಮುಂದಾಗಿದೆ. ಗುಜರಾತ್ ಹಾಗೂ ಹೈದರಾಬಾದ್ನಲ್ಲಿ ಒಂದೊಂದು ಘಟಕಗಳನ್ನ ಸ್ಥಾಪಿಸಲಿದ್ದು, ಇನ್ನೊಂದು ಘಟಕದ ಸ್ಥಾಪನೆಗೆ ಇನ್ನೂ ಸ್ಥಳದ ಹುಡುಕಾಟದಲ್ಲಿದೆ. ಈಗಾಗಲೇ ನೇಮಕಾತಿಗಾಗಿ ಅರ್ಜಿಗಳನ್ನ ಆಹ್ವಾನಿಸಲಾಗಿದ್ದು, ಉದ್ಯೋಗಗಳನ್ನ ಹುಡುಕುವ ಜಾಲ ತಾಣ ಲಿಂಕ್ಡ್ ಇನ್ನಲ್ಲಿ ಜಾಬ್ ಪೋಸ್ಟ್ ಮಾಡಿದೆ.
ಇದನ್ನೂ ಓದಿ: Tulasi Gabbard: ಅಮೆರಿಕ ಗುಪ್ತಚರ ಇಲಾಖೆಯ ನೂತನ ಮುಖ್ಯಸ್ಥೆ.. ಹಿಂದೂ ಹೆಸರಿನ ಮಹಿಳೆಯ ಹಿಂದಿನ ಕಥೆಯೇನು?
ಟೆಸ್ಲಾದ ಇ.ವಿ. ಕಾರುಗಳ ಉತ್ಪಾದನಾ ಘಟಕಗಳನ್ನ ಭಾರತದಲ್ಲಿ ಸ್ಥಾಪಿಸೋದಕ್ಕೆ ಟೆಸ್ಲಾ ಸಂಸ್ಥೆ ಸಿದ್ಧತೆ ನಡೆಸಿದೆ. ಈ ಹಿಂದೆಯೇ ಭಾರತಕ್ಕೆ ಬರಲು ಟೆಸ್ಲಾ ಸಂಸ್ಥೆ ಸಜ್ಜಾಗಿತ್ತು. ಆದ್ರೆ, ಭಾರತದಲ್ಲಿ ಆಮದು ಸುಂಕ ಹೆಚ್ಚಾಗಿದ್ದರ ಕಾರಣದಿಂದಾಗಿ ಹಿಂದೇಟು ಹಾಕಿತ್ತು. ಪ್ರಧಾನಿ ಮೋದಿಯ ಅಮೆರಿಕಾ ಪ್ರವಾಸದ ವೇಳೆ ಎಲಾನ್ ಮಸ್ಕ್ ಜೊತೆ ಮಾತುಕತೆ ನಡೆದಿದೆ.
ಈಗಾಗಲೇ ಭಾರತ ಸರ್ಕಾರ ಕೂಡ ಇಂಪೋರ್ಟ್ ಡ್ಯೂಟಿ ಬಗ್ಗೆ ತನ್ನ ನಿಲುವನ್ನ ಸ್ವಲ್ಪ ಸಾಫ್ಟ್ ಮಾಡಿಕೊಂಡಿದ್ದು, ಕೇಂದ್ರ ಬಜೆಟ್ನಲ್ಲಿ 40 ಸಾವಿರ ಡಾಲರ್ಗಿಂತ ಹೆಚ್ಚಿನ ಬೆಲೆಯನ್ನ ಹೊಂದಿರುವ ಹೈ ಎಂಡ್ ಇ.ವಿ.ಗಳ ಮೇಲಿನ ಕಸ್ಟಮ್ ಡ್ಯೂಟಿಯನ್ನ ಶೇಕಡ 110ರಿಂದ ಶೇಕಡ 70ಕ್ಕೆ ಇಳಿಸಿದೆ. ಇದಕ್ಕೆ ಭಾರತದಲ್ಲೇ ಉತ್ಪಾದನಾ ಘಟಕಗಳನ್ನ ಸ್ಥಾಪಿಸಿ ದೀರ್ಘ ಕಾಲ ಹೂಡಿಕೆ ಮಾಡಬೇಕು ಅನ್ನೋ ಷರತ್ತು ಕೂಡ ಇದೆ. ಜೊತೆಗೆ ಭಾರತದಲ್ಲೇ 41.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿ, ತಯಾರಿಕಾ ಘಟಕ ಸ್ಥಾಪನೆ ಮಾಡಿದ್ರೆ, ಆಮದು ಸುಂಕ ಕಡಿತಗೊಳಿಸೋದಾಗಿ ಸರ್ಕಾರ ಆಫರ್ ನೀಡಿದೆ. ಇದೇ ಕಾರಣಕ್ಕೆ ಈಗ ಭಾರತದಲ್ಲಿ ಟೆಸ್ಲಾ ಸಂಸ್ಥೆಯ ಘಟಕಗಳನ್ನ ತೆರೆಯೋ ಕಾರ್ಯಕ್ಕೆ ವೇಗ ಸಿಕ್ಕಿದೆ ಎನ್ನಲಾಗ್ತಿದೆ.
ಇದೇ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆಯೂ ಚುರುಕು ಪಡೆದಿದ್ದು, ಯಾವ್ಯಾವ ಹುದ್ದೆಗಳಿಗೆ ಆಹ್ವಾನ ನೀಡಲಾಗಿದೆ ಅಂತ ನೋಡೋದಾದ್ರೆ,
1. ಸರ್ವೀಸ್ ಅಡ್ವೈಸರ್
2. ಪಾರ್ಟ್ಸ್ ಅಡ್ವೈಸರ್
3. ಸರ್ವೀಸ್ ಟೆಕ್ನೀಷಿಯನ್
4. ಸರ್ವೀಸ್ ಮ್ಯಾನೇಜರ್
5. ಟೆಸ್ಲಾ ಅಡ್ವೈಸರ್
6. ಸ್ಟೋರ್ ಮ್ಯಾನೇಜರ್
7. ಬ್ಯುಸಿನೆಸ್ ಆಪರೇಷನ್ ಅನಾಲಿಸ್ಟ್
8. ಕಸ್ಟಮರ್ ಸಪೋರ್ಟ್ ಸೂಪರ್ವೈಸರ್
9. ಕಸ್ಟಮರ್ ಸಪೋರ್ಟ್ ಸ್ಪೆಷಲಿಸ್ಟ್
10. ಡೆಲಿವರಿ ಆಪರೇಷನ್ಸ್ ಸ್ಪೆಷಲಿಸ್ಟ್
11. ಆರ್ಡರ್ ಆಪರೇಷನ್ಸ್ ಸ್ಪೆಷಲಿಸ್ಟ್
12. ಇನ್ಸೈಡ್ ಸೇಲ್ಸ್ ಅಡ್ವೈಸರ್
13. ಕನ್ಸ್ಯೂಮರ್ ಎಂಗೇಜ್ಮೆಂಟ್ ಮ್ಯಾನೇಜರ್
ಹೀಗೆ ಕಸ್ಟಮರ್ ಫೇಸಿಂಗ್ ಮತ್ತು ಬ್ಯಾಕ್ ಎಂಡ್ ಜಾಬ್ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರ ಜೊತೆಗೇ 5 ಪ್ರಮುಖ ಹುದ್ದೆಗಳಿಗೂ ನೇಮಕಾತಿ ನಡೆಯಲಿದೆ ಅನ್ನೋ ಮಾಹಿತಿ ಸಿಕ್ಕಿದೆ. ಚೀನಾಕ್ಕೆ ಹೋಲಿಕೆ ಮಾಡಿದ್ರೆ, ಭಾರತದಲ್ಲಿ ಇ.ವಿ. ಕಾರುಗಳು ಮಾರಾಟವಾಗಿರೋದು ತೀರಾ ಕಡಿಮೆ. ಆದ್ರೂ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಾರುಕಟ್ಟೆ ಸ್ಥಾಪನೆಯಾಗುವ ವಿಶ್ವಾಸವನ್ನ ಟೆಸ್ಲಾ ಸಂಸ್ಥೆ ಹೊಂದಿದೆ.
ಇದೊಂದೇ ಅಲ್ಲದೆ, ಸದ್ಯ ಡಿಸೆಂಬರ್ ಮಧ್ಯದಿಂದ ಟೆಸ್ಲಾ ಸಂಸ್ಥೆಯ ಷೇರುಗಳ ಮೌಲ್ಯ ಶೇಕಡ 25ರಷ್ಟು ಕಡಿಮೆಯಾಗಿದೆ. ಜಾಗತಿಕವಾಗಿ ತನ್ನ ಲಾಭದಲ್ಲೂ ಟೆಸ್ಲಾ ಇಳಿಕೆಯನ್ನ ಕಾಣುತ್ತಿದೆ. ಜರ್ಮನಿಯಲ್ಲೂ ಟೆಸ್ಲಾ ಕಾರುಗಳ ಡಿಮ್ಯಾಂಡ್ ಕಡಿಮೆ ಆಗಿದೆಯಂತೆ. ಜೊತೆಗೆ ಚೀನಾದಲ್ಲೂ ಟೆಸ್ಲಾ ಕಾರುಗಳಿಗೆ ಸ್ಥಳೀಯ ಕಂಪನಿಗಳೇ ಠಕ್ಕರ್ ಕೊಡ್ತಿದ್ದು, ಸಾಕಷ್ಟು ಇನ್ಸೆಂಟಿವ್ಗಳನ್ನ ಘೋಷಿಸಿದ್ರೂ ಟೆಸ್ಲಾ ಕಾರುಗಳ ಮೇಲೆ ಚೀನಾ ಜನರ ಮೋಜು ಕಡಿಮೆಯಾಗ್ತಿದೆ ಅನ್ನೋ ವಾದವೂ ಇದೆ. ಸ್ವೀಡನ್, ನಾರ್ವೆನಲ್ಲೂ ಮಾರ್ಕೆಟ್ ಡೌನ್ ಇದೆ. ಲಾಭದಲ್ಲೇ ಇದ್ರೂ ಟೆಸ್ಲಾ ಸಂಸ್ಥೆ ತನ್ನ ನಾಲ್ಕನೇ ತ್ರೈಮಾಸಿಕದಲ್ಲಿ ಘೋಷಿಸಿರುವ ಲಾಭದಲ್ಲಿ ಶೇಕಡ 71ರಷ್ಟು ಇಳಿಕೆಯನ್ನ ಕಂಡಿದೆ.
ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾದ ಟೆಸ್ಲಾ; ಮೋದಿ-ಮಸ್ಕ್ ಭೇಟಿಯ ನಂತರ ಮಹತ್ವದ ಬೆಳವಣಿಗೆ
ಇದೆಲ್ಲಾ ಕಾರಣಗಳಿಗಾಗಿಯೇ 4 ವರ್ಷಗಳ ಹಿಂದೆಯೇ ಟೆಸ್ಲಾ, ತನ್ನ ಸಂಸ್ಥೆಯನ್ನ ನೊಂದಾಯಿಸಿದ್ರೂ ಈಗ ಭಾರತಕ್ಕೆ ಬರಲು ಸಿದ್ಧತೆಯನ್ನ ನಡೆಸ್ತಿರೋದು. ಇತ್ತ ಭಾರತ ಸರ್ಕಾರವೂ ಕ್ಲೀನ್ ಎನರ್ಜಿ ಬಗ್ಗೆ ಕಾಳಜಿ ವಹಿಸಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ ಇನ್ಸೆಂಟಿವ್ ಕೊಡುತ್ತೆ. ಬ್ಯುಸಿನೆಸ್ ಌಂಗಲ್ನಲ್ಲಿ ಎಲ್ಲವನ್ನೂ ಅಳೆದು ತೂಗಿಯೇ ಟೆಸ್ಲಾ ಸಂಸ್ಥೆ ಭಾರತಕ್ಕೆ ಎಂಟ್ರಿ ಕೊಡ್ತಿದ್ದು, ಅಂದುಕೊಂಡಂತೆ 3 ಘಟಕಗಳನ್ನ ಇಲ್ಲಿ ಸ್ಥಾಪಿಸಿದಲ್ಲಿ, ಸಾವಿರಾರು ಉದ್ಯೋಗ ಸೃಷ್ಟಿಯೂ ಆಗೋದ್ರಲ್ಲಿ ಅನುಮಾನವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ