ಟೆಸ್ಲಾ ಕಂಪನಿಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದಿಸುವ ಆಸಕ್ತಿ ಇಲ್ಲ; ಹೆಚ್‌.ಡಿ ಕುಮಾರಸ್ವಾಮಿ

author-image
admin
Updated On
ಟೆಸ್ಲಾ ಕಂಪನಿಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದಿಸುವ ಆಸಕ್ತಿ ಇಲ್ಲ; ಹೆಚ್‌.ಡಿ ಕುಮಾರಸ್ವಾಮಿ
Advertisment
  • ವಿಶ್ವದ ಶ್ರೀಮಂತ ಉದ್ಯಮಿ, ಡೊನಾಲ್ಡ್ ಟ್ರಂಪ್ ಆಪ್ತ ಎಲಾನ್ ಮಸ್ಕ್!
  • ದೆಹಲಿಯಲ್ಲಿ ಕೇಂದ್ರ ಭಾರಿ ಕೈಗಾರಿಕೆ ಖಾತೆ ಸಚಿವ ಎಚ್‌.ಡಿ ಕುಮಾರಸ್ವಾಮಿ
  • ಭಾರತದಲ್ಲಿ ತನ್ನ ಕಾರುಗಳ ಶೋ ರೂಮು ತೆರೆಯಲು ಮಾತ್ರ ಆಸಕ್ತಿ

ನವದೆಹಲಿ: ವಿಶ್ವದ ಶ್ರೀಮಂತ ಉದ್ಯಮಿ, ಡೊನಾಲ್ಡ್ ಟ್ರಂಪ್ ಆಪ್ತ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದಿಸುವ ಆಸಕ್ತಿ ಇಲ್ಲ ಎಂದು ಕೇಂದ್ರದ ಭಾರಿ ಕೈಗಾರಿಕೆ ಖಾತೆ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರು ಟೆಸ್ಲಾ ಕಂಪನಿಯ ಪ್ರತಿನಿಧಿ ಮೊದಲ ಸುತ್ತಿನ ಸಭೆಯಲ್ಲಿ ಭಾಗಿಯಾಗಿದ್ದರು. ಆದರೆ ಎಲೆಕ್ಟ್ರಿಕ್ ಕಾರು ಉತ್ಪಾದನೆಯ 2 ಮತ್ತು 3ನೇ ಸುತ್ತಿನ ಸಭೆಯಲ್ಲಿ ಭಾಗಿಯಾಗಿಲ್ಲ. ಟೆಸ್ಲಾ ಕಂಪನಿಯು ಭಾರತದಲ್ಲಿ ತನ್ನ ಕಾರುಗಳ ಶೋ ರೂಮು ತೆರೆಯಲು ಮಾತ್ರ ಆಸಕ್ತಿ ಹೊಂದಿದೆ ಎಂದಿದ್ದಾರೆ.

publive-image

ಭಾರತದಲ್ಲಿ ಟೆಸ್ಲಾ ಕಾರು ಉತ್ಪಾದಿಸಿದರೆ ಅದು ಅಮೆರಿಕಾಕ್ಕೆ ಅನ್ಯಾಯ ಆಗುತ್ತೆ ಎಂದು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದರು. ಹೀಗಾಗಿ ಭಾರತದಲ್ಲಿ ಕಾರು ಉತ್ಪಾದಿಸದೇ ಇರಲು ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ: ರಷ್ಯಾದ ಮೇಲೆ ದಾಳಿ.. 117 ಡ್ರೋನ್‌ಗಳನ್ನು ಉಕ್ರೇನ್‌ ತಯಾರಿಸಿದ್ದು ಎಲ್ಲಿ? ಹೇಗೆ? ರೋಚಕ ಸ್ಟೋರಿ 

publive-image

ಅಮೆರಿಕಾ ಬೇರೆ ದೇಶಗಳಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದಿಸಿ ಭಾರತಕ್ಕೆ ರಫ್ತು ಮಾಡುವ ಸಾಧ್ಯತೆ ಇದೆ. ಹೀಗಾಗಿ ಭಾರತದಲ್ಲಿ ಟೆಸ್ಲಾ ಕಾರು ಉತ್ಪಾದಿಸಲ್ಲ. ಬರೀ ಭಾರತದ ಶೋರೂಮುಗಳಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ನಿರ್ಧಾರ ಎಂಬುದು ದೃಢವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment