/newsfirstlive-kannada/media/post_attachments/wp-content/uploads/2025/07/Tesla_showroom_2.jpg)
ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಭಾರತಕ್ಕೆ ಯಾವಾಗ ಬರುತ್ತೆ ಎಂಬ ಕುತೂಹಲದ ಪ್ರಶ್ನೆಗೆ ಕೊನೆಗೂ ತೆರೆ ಬಿದ್ದಿದೆ. ಟೆಸ್ಲಾ ಎಲೆಕ್ಟ್ರಿಕ್ ಕಾರ್ ಭಾರತಕ್ಕೆ ಕೊನೆಗೂ ಎಂಟ್ರಿ ಕೊಟ್ಟಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇಂದು ಟೆಸ್ಲಾ ಎಲೆಕ್ಟ್ರಿಕ್ ಕಾರ್ ಷೋರೂಮು ಉದ್ಘಾಟನೆಯಾಗಿದೆ. ಇಂದಿನಿಂದಲೇ ಕಾರ್ ಪ್ರಿಯರು ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನು ಬುಕ್ ಮಾಡಿ ಖರೀದಿ ಮಾಡಬಹುದು. ದೆಹಲಿ ಮತ್ತು ಮುಂಬೈನಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಷೋರೂಮು ತೆರೆಯಲು ಟೆಸ್ಲಾ ಕಂಪನಿಯು ನಿರ್ಧರಿಸಿದೆ.
ಭಾರತದಲ್ಲಿ ಈಗ ಪ್ರಾರಂಭದಲ್ಲಿ ಟೆಸ್ಲಾ ಮಾಡೆಲ್ ವೈ ಎಲೆಕ್ಟ್ರಿಕ್ ಕಾರುಗಳನ್ನು ಟೆಸ್ಲಾ ಗ್ರಾಹಕರಿಗೆ ಮಾರಾಟ ಮಾಡಲಿದೆ. ಟೆಸ್ಲಾ ವೈ ಬ್ರ್ಯಾಂಡ್ ಕಾರ್, ರೀಯರ್ ವೀಲ್ಹ್ ಡ್ರೈವ್ ಮತ್ತು ಲಾಂಗ್ ರೇಂಜ್ ರೀಯಲ್ ವೀಲ್ಹ್ ಡ್ರೈವ್ ವೇರಿಯೆಂಟ್​ಗಳನ್ನು ಭಾರತದಲ್ಲಿ ಈಗ ಮಾರಾಟ ಮಾಡಲಾಗುತ್ತಿದೆ. ರೀಯಲ್ ವೀಲ್ಹ್ ಡ್ರೈವ್ ವೇರಿಯೆಂಟ್ ಕಾರುಗಳು ಪ್ರಾರಂಭಿಕ 59.89 ಲಕ್ಷ ರೂಪಾಯಿ. ಲಾಂಗ್ ರೇಂಜ್ ವರ್ಸನ್ ಕಾರುಗಳ ಬೆಲೆ 67.89 ಲಕ್ಷ ರೂಪಾಯಿ. ಇವು ಎಕ್ಸ್ ಷೋರೂಮು ಬೆಲೆಗಳು.
ಕಾರಿನ ಬೆಲೆ ಬಲು ದುಬಾರಿ
ಇನ್ನೂ ಟೆಸ್ಲಾ ಮಾಡೆಲ್ ವೈ ಕಾರುಗಳ ಆನ್ ರೋಡ್ ಬೆಲೆ ರೀಯರ್ ವೀಲ್ಹ್ ಡ್ರೈವ್ ವೇರಿಯೆಂಟ್​ಗೆ 61.07 ಲಕ್ಷ ರೂಪಾಯಿ ಆಗಲಿದೆ. ಇನ್ನೂ ಲಾಂಗ್ ರೇಂಜ್ ವರ್ಷನ್​ಗೆ 69.15 ಲಕ್ಷ ರೂಪಾಯಿ ಆಗಲಿದೆ. ಇದರಲ್ಲಿ ಆಡಳಿತಾತ್ಮಕ ಹಾಗೂ ಸರ್ವೀಸ್ ಶುಲ್ಕವೂ ಸೇರಿದೆ. ಟೆಸ್ಲಾ ಮಾಡೆಲ್ ವೈ ಕಾರ್ ಖರೀದಿಗೆ ಶೇ.18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತೆ ಎಂದು ಕಂಪನಿಯ ವೆಬ್ ಸೈಟ್ ಹೇಳಿದೆ. ಟೆಸ್ಲಾ ಮಾಡೆಲ್ ವೈ ನಲ್ಲಿ ಕಸ್ಟಮೈಸ್ ಆಪ್ಷನ್ ಕೂಡ ಗ್ರಾಹಕರಿಗೆ ಲಭ್ಯವಿದೆ. ಜೊತೆಗೆ ಕೆಲ ಪಾರ್ಟ್ಸ್​​​ಗಳ ಆ್ಯಡ್ ಆನ್ ಅವಕಾಶವೂ ಇದೆ. ಇದರಿಂದ ಕಾರು ಆನ್ ರೋಡ್ ಬೆಲೆ ಮತ್ತಷ್ಟು ಹೆಚ್ಚಾಗಬಹುದು. ಉದಾಹರಣೆಗೆ ಫುಲ್ ಸೆಲ್ಪ್ ಡ್ರೈವಿಂಗ್ ಅನ್ನು ಆ್ಯಡ್ ಆನ್ ಆಗಿ ಪಡೆದರೇ, ಗ್ರಾಹಕರು 6 ಲಕ್ಷ ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತೆ.
ಟೆಸ್ಲಾ ಮಾಡೆಲ್ ವೈ, ಅಮೆರಿಕಾದಲ್ಲಿ 44,990 ಡಾಲರ್ ಬೆಲೆ ಹೊಂದಿದೆ. ಅಂದರೇ, ಭಾರತದಲ್ಲಿ 38.63 ಲಕ್ಷ ರೂಪಾಯಿ ಆಗುತ್ತೆ. ಚೀನಾದಲ್ಲಿ 31.57 ಲಕ್ಷ ರೂಪಾಯಿ ಆಗುತ್ತೆ. ಜರ್ಮನ್ ನಲ್ಲಿ 46.09 ಲಕ್ಷ ರೂಪಾಯಿ ಆಗುತ್ತೆ. ಆದರೇ, ಭಾರತದಲ್ಲಿ ವಿದೇಶದಲ್ಲಿ ಕಾರು ಉತ್ಪಾದನೆ ಮಾಡಿ, ಭಾರತಕ್ಕೆ ಅಮದು ಮಾಡಿಕೊಂಡು ಅವುಗಳ ಸಾಗಣೆ ವೆಚ್ಚವೂ ಸೇರಿ ಟೆಸ್ಲಾ ಮಾಡೆಲ್ ವೈ ಬೆಲೆ 59.89 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.
ಇದನ್ನೂ ಓದಿ: ಗಗನಯಾನಿ ಶುಭಾಂಶು ಶುಕ್ಲಾ ಅವರು ಭೂಮಿಗೆ ಇಳಿಯುತ್ತಿದ್ದಂತೆ ತಾಯಿ ಕಣ್ಣೀರು..!
60 kwh ಬ್ಯಾಟರಿ ಚಾರ್ಜ್​, 500 ಕಿಮೀ ಪ್ರಯಾಣ
ಟೆಸ್ಲಾ ಮಾಡೆಲ್ ವೈ ರಿಯರ್ ವೀಲ್ಹ್ ಡ್ರೈವ್ ವೇರಿಯೆಂಟ್ ಭಾರತದಲ್ಲಿ 60 kwh ಮತ್ತು 75 kwh ಬ್ಯಾಟರಿ ಪ್ಯಾಕ್​ಗಳಲ್ಲಿ ಲಭ್ಯವಿದೆ. ರೀಯರ್ ವೀಲ್ಹ್ ವೇರಿಯೆಂಟ್ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, 295 ಎಚ್‌ಪಿ ಪವರ್ ಪ್ರೊಡ್ಯೂಸ್ ಮಾಡಲಿದೆ. ಇನ್ನೂ 60 kwh ಬ್ಯಾಟರಿ, ಒಮ್ಮೆ ಚಾರ್ಜ್ ಮಾಡಿದರೇ, 500 ಕಿಲೋಮೀಟರ್ ವರೆಗೂ ಸಂಚಾರ ಮಾಡಬಹುದಾಗಿದೆ. ಲಾಂಗ್ ರೇಂಜ್ ವೇರಿಯೆಂಟ್​​ನಲ್ಲಿ ಒಮ್ಮೆ ಎಲೆಕ್ಟ್ರಿಕ್ ಚಾರ್ಜ್ ಮಾಡಿದರೇ, ಬರೋಬ್ಬರಿ 622 ಕಿಮೀ ಸಂಚಾರ ಮಾಡಬಹುದು. ಅಂದರೇ, ಬೆಂಗಳೂರಿನಿಂದ ಮಂಗಳೂರಿಗೆ ಹೋಗಿ ವಾಪಸ್ ಬರಬಹುದು.
ಟೆಸ್ಲಾ ಮಾಡೆಲ್ ವೈ ಕಾರು ಭಾರತದಲ್ಲಿ 7 ಬಣ್ಣಗಳಲ್ಲಿ ಲಭ್ಯವಿದೆ. 2 ಇಂಟೀರಿಯರ್ ಟ್ರಿಮ್ಸ್​ಗಳಲ್ಲಿ ಮಾರಾಟಕ್ಕೆ ಲಭ್ಯ ಇದೆ. ಕಾರ್ ನಲ್ಲಿ 15.4 ಇಂಚು ಇನ್ಪೋಟೈನ್ ಮೆಂಟ್ ಡಿಸ್​​ಪ್ಲೇ, 7 ಇಂಚು ರೀರ್ ಸ್ಕ್ರೀನ್, ಪವರ್ ಅಡ್ಜಸ್ಟಬಲ್ ಫ್ರಂಟ್ ಸೀಟ್​ಗಳು, ಡ್ಯೂಯಲ್ ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಫಿಕ್ಸಡ್ ಗ್ಲಾಸ್ ರೂಫ್, ಪವರ್ ರೀಯರ್ ಲಿಫ್ಟ್ ಗೇಟ್ ಹಾಗೂ 19 ಇಂಚು ಕ್ರಾಸ್ ಪ್ಲೋ ವೀಲ್ಹ್ ಗಳಲ್ಲಿ ಟೆಸ್ಲಾ ಮಾಡೆಲ್ ವೈ ಕಾರ್ ಮಾರಾಟವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ